ಕಾಯಕ ಯೋಗಿಯಾಗಿ ತಮ್ಮ ವಚನಗಳ ಮೂಲಕ ಜನರಿಗೆ ಸಂದೇಶ ನೀಡಿದವರು ನುಲಿಯ ಚಂದಯ್ಯ

ಕಲಬುರಗಿ: ಆ. 10: ಕಾಯಕದಿಂದ ಕಾಯಕ ಯೋಗಿಯಾಗಿ ಜಂಗಮ್ಮ ದಾಸಿಯಾಗಿ ಒಂದು ರೀತಿಯ ಶಿವಶರಣರ ಮಾದರಿಯಾಗಿ ತಮ್ಮ ವಚನಗಳ ಮೂಲಕ ಜನರಿಗೆ ಸಂದೇಶ ನೀಡಿದ್ದಾರೆ ಎಂದು ವಿಶೇಷ ಉಪನ್ಯಾಸಕ ಕನ್ನಡ ಅಧ್ಯಾಪಕರಾದ ಡಾ. ಡಿ.ಎನ್. ಪಾಟೀಲ ಅವರು ಹೇಳಿದರು.
ಶನಿವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನುಲಿಯ ಚಂದಯ್ಯ ರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕಾಯಕ ಜೀವಿಗಳ ಮತ್ತು ಶರಣ ಚೇತನಕ್ಕೆ ಆದರ್ಶಪ್ರಾಯರಾದ ನುಲಿಯ ಚಂದಯ್ಯನವರು ದೇವರಿಗಾಗಿ ಗುಡಿ ಗುಂಡಾರ ಸುತ್ತಲಿಲ್ಲ. ಆದರೆ ತನ್ನ ಕಾಯಕದ ಮೂಲಕ ಲಿಂಗ ದೇವರನ್ನೇ ತನ್ನನ್ನು ಸುತ್ತುವಂತೆ ಬದಕಿ ಬಾಳಿದವರು ಎಂದರು.
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ತರ್ಕ ವಿತರ್ಕಗಳಿಗೆ ಎಡೆಗೊಡದೆ ತನಗೆ ಸರಿ ಎನಿಸಿದ ವಿಚಾರಗಳಿಗೆ ಅತಿ ನಿಷ್ಟುರವಾದಂತಹ ಪ್ರತಿಕ್ರಿಯೆಯನ್ನು ಕೊಡುತ್ತಾ ಅಂಬಿಗರ ಚೌಡಯ್ಯನಂತೆ ಕಟುವಾಗಿದ್ದರು ಕೂಡ ಭಾμÉ ಮೃದುವಾಗಿತ್ತು. ಚಂದೇಶ್ವರ ಲಿಂಗ ಎಂಬ ಅಂಕಿತದೊಂದಿಗೆ ಇಲ್ಲಿಯವರೆಗೆ 48 ವಚನಗಳು ಲಭ್ಯವಾಗಿವೆ ಎಂದು ಹೇಳಿದರು.
ಕಲ್ಯಾಣ ಕ್ರಾಂತಿಯ ಬಳಿಕ ಶರಣರು ದಿಕ್ಕು ಪಾಲಾಗಿ ಹೋದಾಗ ಅಕ್ಕನಾಗಲಂಬಿಕೆಯ ಬೆನ್ನಿಗೆ ನಿಂತುಕೊಂಡು ಅವರನ್ನು ಮತ್ತು ಅವರ ವಿಚಾರಧಾರೆಯನ್ನು ಕಾಪಾಡುತ್ತ ಲೋಕಕ್ಕೆ ಶರಣ ತತ್ವವನ್ನು ಬಿತ್ತರಿಸಿದ ಕಾಯಕಯೋಗಿಯಾಗಿದ್ದರು.
ಬಸವಕಲ್ಯಾಣದಲ್ಲಿ ಕೂಡ ತ್ರಿಪುರಾಂತ ಕೆರೆ ಇದ್ದು ಅದು ಚಂದನಿಗೆ ಸಂಬಂಧಿಸಿದ ಅμÉ್ಟೀ ಅಲ್ಲ ಅಲ್ಲೇ ಗಂಜಿ ಕೆರೆ ಇದ್ದು ಅಂದು ಚೆಂದಯ್ಯ ನೋವು ಮಾಡಿದ ಗಂಜಿ ಒಲೆಯ ಮೇಲೆ ಉಕ್ಕಿ ಅಲ್ಲಿನ ಪ್ರದೇಶದ ತುಂಬೆಲ್ಲ ಅರಳಿತು ಆಗ ಅಲ್ಲಿಯೇ ಒಂದು ಕೆರೆಯನ್ನ ಕಟ್ಟಿದರಿಂದ ಅದಕ್ಕೆ ಗಂಜಿ ಕೆರೆ ಎಂದು ಹೆಸರು ಬಂತು.
ಮಹಾಂತೇಶ್ವರ ಮಠ, ಚಿಣಮಗೇರಾ ಪೂಜ್ಯ ಶ್ರೀ. ಷ.ಬ್ರ. ವೀರಮಹಾಂತ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ಸಮುದಾಯಗಳು ಸಂಘಟಿತರಾಗಬೇಕು ಬಡ ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಮತ್ತು ಮೌಡ್ಯ ಆಚರಣೆ ಬಿಡಬೇಕು ತಾಯಿಂದರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು ತಿಳಿಸಿದರು.
ಜಿಲ್ಲಾ ಕೊರಮ್ ಉಪಾಧ್ಯಕ್ಷ ಸುನೀಲ ಮಾನ್ಪಡೆ ಮಾತನಾಡಿ, ಬಸವಣ್ಣವರ ವಿಚಾರಗಳನ್ನು ಒಪ್ಪಿಕೊಂಡು ಸಾಗಬೇಕು ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಮೂಲಕ ಬಂದ ಸಂವಿಧಾನ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಸಮಾಜದ ಮುಖಂಡರಾದ ಶಾಂತಪ್ಪ ಜಾಧವ ಅವರು ಮಾತನಾಡಿ, ನಮ್ಮ ಸಮುದಾಯ ಭವನಕ್ಕೆ 100ಘಿ100 ಫೀಟ್‍ನ್ ಸ್ಥಳವನ್ನು ಸಿ.ಎ. ನಿವೇಶನದಿಂದ ನೀಡಬೇಕು ನಮ್ಮ ಸಮಾಜ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕೆಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಮಗನಾದ ಶರಣಗೌಡ ಪಾಟೀಲ ಅವರಿಗೆ ಮನವಿ ಪತ್ರ ನೀಡಲಾಯಿತು.
ಮೆರವಣಿಗೆಯು ಜಗತ್ ವೃತದಿಂದ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಹಾಗೂ ಬುದ್ಧ ಬಸವ, ಅಂಬೇಡ್ಕರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಕನ್ನಡ ಭವನಕ್ಕೆ ಬಂದು ತಲುಪಿತು.
ಕನ್ನಡ ಮತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಆ ನಾಸಿ. ಸ್ವಾಗತಿಸಿದರು. ಸಮಜದ ಮುಖಂಡ ರಮೇಶ ಜಾಧವ ಕಾರ್ಯಕ್ರಮ ನಿರೂಪಿಸಿದರು. ತಹಶೀಲ್ದಾರ ಗ್ರೇಡ್-1 ಆನಂದ ಶೀಲ, ಜಿಲ್ಲಾಧಿಕಾರಿಗಳ ಶಿಷ್ಠಚಾರದ ತಹಶೀಲ್ದಾರ ಪಂಪಯ್ಯ, ಸಮಿತಿಯ ಅಧ್ಯಕ್ಷ ರಾಜಕುಮಾರ ಬಜಂತ್ರಿ ಮದಗುಣಗಿ, ಜಿಲ್ಲಾ ಕೊರಮ್ ಅಧ್ಯಕ್ಷ ಹಣಮಂತ ಭಜಂತ್ರಿ ಕರಜಗಿ ಶಿಕ್ಷಕರಾದ ಪ್ರಕಾಶ ಭಂಜತ್ರಿ ಸೇರಿದಂತೆ ಕೋರಮ ಸಮಾಜದ ಪದಾಧಿಕಾರಿಗಳು ಹಾಗೂ ಮುಖಂಡರು. ಭಾಗವಹಿಸಿದ್ದರು.