ನ.೯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಕೋಲಾರ,ನ.೪- ರಂಗ ಕಹಳೆ ಬೆಂಗಳೂರು ಹಾಗೂ ಕೇಂದ್ರ ಸರ್ಕಾರದ ಮಿನಿಸ್ಟ್ರಿ ಆಫ್ ಕಲ್ಚರ್ ಸಹಯೋಗದೊಂದಿಗೆ, ನಗರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ನ ೦೯ ರಂದು ನಡೆಯಲಿರುವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ರಂಗ ಉತ್ಸವದ ಬಿತ್ತಿ ಪತ್ರವನ್ನು ಕೋಲಾರದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅನಾವರಣ ಮಾಡಿದರು.


ಇವರೊಂದಿಗೆ ಕೋಲಾರದ ಹಿರಿಯ ವಕೀಲ ಕೆ. ವಿ. ಶಂಕರಪ್ಪ, ರಂಗ ಕಹಳೆ ಸಂಚಾಲಕ ಓಹಿಲೇಶ ಲಕ್ಷ್ಮಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ್ ಇದ್ದರು.