Home ಜಿಲ್ಲೆ ಕಲಬುರಗಿ ಕ್ರಿಕೆಟ್ ಮೈದಾನದಲ್ಲಿ ದೇವದೂತನಂತೆ ಬಂದು ಯುವಕನ ಪ್ರಾಣ ಉಳಿಸಿದ ನಸಿರ್ಂಗ್ ವಿದ್ಯಾರ್ಥಿ ಪ್ರತಾಪ್ ಗೌಡ!

ಕ್ರಿಕೆಟ್ ಮೈದಾನದಲ್ಲಿ ದೇವದೂತನಂತೆ ಬಂದು ಯುವಕನ ಪ್ರಾಣ ಉಳಿಸಿದ ನಸಿರ್ಂಗ್ ವಿದ್ಯಾರ್ಥಿ ಪ್ರತಾಪ್ ಗೌಡ!

ಕಲಬುರ್ಗಿ ,ಅ 11: ವಿಶ್ವನಾಥ್ ರೆಡ್ಡಿ ಮುದ್ನಾಳ ಕಾಲೇಜು ವಸತಿ ನಿಲಯದ ಮೈದಾನದಲ್ಲಿ ಕ್ರಿಕೆಟ್ ಆಡುವಾಗ ನಡೆದ ಭೀಕರ ಅಪಘಾತದಲ್ಲಿ, ಉಸಿರಾಟ ನಿಂತು ಹೋಗಿದ್ದ ವಿದ್ಯಾರ್ಥಿಗೆ ಸರ್ಕಾರಿ ನಸಿರ್ಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಪ್ರತಾಪ್ ಗೌಡ ಬಿರಾದಾರ್ ಅವರು ತಕ್ಷಣ ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಮೂಲಕ ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತಹ ಸಾಹಸ ಮೆರೆದಿದ್ದಾರೆ. ದಿನಾಂಕ 8 ಅಕ್ಟೋಬರ್ 2026ರಂದು ಸಂಜೆ 4 ಗಂಟೆಯ ಸುಮಾರಿಗೆ ವಿಶ್ವನಾಥ್ ರೆಡ್ಡಿ ಮುದ್ನಾಳ ಕಾಲೇಜಿನ ವಿದ್ಯಾರ್ಥಿಗಳು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಹಾರಿ ಬಂದ ಚೆಂಡನ್ನು (ಬಾಲ್) ಕ್ಯಾಚ್ ಹಿಡಿಯಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಅತ್ಯಂತ ವೇಗವಾಗಿ ಒಬ್ಬರಿಗೊಬ್ಬರು ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ.ಈ ಭೀಕರ ಡಿಕ್ಕಿಯ ರಭಸಕ್ಕೆ ಒಬ್ಬ ವಿದ್ಯಾರ್ಥಿಗೆ ತೀವ್ರವಾದ ಪೆಟ್ಟು ಬಿದ್ದು, ಆತ ತಕ್ಷಣ ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ. ಘಟನೆಯ ತೀವ್ರತೆಗೆ ಆತನ ಉಸಿರಾಟ ಸಂಪೂರ್ಣವಾಗಿ ನಿಂತು ಹೋಗಿತ್ತು.ಮೈದಾನದಲ್ಲಿ ಯಾವುದೇ ವಿಡಿಯೋ ಅಥವಾ ಫೆÇೀಟೋ ಮಾಡಲು ಸಮಯವಿಲ್ಲದಂತಹ ಭೀಕರ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಕಂಡು ಜೊತೆಯಲ್ಲಿದ್ದ ಸಹಪಾಠಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದರು.ಅದೇ ಸಮಯಕ್ಕೆ ಸರಿಯಾಗಿ ವಿಶ್ವನಾಥ್ ರೆಡ್ಡಿ ಮುದ್ನಾಳ ಕಾಲೇಜು ವಸತಿ ನಿಲಯದಲ್ಲಿ ವಾಸವಿರುವ, ಸರ್ಕಾರಿ ನಸಿರ್ಂಗ್ ಕಾಲೇಜಿನ (ಉoveಡಿಟಿmeಟಿಣ ಅoಟಟege oಜಿ ಓuಡಿsiಟಿg) ಬಿಎಸ್‍ಸಿ ನಸಿರ್ಂಗ್ ಪ್ರಥಮ ವರ್ಷದ ವಿದ್ಯಾರ್ಥಿಯಾದ ಪ್ರತಾಪ್ ಗೌಡ ಬಿರಾದಾರ್ ಅವರು ಅಲ್ಲಿಗೆ ಆಗಮಿಸಿದ್ದಾರೆ.ಪರಿಸ್ಥಿತಿಯ ಗಂಭೀರತೆಯನ್ನು ತಕ್ಷಣ ಅರಿತ ಪ್ರತಾಪ್ ಗೌಡ, ತರಬೇತಿಯಲ್ಲಿ ಕಲಿತಿದ್ದ ವೈದ್ಯಕೀಯ ತುರ್ತು ಚಿಕಿತ್ಸೆಯನ್ನು (ಅPಖ) ನೀಡಲು ಆರಂಭಿಸಿದರು. ಪ್ರತಾಪ್ ಅವರ ನಿರಂತರ ಪ್ರಯತ್ನದ ಫಲವಾಗಿ, ಪ್ರಜ್ಞೆ ತಪ್ಪಿದ್ದ ವಿದ್ಯಾರ್ಥಿಯು ಮತ್ತೆ ಉಸಿರಾಡಲು ಆರಂಭಿಸಿ, ಜೀವ ರಕ್ಷಿಸಿಕೊಂಡಿದ್ದಾನೆ. ತಕ್ಷಣವೇ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉIಒS ಟ್ರೌಮಾ ಕೇರ್ (ಉIಒS ಖಿಡಿಚಿumಚಿ ಅಚಿಡಿe) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಾಲೇಜು ಶಿಕ್ಷಕರು ಹಾಗೂ ಸ್ಥಳೀಯರಿಂದ ಸಾಹಸಕ್ಕೆ ಶ್ಲಾಘನೆ:
ಪ್ರತಾಪ್ ಗೌಡ ಅವರ ಈ ಅದ್ಭುತ ಸಮಯಪ್ರಜ್ಞೆ ಮತ್ತು ಅಪ್ರತಿಮ ಧೈರ್ಯವನ್ನು ಕಂಡು ಕಾಲೇಜಿನ ಪ್ರಾಂಶುಪಾಲರು, ಸಂಸ್ಥೆಯ ಮುಖಂಡರು ಹಾಗೂ ಕಾಲೇಜಿನ ಶಿಕ್ಷಕರು (ಅoಟಟege ಖಿeಚಿಛಿheಡಿs) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸ್ಥಳೀಯ ಸಾರ್ವಜನಿಕರು ಪ್ರತಾಪ್ ಗೌಡ ಅವರ ಧೈರ್ಯವನ್ನು ಕೊಂಡಾಡುತ್ತಾ, “ದೇವರ ಹಾಗೆ ಬಂದು ವಿದ್ಯಾರ್ಥಿಯ ಪ್ರಾಣ ಕಾಪಾಡಿದ ದೇವದೂತ” ಎಂದು ಅತ್ಯಂತ ಭಾವುಕರಾಗಿ ವ್ಯಕ್ತಪಡಿಸಿದ್ದಾರೆ.

ಶ್ರೀ ಸಂಗಮೇಶ್ವರ ಸಂಸ್ಥೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿ:
ಅತ್ಯಂತ ಹೆಮ್ಮೆಯ ವಿಷಯವೆಂದರೆ, ಪ್ರಾಣ ಉಳಿಸಿದ ಸಾಹಸಿ ಪ್ರತಾಪ್ ಗೌಡ ಬಿರಾದಾರ್ ಅವರು ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ತಾವು ಕಲಿತ ಶಾಲೆ ಮತ್ತು ಕಾಲೇಜಿನ ಸಂಸ್ಕಾರ ಹಾಗೂ ವೃತ್ತಿ ಧರ್ಮವನ್ನು ವಿದ್ಯಾರ್ಥಿ ದೆಸೆಯಲ್ಲೇ ಪಾಲಿಸಿ, ಜೀವ ಉಳಿಸಿದ ಪ್ರತಾಪ್ ಅವರಿಗೆ ಇಡೀ ವಿಶ್ವನಾಥ ರೆಡ್ಡಿ ಮುದ್ನಾಳ ಸಂಸ್ಥೆ ಸಲಾಂ ಎನ್ನುತ್ತಿದೆ.