
ಕಲಬುರಗಿ: ಭಾರತ ದೇಶ ಅನೇಕ ಧರ್ಮ, ಸಮುದಾಯ, ಭಾಷೆ,
ಪ್ರದೇಶಗಳು, ಅಪರೂಪದ ವಾಸ್ತುಶಿಲ್ಪಗಳು, ಕಲಾಕೃತಿಗಳು, ಐತಿಹಾಸಿಕ
ಸ್ಮಾರಕಗಳನ್ನು ಹೊಂದಿದ್ದು ದೊಡ್ಡ ಮ್ಯೂಸಿಯಂ ಆಗಿದೆ. ವಿಶ್ವದ ಯಾವುದೇ
ಕಲಾವಿದನಿಗೆ ನಮ್ಮ ದೇಶವೇ ಆಧಾರವಾಗಿದ್ದು, ಇಲ್ಲಿಗೆ ಆಗಮಿಸಿ ಅಧ್ಯಯನ
ಮಾಡುತ್ತಿದ್ದಾರೆ. ದೇಶದಲ್ಲಿರುವ ಅಪರೂಪದ ಕಲಾಕೃತಿಗಳು, ಐತಿಹಾಸಿಕ
ಸ್ಥಳಗಳು, ಸ್ಮಾರಕಗಳನ್ನು ರಕ್ಷಿಸಿ, ಮುಂದಿನ ಜನಾಂಗಕ್ಕೆ ಮುಟ್ಟಿಸುವ
ಕಾರ್ಯವಾಗಬೇಕಾಗಿದೆ ಎಂದು ಅಂತಾರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದ ಡಾ.ಎಸ್.ಎಂ.ನೀಲಾ ಅಭಿಮತಪಟ್ಟರು.
ನಗರದ ಮಹಾಲಕ್ಷ್ಮೀ ನಗರದಲ್ಲಿನ ‘ನೀಲಾ ಆಟ್ರ್ಸ್ ಸ್ಟುಡಿಯೋ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಸಂಜೆ ಜರುಗಿದ ‘ಅಂತಾರಾಷ್ಟೀಯ ಕಲಾವಿದರ ದಿನಾಚರಣೆ’ಯಲ್ಲಿ ಸತ್ಕಾರ ಸ್ವೀಕರಿಸಿ,ಅವರು
ಮಾತನಾಡುತ್ತಿದ್ದರು.
ಜನಸಾಮಾನ್ಯರಿಗೆ ಕಲೆಯನ್ನು ತಲುಪಿಸುವ ಕೆಲಸವಾಗಬೇಕು. ಕಲಾವಿದರಿಗೆ
ಪೆÇ್ರೀತ್ಸಾಹ ನೀಡಬೇಕು. ನೈಜ ಕಲಾವಿರನ್ನು ಗುರ್ತಿಸಬೇಕು. ದೃಶ್ಯಕಲೆಯು
ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮವಾಗಿದ್ದು, ಇದು ಮನುಷ್ಯರ ಮೇಲೆ
ಹೆಚ್ಚಿನ ಪರಿಣಾಮ ಬೀರುತ್ತದೆ. ಸಮಾಜದಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು
ಚೆಲ್ಲುವ ಮೂಲಕ, ಅವುಗಳಿಗೆ ಪರಿಹಾರವನ್ನು ಸೂಚಿಸಿ ಸಮಾಜದ ಸಮತೋಲನ
ಸ್ಥಿತಿಯನ್ನು ಕಾಪಾಡುವ ಶಕ್ತಿ ದೃಶ್ಯಕಲೆಗಿದೆ. ಚಿತ್ರಕಲೆ ಅನಕ್ಷರಸ್ಥರಿಗೆ ಕೂಡಾ ಸರಳವಾಗಿ ಅರ್ಥವಾಗುತ್ತದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ,
ಚಿತ್ರಕಲೆಯು ಘಟನೆ, ಸಂದರ್ಭದ ನೈಜತೆಯನ್ನು ಕಟ್ಟಿಗೆ ಕಟ್ಟುವ ಹಾಗೆ
ನೀಡುತ್ತದೆ. ಇದು ಶಾಶ್ವತವಾದ ದಾಖಲೆಯಾಗಿದೆ. ‘ಒಂದು ಚಿತ್ರ ಸಾವಿರ ಶಬ್ದಗಳಿಗೆ
ಸಮಾನ’ ಎಂಬ ಮಾತು ಚಿತ್ರಕಲೆಯ ಮಹತ್ವವನ್ನು ಸಾರುತ್ತದೆ. ಚಿತ್ರ
ಕಲಾವಿದರಲ್ಲಿರುವ ಕಲ್ಪನಾ ಶಕ್ತಿ ಅದ್ಭುತವಾಗಿದೆ. ಇಂದಿನ ಯಾಂತ್ರಿಕೃತ ಬದುಕಿನಲ್ಲಿ
ಸಂಬಂಧಗಳ ಹುಡುಕಾಟ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕಲೆಯೆಂಬುದು ಜೀವಂತಿಕೆಯನ್ನು ಒದಗಿಸಿಕೊಡುತ್ತದೆ. ಕಲೆಯು ಮುಂದಿನ ಪೀಳಿಗೆಯಲ್ಲಿ
ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತದೆ. ಜಾತಿ, ಧರ್ಮ, ವ್ಯಾಪ್ತಿ, ಪ್ರದೇಶಗಳನ್ನು
ಮೀರಿದ್ದಾಗಿದ್ದು, ಮೌನ ಭಾಷೆಯಾಗಿದೆ. ಡಾ.ಸುಬ್ಬಯ್ಯ ಎಂ.ನೀಲಾ ಅವರು ತಮ್ಮ ಅದ್ಭುತವಾದ ಕಲೆಯಿಂದ ನಮ್ಮ ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಡಾ.ರಾಜಶೇಖರ ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ, ಪಂಡಿತರಾವ ಪಾಟೀಲ, ವಿಜಯಕುಮಾರ ಬೂದಿ ಸೇರಿದಂತೆ
ಇನ್ನಿತರರಿದ್ದರು.





















