
ಬೀದರ:ಇಂದು ಪರಿಸರ ವೈಪರೀತ್ಯ ದಿಂದಾಗಿ ಅನೇಕ ಸಂದಿಗ್ಧ ಸಂಕಷ್ಟಗಳು ಎದುರಿಸ ಬೇಕಾಗಿದೆ. ಗಿಡ ಮರ ಬೆಳೆಸಿ ಉಳಿಸುವ ಜವಾಬ್ದಾರಿ ನಮ್ಮದೆಂದು ಡಾ ಟೋಕರೆ ಶಿವಶಂಕರ ನುಡಿದರು.
ಹೊಕ್ರಾಣಾ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ವಚನ ಚಾರಿಟೇಬಲ್ ಸೊಸೈಟಿ ಸಹಯೋಗದೊಂದಿಗೆ ಇಂದು ಶಾಲೆಯ ಆವರಣದಲ್ಲಿ ಸಸಿಗಳು ನೆಟ್ಟು ವಚನ ಚಾರಿಟೇಬಲ್ ಸೊಸೈಟಿ ಅಧ್ಯಕ್ಷರಾದ ಡಾ ಶಿವಶಂಕರ ಟೋಕರೆ ಮಕ್ಕಳಲ್ಲಿ ಶಿಕ್ಷಣ ಜೊತೆಗೆ ಪರಿಸರ ಕಾಪಾಡುವ ಪರಿಕಲ್ಪನೆ ಒಡಮೂಡಿಸಿ ಜಾಗೃತಿ ಮಾಡುವ ಕೆಲಸ ಶಿಕ್ಷಕರದ್ದಾಗಿದೆ. ಗಿಡ ಮರಗಳು ಕಡಿಮೆಯಾಗಿ ಬಿಸಿಲಿನ ಬೇಗೆಯಿಂದ ತತ್ತರಿಸಲಾಗುತ್ತಿದೆ. ಕರೋನಾ ಕಂಟಕದಲ್ಲಿ ಆಮ್ಲಜನಕ ಕೊರತೆಯಿಂದ ಅನೇಕರು ಪ್ರಾಣ ಕೂಡ ಕಳೆದು ಕೊಂಡಿದ್ದು ನಮ್ಮ ಕಣ್ಮುಂದೆ ಇದೆ. ಹೀಗಾಗಿ ಶಾಲೆ ಆವರಣ ಪರಿಸರದಿಂದ ಕೂಡಿದರೆ ಒಳ್ಳೆ ಅಲ್ಹಾದಕರ ವಾತಾವರಣ ನಿರ್ಮಾಣವಾಗುತ್ತದೆಂದು ನುಡಿದರು.
ಮುಖ್ಯ ಅತಿಥಿಗಳಾದ ವಚನ ಸಮೂಹ ಸಂಸ್ಥೆಯ ನಿರ್ದೇಶಕರು ಕೃಷಿ ವಿಜ್ಜಾನಿ ಡಾ ಸಿ ಆರ್ ಕೊಂಡಾ ಮಾತನಾಡುತ್ತ 16000 ಗಿಡ ನೆಡುವ ಸಂಕಲ್ಪ ನಮ್ಮ ವಚನ ಸಮೂಹ ಸಂಸ್ಥೆ ಮಾಡಿದೆ. ನಾವು ಇಂದು ತೆಗ್ಗು ತೋಡಿ ಗಿಡ ನೆಟ್ಟು ಅದನ್ನು ಬೆಳೆಸುವ ಜವಾಬ್ದಾರಿ ನೀಡಲು ಬಂದಿದ್ದಾಗ ಶಿಕ್ಷಕ ಬಳಗ ಸ್ಪಂದಿಸಿದ್ದು ಮರೆಯಲಾರದ ಘಟನೆ. ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಎಲ್ಲ ಮಕ್ಕಳಿಗೆ ಶಿಕ್ಷಣ ಕಲಿಯುದರ ಜೊತೆಗೆ ಗಿಡ ಮರ ಬೆಳೆಸಲು ಪ್ರೇರಣೆ ನೀಡಲು ಮನವಿ ಮಾಡಿದರು.
ವೇದಿಕೆ ಮೇಲೆ ನಾವದಗೇರಿ ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಕಮಲಾಕರ ಪಂಚಾಳ, ನಿವೃತ್ತ ಪ್ರಾಚಾರ್ಯರಾದ ಗೋವರ್ಧನ ರೆಡ್ಡಿ, ಊರಿನ ಗಣ್ಯ ವ್ಯಕ್ತಿಗಳಾದ ಕಾಶಿನಾಥ ಸಹ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಬಾಯಮ್ಮ…… ಬಯಸಿ ಬಂದದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ ಎಂಬಂತೆ ವಚನ ಚಾರಿಟೇಬಲ್ ಅವರು ಸ್ವತಃ ಆಗಮಿಸಿ ತೆಗ್ಗು ತೋಡಿಸಿ ಗಿಡ ತಂದು ನೆಡುವ ಕಾರ್ಯ ಮಾಡಿದ್ದು ಒಂದು ಅಪರೂಪ. ಇದನ್ನು ನಾವು ನಮ್ಮ 90 ಮಕ್ಕಳು ಸೇರಿ ಕಾಪಾಡುವ ಜವಾಬ್ದಾರಿ ನಮ್ಮದು ಎಂದು ಹೇಳಿ ಶಾಲೆ ವತಿಯಿಂದ ಎಲ್ಲರಿಗೆ ಗೌರವಿಸಿದರು.
ಮೊದಲಿಗೆ ಶಿಕ್ಷಕಿಯರಾದ ಶೈಲಜಾ ಪರಿಸರ ಹಾಗೂ ವ್ಯವಸ್ಥೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಕಿಯರಾದ ಸುನಿತಾ ಸ್ವಾಗತಿಸಿದರೆ, ಶಿಕ್ಷಕಿಯರಾದ ಪಾರ್ವತಿ ವಂದಿಸಿದರೆ, ಶಿಕ್ಷಕಿಯರಾದ ಪೂಜಾ ಪ್ರಾರ್ಥನೆಗೈದರು.































