ವಿಜಯಪುರ, ಸೆ.೧- ಪಟ್ಟಣದ ಗಾಂಧಿ ಚೌಕದಲ್ಲಿನ ವಿನಾಯಕ ಭಕ್ತ ಮಂಡಳಿ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ನಡೆಸಲಾದ ೯೦ನೇ ವರ್ಷದ ವಿನಾಯಕ ಉತ್ಸವದ ಪ್ರಯುಕ್ತ ನಗರ್ತ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ವಿಜೇತರಾಗಿ ನಗರ್ತ ಸ್ರೈಕರ್ಸ್‌ನ ನಾಯಕ ಮಂಜುನಾಥ್‌ರವರು ಹಿರಿಯ ಮುಖಂಡರಾದ ಚಂದ್ರರಾಜು ರವರಿಂದ ಕಪ್‌ನ್ನು ಪಡೆದುಕೊಂಡರು.
ರನ್ನರ್‌ಅಪ್ ಆಗಿ ನಗರ್ಥ ಫೇಸರ್ಸ್‌ನ ಪ್ರಭು ರವರು ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮಹಾಂತಿನ ಮಠದ ಅಧ್ಯಕ್ಷರಾದ ಪುನೀತ್ ಕುಮಾರ್, ಕಾರ್ಯದರ್ಶಿ ವಿ ವಿಶ್ವನಾಥ್, ಸುರಕ್ಷಾ ಟೂರ್ಸ್‌ನ ವೀರೇಶ್,ಎನ್.ರುದ್ರ ಮೂರ್ತಿ,ಕೋರಮಂಗಲ ರುದ್ರಪ್ಪ ಟ್ರಷ್ಟನ ಅಧ್ಯಕ್ಷರಾದ ಸಿ ಭಾಸ್ಕರ್,ನಗರ್ತ ಪವರ್ಸ್ ತಂಡದ ಸುರೇಶ್ ಬಾಬು, ನಗರ್ತ ಸ್ವಿಂಗರ್ಸ್ ತಂಡದ ಎ ಆರ್ ಸಿ ನಿಖಿಲ್, ನಗರ್ತ ಸ್ನಾಶರ್ಸ್ ತಂಡದ ವಿ ಶಿವಕುಮಾರ್, ನಗರ್ತ ಯುನೈಟೆಡ್ ತಂಡದ ಎಂ ಶಂಕರ್,ನಗರ್ತ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.




























