ನ.೨೮ .ತ್ಯಾಮಗೊಂಡ್ಲು ಬಳಿ ಜಲಾಗ್ರಹ ಜನ ಜಾಗೃತಿ ಸಮಾವೇಶ

ಕೋಲಾರ,ನ,೨೭- ಭಾರತಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದರೂ ಸಹ ಬರಪೀಡಿತ ಜಿಲ್ಲೆಗಳಿಗೆ ಕನಿಷ್ಟ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದರೆ. ಕುಡಿಯುವ ನೀರಿಗಾಗಿ ಕಳೆದೆ ಸುಮಾರು ೩೦ ವರ್ಷಗಳಿಂದ ಸಂವಿಧಾನ ಬದ್ದವಾದ ಹೋರಾಟಗಳು ಮಾಡಿದರೂ ಸಹ ಯಾವೂದೇ ಸರ್ಕಾರ ಗಂಭೀರವಾಗಿ ಪರಿಗಣಿಸದೆ ವಿರುದ್ದ ನ,೨೬ರಂದು ಅವಿಭಜಿತ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತ್ರತ್ವದಲ್ಲಿ ತ್ಯಾಮಗೊಂಡ್ಲು ಅಮಾನಿಕರೆ ಅವರಣದಲ್ಲಿ ಜಲಾಗ್ರಹ ಹೋರಾಟದ ಎರಡನೇ ಭಾಗವಾಗಿ ಜನ ಜಾಗೃತಿ ಮಾವೇಶವನ್ನು ನಡೆಸಲಾಗುವುದು ಎಂದು ಅವಿಭಜಿತ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಅಂಜನೇಯ ರೆಡ್ಡಿ ತಿಳಿಸಿದರು,


ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಈ ಸಮಾವೇಶವನ್ನು ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೀರಾವರಿ ಹೋರಾಟ ಸಮಿತಿಗಳು ಸಂಘಟಿತರಾಗಲಿದ್ದಾರೆ. ಸಾಹಿತಿಗಳು, ಕಲಾವಿಧರು, ಬುದ್ದಿಜೀವಿಗಳು, ಜನಪರ ಕಾಳಜಿಯುಳ್ಳ ನಾಯಕರುಗಳು ಸೇರಿದಂತೆ ಜಂಟಿ ಕ್ರಿಯ ಸಮಿತಿಯನ್ನು ರಚಿಸಿದ್ದು ಈ ಸಮಿತಿಗೆ ನಿವೃತ್ತ ನ್ಯಾಯಾಧೀಶರಾದ ವಿ.ಗೋಪಾಲಗೌಡರನ್ನು ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.


ಕಳೆದ ಅಕ್ಟೋಬರ್ ೨ ರಂದು ಮೂರು ಜಿಲ್ಲೆಯ ಸುಮಾರು ನೊರಾರು ಸಂಘಟನೆಗಳು ಸೇರಿ ಜಲಾಗ್ರಹ ಸಮಾವೇಶವನ್ನು ಮೂಲಕ ಶಾಶ್ವತ ಕುಡಿಯುವ ನೀರಾವರಿಗಾಗಿ ಹಕ್ಕುತ್ತಾಯವನ್ನು ಮಂಡಿಸಿತ್ತು ಈ ಸಮಾವೇಶದಲ್ಲಿ ರಚಿಸಿದ ಜಂಟಿ ಕ್ರಿಯಾ ಸಮಿತಿಗೆ ನಿವೃತ್ತ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಗೋಪಾಲಗೌಡರನ್ನು ಅಧ್ಯಕ್ಷರನ್ನಾಗಿ ಒಕ್ಕೂರಲಿನಿಂದ ತೀರ್ಮಾನಿಸಲಾಯಿತು ಎಂದರು.


ಕೆ.ಸಿ.ವ್ಯಾಲಿ, ಹೆಚ್.ಎನ್. ವ್ಯಾಲಿ ಮತ್ತು ವೃಷಬಾವತಿ ನೀರಾವರಿ ಯೋಜನೆಗಳು ಅಪಾಯಕಾರಿ ಸ್ಥಿತಿಯನ್ನು ತಲುಪಿದೆ. ಸರ್ಕಾರಗಳು ಸುಳ್ಳು ಭರವಸೆ ನೀಡಿ ಜನತೆಯನ್ನು ವಂಚಿಸುತ್ತಿವೆ. ಸುಮಾರು ೩೦ ಸಾವಿರ ಕೋಟಿ ರೂಗಳನ್ನು ನೀರಾವರಿ ಯೋಜನೆ ನೆಪದಲ್ಲಿ ದುರ್‍ಬಳಿಸಿ ಕೊಂಡಿದೆ. ನದಿ ನೀರು ಕೊಡುವುದಾಗಿ ತಿಳಿಸಿ ಈ ವರೆಗೆ ಸಾಧ್ಯವಾಗಿಲ್ಲ. ಅವೈಜ್ಷಾನಿಕ ಯೋಜನೆಗಳ ಬಗ್ಗೆ ನೀರಾವರಿ ತಜ್ಞರು ಸಲಹೆಗಳು ನೀಡಿದರೂ ಸಹ ಗುತ್ತಿಗೆ ದಾರರು ಕಮೀಷನ್ ಆಸೆಗೆ ನೀಡಿದ ಸಲಹೆಗಳಿಗೆ ಮಣೆ ಹಾಕಿ ದುಂದು ವೆಚ್ಚದಲ್ಲಿ ತೊಡಗಿದ್ದಾರೆ ಎಂದು ದೂರಿದರು.


ಬಿಹಾರ ರಾಜ್ಯದಲ್ಲಿ ತಾಯಿಯ ಎದೆಹಾಲಿನಲ್ಲೂ ಯೂರಿನಂ ವಿಷಾಕಾರಿ ರಾಸಾಯನಿಕ ಅಂಶವನ್ನು ಕಂಡು ವಿಜ್ಞಾನಿಗಳು ಸಹ ಕಳವಳ ವ್ಯಕ್ತ ಪಡೆಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಇದೇ ಗತಿ ಉಂಟಾಗುವ ಸಂಭವವ ಇದ್ದು ಈಗಲೇ ಎಲ್ಲರೂ ಎಚ್ಚೆತ್ತು ಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆಯವರಿಗೆ ವಂಚಿಸಿದಂತಾಗುವುದು. ಈಗಾಗಲೇ ಅಂತರ್ಜಲದಲ್ಲಿ ವಿಷಾಕಾರಿ ರಾಸಾಯನಿಕ ಇರುವುದನ್ನು ಪತ್ತೆ ಮಾಡಲಾಗಿದೆ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಈ ನೀರನ್ನು ಸೇವಿಸುವ ಮೂಲಕ ಅಮಾಯಕರು ಬಲಿಯಾಗಲಿದ್ದಾರೆ. ಮುಂಜಾಗೃತ ಕ್ರಮವಾಗಿ ನೀರಾವರಿಗಾಗಿ ಹೋರಾಟದ ಅಂದೋಲ ಮೂಲಕ ಸರ್ಕಾರದ ಕಿವಿ ಹಿಂಡಿ ಕನಿಷ್ಟ ಮೂಲ ಭೂತ ಸೌಲಭ್ಯಗಳಲ್ಲಿ ಒಂದಾದ ನೀರನ್ನು ಪಡೆದು ಕೊಳ್ಳಬೇಕಾಗಿದೆ ಎಂದರು


ಸರ್ಕಾರದ ಪೊಳ್ಳು ಭರವಸೆಗಳಿಗೆ ಮರಳಾಗ ಬಾರದು ಇದೇ ರೀತಿ ಎತ್ತಿನ ಹೊಳೆ ಯೋಜನೆಯಲ್ಲಿ ೨೪ ಟಿ.ಎಂ.ಸಿ. ನೀರು ಲಭ್ಯವಾಗುವುದು ಎಂದು ತಪ್ಪು ಮಾಹಿತಿ ನೀಡಿದ್ದಾರೆ.ನಂತರದಲ್ಲಿ ೮ ಟಿ.ಎಂ.ಸಿ. ನೀರು ಮಾತ್ರ ಲಭ್ಯವಾಗುವುದು ಎಂಬುವುದನ್ನು ಉಪಮುಖ್ಯ ಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರೇ ಒಪ್ಪಿ ಕೊಂಡಿದ್ದಾರೆ ಎಂದ ಅವರು ಈ ಯೋಜನೆಯು ಸುಮಾರು ೧೫ ವರ್ಷಗಳಿಂದ ಕುಂಟುತ್ತಾ ಎಡುವುತ್ತಾ ಸಾಗಿ ಬಂದು ೮ ಸಾವಿರ ಕೋಟಿ ರೂ ಯೋಜನೆಯು ಇಂದು ಹೆಚ್ಚುವರಿಯಾಗಿ ೨೪ ಸಾವಿರ ಕೋಟಿ ರೂಗಳಿಗೆ ಏರಿಕೆಯಾಗಿದೆ. ಇದು ಕುಡಿಯುವ ನೀರಾವರಿ ಯೋಜನೆಯ ವಂಚನೆಯ ಪರಾಕಷ್ಟೆಯನ್ನು ತಲುಪಿದೆ ಎಂದು ವಿಷಾದಿಸಿದರು.
ನೀರಾವರಿ ಹೋರಾಟ ಸಮಿತಿ ಸಂಚಾಲಕ ಹೊಳಲಿ ಪ್ರಕಾಶ್ ಮಾತನಾಡಿ ಡಿಸೆಂಬರ್ ಅಧಿವೇಶನ ದಲ್ಲಿ ಜನಪ್ರತಿನಿಧಿಗಳು ಶಾಶ್ವಾತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಕ್ಕೆ ತರಲು ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟಿಸಿ ಕಲ್ಮಶದ ನೀರು ಪೂರೈಸುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆಯ ಬೇಕೆಂದರು. ಸರ್ಕಾರವು ಗಮನ ಹರಿಸಲು ಸಭೆಯನ್ನು ಬಹಿಷ್ಕರಿಸಿ ನೀರಾವರಿ ಚರ್ಚೆಗಳಿಗೆ ಆಗ್ರಹಿಸ ಬೇಕೆಂದ ಅವರು ಜನಪ್ರತಿಗಳು ಜನತೆಯ ಒತ್ತಾಸೆಗಳಿಗೆ ಮಾನ್ಯತೆ ನೀಡದಲ್ಲಿ ಅವರನ್ನು ನಾಲಾಯಕ್ ಪ್ರತಿನಿಧಿಗಳೆಂದು ಪರಿಗಣಿಸಿ ಛೇ ಮಾರೆ ಹಾಕಿ ಬುದ್ದಿ ಕಲಿಸಲು ಮುಂದಾಗ ಬೇಕೆಂದು ಕರೆ ನೀಡಿದರು.


ಪತ್ರಿಕಾಗೋಷ್ಟಿಯಲ್ಲಿ ರೈತ ಸಂಘದ ಕಲ್ವಮಂಜಲಿ ರಾಮು ಶಿವಣ್ಣ. ನಾರಾಯಣಸ್ವಾಮಿ, ಕ.ರ.ವೇ ಚಂಬೇ ರಾಜೇಶ್, ಯುವಶಕ್ತಿ ಸಂಘಟನೆ ಪುಟ್ಟಣ, ಗಲ್ ಪೇಟೆ ಸಂತೋಷ್, ಮಾನವ ಹಕ್ಕು ಸಮಿತಿ ಶ್ರೀನಾಥ್,. ಆಪ್ ಪಕ್ಷದ ವೆಂಕಟಚಲಪತಿ. ರಮೇಶ್ ಉಪಸ್ಥಿತರಿದ್ದರು.