ಎನ್‍ಎಸ್‍ವಿ ಪಾಕ್ಷಿಕ ಅರಿವು ಮೂಡಿಸುವ ಕಾರ್ಯಕ್ರಮ

ಗದಗ, ಡಿ.8 : ಕುಟುಂಬ ಕಲ್ಯಾಣ ಯೋಜನೆಯಲ್ಲಿ ಪುರುಷರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಸಂತಾನ ನಿರೋಧ ಸೇವೆಗಳ ಬಲಪಡಿಸಲು ರಾಷ್ಟ್ರಾದ್ಯಂತ ಎನ್ ಎಸ್ ವಿ ಪಾಕ್ಷಿಕವನ್ನು ಆಚರಿಸುತ್ತಿದ್ದು, ಎನ್‍ಎಸ್ ವಿ ಗಾಯವಿಲ್ಲದ ಹೊಲಿಗೆ ಇಲ್ಲದ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಡಾ .ರಾಜೇಂದ್ರ ಎಸ್ ಗಡಾದ ಹೇಳಿದರು.

ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ನಗರ ಆರೋಗ್ಯ ಕೇಂದ್ರ ರೆಹಮತ್ ನಗರ ಅಂಗನವಾಡಿ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಡೋರಗಲ್ಲಿಯಲ್ಲಿ ಏರ್ಪಡಿಸಲಾಗಿದ್ದ ಎನ್ ಎಸ್ ವಿ ಪಾಕ್ಷಿಕ ಆಚರಣೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಂತರ ಮಾತನಾಡಿ ಶಸ್ತ್ರ ಚಿಕಿತ್ಸೆ ಮಾಡಲು ಕೇವಲ ಐದರಿಂದ ಹತ್ತು ನಿಮಿಷಗಳು ಮಾತ್ರ ಬೇಕಾಗಿದ್ದು ಚಿಕಿತ್ಸೆಯ 30 ನಿಮಿಷಗಳ ನಂತರ ಮನೆಗೆ ಹೋಗಬಹುದಾಗಿದೆ, ಆಸ್ಪತ್ರೆಯಲ್ಲಿ ತಂಗಬೇಕಾಗಿಲ್ಲ ಸಾರ್ವಜನಿಕರು ವಿಶೇಷವಾಗಿ ಪುರುಷರು ತಮ್ಮ ಮನೆಯಲ್ಲಿನ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗೆ ಆದವರು ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಪದೇಪದೇ ಗರ್ಭಪಾತದಂತ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಪುರುಷರು ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಮುಂದೆ ಬರಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಬಸಮ್ಮ ಪೂಜಾರ ಮಾತನಾಡಿ ಈ ಶಸ್ತ್ರಚಿಕಿತ್ಸೆಗೆ ಒಳಗಾದ ಫಲಾನುಭವಿಗಳಿಗೆ ಸರ್ಕಾರದಿಂದ 1100 ಹಾಗೂ ಪ್ರೇರೇಪಿಸಿದವರಿಗೆ ರೂ.200 ಸಹಾಯಧನ ನೀಡಲಾಗುತ್ತಿದ್ದು ಸುಖೀ ಮತ್ತು ಆರೋಗ್ಯಕರ ಕುಟುಂಬದ ಕನಸು ಪುರುಷರ ಸಭಾಗಿತ್ವದಿಂದ ನನಸಾಗುವುದು ಎಂದರು.

ಸಮಾರಂಭದ ಹಿರಿಯರಾದ ಕೃಷ್ಣಾಜಿ ಓಂಕಾರ್ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಲಭಿಸಿದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು, ಮಮತಾಜ ಸಿದ್ನೆಕೊಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಆಶಾ ಕಾರ್ಯಕರ್ತೆ ಕವಿತಾ ಮಠದ ಸ್ವಾಗತಿಸಿದರು, ಅಂಗನವಾಡಿ ಕಾರ್ಯಕರ್ತೆ ವೀಣಾ ಸಂಕಣ್ಣನವರ ನಿರೂಪಿಸಿದರು, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಬುಗುಟಿ ವಂದಿಸಿದರು, ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ತಾಯಂದಿರು ಪಾಲ್ಗೊಂಡಿದ್ದರು.