
ಸೇಡಂ ,ಡಿ , ೦೯ : ವಿದ್ಯಾರ್ಥಿಗಳ ಜೀವನದಲ್ಲಿ ಎನ್.ಎಸ್.ಎಸ್ ಅವರಲ್ಲಿನ ವ್ಯಕ್ತಿಯ ಬದುಕಿನ ದಿಕ್ಕನ್ನು ಬದಲಿಸುವ ಸೇವಾ ಕಾರ್ಯವಾಗಿದ್ದು, ಶಿಬಿರಾರ್ಥಿಗಳು ಆ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ ಎಂದು ದಿಗ್ಗಾಂವ ಪಂಚಗ್ರಹ ಹಿರೇಮಠದ ಶ್ರೀರತ್ನ ಪರಮ ಪೂಜ್ಯ. ಷ. ಬ್ರ . ಶ್ರೀ ಸಿದ್ಧವೀರ ಶಿವಾಚಾರ್ಯರು ಹೇಳಿದರು.ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಸಂಚಾಲಿತ ಶ್ರೀಮತಿ ನರ್ಮದಾದೇವಿ ಗಿಲಡಾ ಮಹಿಳಾ ಮತ್ತು ಪದವಿ ಪೂರ್ವ (ಕೆಕೆ ೦೧೮೧) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿದ ಶ್ರೀಗಳು ಮಾತನಾಡಿದರು.ಪಾವನ ಸಾನಿಧ್ಯ ವಹಿಸಿದ ಪರಮ ಪೂಜ್ಯ ಶ್ರೀ ಶಿವಶಂಕರ ಮಹಾಸ್ವಾಮಿಗಳು ಮಾತನಾಡಿ ಶಿಬಿರದ ದಿನಗಳಲ್ಲಿಯ ಅನುಭವ ಭವಿಷ್ಯದಲ್ಲಿ ಉತ್ತಮ ಸೇವಾಕಾರ್ಯ ನಿರ್ವಹಿಸಿ ತಮ್ಮ ಬದುಕು ಸಾರ್ಥಕ ಮಾಡಿಕೊಳ್ಳಿ ಎಂದು ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾದ ಶ್ರಿ ಶರಣಪ್ಪ ಆರ್.ಜಾಕನಳ್ಳಿ,ಪಿ ಎಸ್ ಐ ತನಿಖಾ, ಪೊಲೀಸ್ ಠಾಣೆ ಸೇಡಂ ಅವರು ಮಾತನಾಡುತ್ತಾ, ಆಧುನಿಕ ಕಾಲದಲ್ಲಿ ಯುವಕರು ಸೈಬರ್ ವಂಚನೆಯಿAದ ಮೋಸ ಹೋಗುತ್ತಿದ್ದು, ಅದರಿಂದಾಗುವ ವಂಚನೆಯಿAದ ಜಾಗೃತರಾಗಿರುವಂತೆ ಎಚ್ಚರಿಕೆ ನೀಡಿದರು.ಅತಿಥಿಗಳಾದ ಡಾ. ರೇವಣಸಿದ್ದಯ್ಯ ಮಠ ಮುಖ್ಯಸ್ಥರು ನೃಪತುಂಗ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯ ಸೇಡಂ ಅವರು ಸಾಮಾಜಿಕ ಪಿಡುಗುಗಳನ್ನು ಹೆಚ್ಚುತ್ತಿರುವದರಿಂದ ಕುಟುಂಬಗಳು ಬೀದಿಗೆ ಬರುತ್ತಿದ್ದು, ಅಂತಹ ವ್ಯಸನಿಗಳಿಗೆ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಸಶಕ್ತ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿ ಬದುಕು ಸಾರ್ಥಕ ಮಾಡಿಕೊಳ್ಳುವ ಸಲಹೆ ನೀಡಿದರು.ಶ್ರೀ ಸತ್ಯಕುಮಾರ ಭಾಗೋಡಿ ಶಿಕ್ಷಣ ಸಂಯೋಜಕರು, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.ದಿ.ವೀರಭದ್ರಪ್ಪ ಸಜ್ಜನಶೆಟ್ಟಿ ಅವರ ಸ್ಮರಣಾರ್ಥ ಶ್ರೀ ಶಂಕರಪ್ಪ ಸಜ್ಜನಶೆಟ್ಟಿ ಅವರು ನೀಡಿದ ಹೊದಿಕೆ ಬಡ ಜನರಿಗೆ ವಿತರಿಸಲಾಯಿತು.ಕಾರ್ಯಕ್ರಮಾಧಿಕಾರಿ ಶ್ರೀ ಶಿವಶರಣಪ್ಪ ಎಲ್ಮಡಗಿ ವಾರ್ಷಿಕ ವಿಶೇಷ ಶಿಬಿರದ ವರದಿಯನ್ನು ವಾಚನ ಮಾಡಿದರು.ಉಪನ್ಯಾಸಕಿಯರಾದ ಶ್ರೀಮತಿ ಸುನೀತಾ ಹಳ್ಳಿ ನಿರೂಪಿಸಿದರೆ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುವರ್ಣ ಗುತ್ತೇದಾರ ಸ್ವಾಗತಿಸಿದರು. ಪ್ರಾಚಾರ್ಯರಾದ ಶ್ರೀಮತಿ ಜಗದೀಶ್ವರಿ ಯರಗೋಳ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸರ್ವ ಸೇವಾ ಬಳಗ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.























