ನರ್ಸಿಂಗ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಪಾಲಿಸಬೇಕು ; ಡಾ.ವಿರೇಶ ಪಾಟೀಲ

ಕಲಬುರಗಿ ;ಅ.23: ಬಿ.ಎಸ್ಸಿ ನಸಿರ್ಂಗ್ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿಯನ್ನು ಪಾಲಿಸಬೇಕು ಮತ್ತು ರೋಗಿಗಳ ಕಾಳಜಿಯನ್ನು ಮಾಡಬೇಕು ಎಂದು ಮೆಡಿಕಲ್ ಸೂಪರಿಂಟೆಂಡೆಂಟ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋ ಸೈನ್ಸಸ್ ಮತ್ತು ರೀಸರ್ಚ್ ಜಯದೇವ ಆಸ್ಪತ್ರೆ ಡಾ. ವಿರೇಶ್ ಪಾಟೀಲ ಹೇಳಿದರು.

ನಗರದ ಶ್ರೀ ಗೋಪಾಲದೇವ ಜಾಧವ್ ಅವರ ನಸಿರ್ಂಗ್ ಕಾಲೇಜಿನ 4ಣh ಬ್ಯಾಚ್ ಕಾಲೇಜಿನ ಮ್ಯಾಗಜಿನ್ ಹಾಗೂ ಗ್ರೂಪ್ ರಿಸರ್ಚ್ ಪ್ರಾಜೆಕ್ಟ್ ರಿಲೀಸ್ ಮತ್ತು 1sಣ ಬ್ಯಾಚಿನ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸಗಳ ಸೇವೆ ಬಹಳ ಮುಖ್ಯ ಪಾತ್ರವಹಿಸುತ್ತಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಯುನೈಟೆಡ್ ಆಸ್ಪತ್ರೆಯ ಡಾ. ಶೇಕ್ ಅಹ್ಮದ ಅಲಿ ಮಾತನಾಡಿ, ನರ್ಸಸ್ ಪಾತ್ರ ವೈದ್ಯರಿಗಂತ ಹೆಚ್ಚಾಗಿ ಇರುತ್ತೆ . ಯಾಕಂದರೆ, ದಿನದ 24 ಗಂಟೆ ರೋಗಿಗಳ ಆರೈಕೆ ಮಾಡುತ್ತಾರೆ ಎಂದು ತಿಳಿಸಿದರು.

ಕಾಲೇಜಿನ ಖಜಾಂಚಿ ಡಾ. ರಾಮಚಂದ್ರ ಜಾಧವ್ ಮಾತನಾಡಿ, ನರ್ಸ್ ಗಳು ಕರುಣೆ ಮತ್ತು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪೆÇ್ರಫೆಸರ್ ವಿಜಯರೆಡ್ಡಿ ಮಾತನಾಡಿ, ನರ್ಸಗಳು ಎಲ್ಲಾ ವರ್ಗದ ರೋಗಿಗಳನ್ನು ಸಮಾನತೆಯಿಂದ ಕಾಣವುದರ ಜೊತೆಗೆ ಆರೈಕೆ ಮಾಡಬೇಕು. ನಮ್ಮ ಕಾಲೇಜಿನ ಅಂತಿಮ ವರ್ಷದ ಬಿ. ಎಸ್ಸಿ ನಸಿರ್ಂಗ್ ವಿದ್ಯಾರ್ಥಿಗಳು ಗ್ರೂಪ್ ರಿಸರ್ಚ್ ಪ್ರಾಜೆಕ್ಟ್ ಪೂರ್ಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ಅಂತಿಮ ವರ್ಷದ ವಿಧ್ಯಾರ್ಥಿಗಳಾದ ನಿತೀಶ್ ಹಾಗೂ ಅನಿತಾ ಮಾತನಾಡಿ ರಿಸರ್ಚ್ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವಲ್ಲಿ ಪೆÇ್ರಫೆಸರ್ ವಿಜಯರೆಡ್ಡಿ ಸರ್ ಮಾರ್ಗದರ್ಶನದಲ್ಲಿ ಪೂರ್ಣ ಗೊಳಿಸದೆವು ಮತ್ತು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಈ ವರ್ಷದಲ್ಲಿ ಕಲಬುರ್ಗಿ ಜಿಲ್ಲೆಯಲಿ ಗ್ರೂಪ್ ರಿಸರ್ಚ್ ಪ್ರಾಜೆಕ್ಟ್ ಪೂರ್ಣಗೊಳಿಸಿದ ಕಾಲೇಜ್ ನಮ್ಮದಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅರುಣಕುಮಾರ್ ಪವಾರ, ಅಬ್ದುಲ್ ವಹೀದ್ ಮುನೀರ್, ಕಾಲೇಜಿನ ಬಿ.ಎಸ್ಸಿ ನಸಿರ್ಂಗ್ ವಿದ್ಯಾರ್ಥಿಗಳು ,ಬೋಧಕ ,ಬೋಧಕೆತರ ಹಾಗೂ ಪಾಲಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಸಾಯಿತು. ಭಾಗ್ಯಶ್ರೀ ಹೂಗಾರ್ ನಿರೂಪರಿಸಿದರು, ಪೂಜಾ ವಂದನಾರ್ಪಣ ಮಾಡಿದರು.