ಪೌಷ್ಠಿಕ ಆಹಾರ ಕಾರ್ಯಕ್ರಮ

ಚನ್ನಮ್ಮನ ಕಿತ್ತೂರು,ಸೆ 11: ತಾಲೂಕಿನ ಕಾದ್ರೋಳ್ಳಿ ವಲಯದ ಹೊಸಕಾದ್ರೋಳ್ಳಿ ಕಾರ್ಯಕ್ರೇತ್ರದ ಗೌರಿ-ಗಣೇಶ ಜ್ಞಾನ ವಿಕಾಸ ಕೇಂದ್ರದ ಪೌಷ್ಠಿಕ ಆಹಾರ ಕಾರ್ಯಕ್ರಮವು ಕಲ್ಮೇಶ್ವರ ದೇವಸ್ಥಾನದಲ್ಲಿ ಜರುಗಿತು.


ಗ್ರಾಪಂ ಮಾಜಿ ಅಧ್ಯಕ್ಷ ನಾಗಪ್ಪ ಕಳಸಣ್ಣವರ, ಕೇಂದ್ರ ಅಧ್ಯಕ್ಷೆ ಗೌರವ್ವ ಹಾಗೂ ಬಾಬಾ ಹೊಸಮನಿ, ಚನ್ನಪ್ಪ ಕಳಸನ್ನವರ, ರಾಜು ಗಾಣಿಗೇರ, ಪೌಷ್ಠಿಕ ಆಹಾರ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು.
ಕ್ರಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ವಲಯ ಮೇಲ್ವಿಚಾರಕಿ ನಾಗರತ್ನಾ ಅವರು ಕ್ಷೇತ್ರದ ಹಿನ್ನೆಲೆ ಹಾಗೂ ವಿಜ್ಞಾನ ವಿಕಾಸ ಕುರಿತು ತಿಳಿಹೇಳಿದರು.


ಸಂಪನ್ಮೂಲ ವ್ಯಕ್ತಿ ಬಾಲಾಜಿ ಆಸ್ಪತ್ರೆ ಕಾದ್ರೋಳ್ಳಿ ಡಾ. ಅರುಣ ಹಾಲಗಿ ಪೌಷ್ಠಿಕ ಆಹಾರದಿಂದಾಗುವ ಪರಿಣಾಮ ಹಾಗೂ ಆರೋಗ್ಯ ರಕ್ಷಣಾ ಕಾರ್ಡ ಮೂಲಕ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಪೌಷ್ಠಿಕ ಆಹಾರ ಪರಿಶೀಲಿಸಿ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ನಾಗರತ್ನಾ, ತಾಲೂಕಿನ ಜ್ಞಾನ-ವಿಕಸ ಸಮನ್ವಯ ಅಧಿಕಾರಿಗಳಾದ ಸವಿತಾ, ಸೇವಾ ಪ್ರತಿನಿಧಿ ಅನ್ನಪೂರ್ಣಾ, ಕೇಂದ್ರ ಸದಸ್ಯರು ಸೇರಿದಂತೆ ಸಾರ್ವಜನಿಕರು ಇನ್ನಿತರರಿದ್ದರು.