
ಅಫಜಲಪುರ: ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಬರೀ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ವಹಿಸಬೇಕು ಅಂದಾಗ ಮಾತ್ರ ಶಿಸ್ತು, ಸಮಯ ಪಾಲನೆ, ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಪ್ರಕಾಶ ಜಮಾದಾರ ಹೇಳಿದರು.
ತಾಲೂಕಿನ ಆನೂರ ಗ್ರಾಮದ ಚಂದ್ರಗಿರಿ ದೇವಸ್ಥಾನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವತಿಯಿಂದ 7 ದಿನಗಳ ಕಾಲ ನಡೆಯುವ ಎನ್‍ಎಸ್‍ಎಸ್ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ಕಾಲೇಜು ಕೋಣೆಗಳಲ್ಲಿ ನಿಮಗೆ ಪುಸ್ತಕದ ಪಾಠ ಬೋಧನೆಯಾದರೆ, ಶಿಬಿರದಲ್ಲಿ ನಿಜವಾದ ಸಮಾಜ ವ್ಯವಸ್ಥೆಯ ಪರಿಚಯವಾಗಲಿದೆ. ಹೀಗಾಗಿ ಈ ಅನುಭವವನ್ನು ವಿದ್ಯಾರ್ಥಿಗಳು ಅನುಭವಿಸಬೇಕಾದರೆ ಶಿಬಿರದಲ್ಲಿ ಕಡ್ಡಾಯವಾಗಿ ಭಾಗಿಯಾಗಬೇಕು. ಇಲ್ಲಿ ಸಿಗುವ ಅನುಭವಗಳೇ ನಾಳೆ ನಿಮ್ಮ ಬದುಕನ್ನು ಪರಿಪೂರ್ಣಗೊಳಿಸಲಿವೆ ಎಂದರು.
ಮಾಜಿ ಗ್ರಾಪಂ ಅಧ್ಯಕ್ಷ ದತ್ತು ಘಾಣೂರ ಮಾತನಾಡಿ, ನಮ್ಮ ಊರಿನಲ್ಲಿ ಎನ್‍ಎಸ್‍ಎಸ್ ಶಿಬಿರ ನಡೆಯುತ್ತಿರುವುದು ನಮಗೆಲ್ಲ ಖುಷಿ ತಂದಿದೆ.ಎಲ್ಲರೂ ಸೇರಿ ಶಿಬಿರವನ್ನು ಯಶಸ್ವಿಗೊಳಿಸುತ್ತೇವೆ ಎಂದರು.
ಪ್ರಾಚಾರ್ಯ ಡಾ.ಸಂತೋಷ ಹುಗ್ಗಿ ಮಾತನಾಡುತ್ತಾ ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಶಿಬಿರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಒಂದು ವಾರ ಗ್ರಾಮದಲ್ಲಿ ಶೃದ್ದೆಯಿಂದ ಅಗತ್ಯ ಕೆಲಸಗಳನ್ನು ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ಚಂದ್ರಗಿರಿ ದೇವಸ್ಥಾನದ ಅರ್ಚಕ ರಾಹುಲ್ ಭಂಡಾರಿ ಸಾನಿಧ್ಯ ವಹಿಸಿದ್ದರು.
ಈ ಸಂಧರ್ಭದಲ್ಲಿ ಯುವ ಮುಖಂಡ ಚಂದ್ರಕಾಂತ ಸೀತನೂರ, ಹಿರಿಯ ಪ್ರಾಧ್ಯಪಕಿ ಎಂ.ಎಸ್ ರಾಜೇಶ್ವರಿ, ಶಿಭಿರಾಧಿಕಾರಿ ಡಾ.ಶಾಂತಲಾ, ಡಾ.ರಾಘವೇಂದ್ರ, ಡಾ.ಸೂರ್ಯಕಾಂತ ಉಮ್ಮಾಪುರೆ, ಡಾ.ಮಹ್ಮದ್ ಯುನುಷ್, ಡಾ.ವಿನಾಯಕ, ಪ್ರವೀಣ ಸೇಡಂಕರ್, ಡಾ.ಹೀರು ರಾಠೋಡ, ಡಾ.ಕವಿತಾ ರಾಠೋಡ, ಡಾ.ತಾಯಪ್ಪ, , ಡಾ. ಡಾ. ಅಂಬಿಕಾ, ಡಾ. ಸಪನಾ, ಶರಣಬಸವೇಶ್ವರ ಡಾ.ಸಂತೋಷ ಬಡೀಗೇರ, ಡಾ. ಗೌರಿಶಂಕರ ಡಾ.ಗಿರೀಜಾ, ಡಾ ಶಿವಕುಮಾರ, ಡಾ. ಮಮತಾ ಹಾಗೂ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು. ಕಾರ್ಯಕ್ರಮ ಡಾ.ಸಾವಿತ್ರ ಕೃಷ್ಣ ನಿರೂಪಿಸಿದರು. ಡಾ.ದತ್ತಾತ್ರೇಯ ಸಿಹೆಚ್ ಸ್ವಾಗತಿಸಿದರು. ಡಾ.ಸಂಗಣ್ಣ ಸಿಂಗೆ ವಂದಿಸಿದರು.
ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಮೀಸಲಿಡುತ್ತಿದೆ, ನಮ್ಮ ಶಾಸಕರು ಕೂಡ ಶಿಕ್ಷಣ ಪ್ರೇಮಿಗಳಾಗಿದ್ದು ಪ್ರಾಥಮಿಕದಿಂದ ಪದವಿ ಶಿಕ್ಷಣದ ವರೆಗೆ ಎಲ್ಲಾ ವಿಭಾಗಗಳಲ್ಲೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಇನ್ನೂ ಏನಾದರೂ ಬೇಕಿದ್ದರೆ ಗಮನಕ್ಕೆ ತಂದರೆ ಶಾಸಕರ ಗಮನಕ್ಕೆ ತಂದು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
- ಸಿದ್ಧಾರ್ಥ ಬಸರಿಗಿಡ
ಮಾಜಿ ಜಿ.ಪಂ.ಸದಸ್ಯರು (ಬಡದಾಳ),ಅಫಜಲಪುರ






















