
ಕಲಬುರಗಿ,ಜೂ ೩: ಅಶೋಕ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ೭ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸಿ,ಬAಧಿತನಿAದ ೧೦.೩೦ ಲಕ್ಷ ರೂ ಮೌಲ್ಯದ ಸ್ವತ್ತು ವಶ
ಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಸಂತೋಷ ಕಾಲೋನಿ ನಿವಾಸಿ ಚಿತ್ತಾಪುರ ತಾಲೂಕಿನ ಯರಗಲ್ ಗ್ರಾಮದ ಚಾಲಕ ವೃತಿಯ ಮಲ್ಲಿಕಾರ್ಜುನ ದೇವಿಂದ್ರಪ್ಪ ತಳವಾರ ( ೩೩ ವರ್ಷ) ಬಂಧಿತ ಆರೋಪಿ.
ಕಳೆದ ಮಾರ್ಚ ೧ ರಂದು ಕಾಂತಾ ಕಾಲೋನಿ ನಿವಾಸಿ ತೂಗುದೀಪ್ ಜಗನ್ನಾಥ ಸೂರನ್ ಎಂಬುವವರು ಮನೆಯಲ್ಲಿ ೨.೬೫ ಲಕ್ಷ ರೂ ಮೌಲ್ಯದ ನಗನಾಣ್ಯ ಕಳುವಾದ ಬಗ್ಗೆ ಅಶೋಕ ನಗರ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಆರೋಪಿಯ ಪತ್ತೆ ಕುರಿತು ಉಪಪೊಲೀಸ ಆಯುಕ್ತರಾದ ಶಾಲೂ, ಪ್ರವೀಣ ಹೆಚ್, ನಾಯಕ್
ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ, ಅಶೋಕ ನಗರ ಪೊಲೀಸ್ ಠಾಣೆ ಪಿಐ ಸತೀಶ ಕಣಿಮೇಶ್ವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವೈಜಿನಾಥ , ಶಿವಪ್ರಕಾಶ, ಮುಜಾಹಿದ್ , ಕರಣ್, ನೀಲಕಂಠರಾಯ, ಚಂದ್ರಶೇಖರ ಹಾಗೂ ಹರಿಕಿಶೋರ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.ಈ ತಂಡವು ಆರೋಪಿತರ ಕುರಿತು ಮಾಹಿತಿ ಕಲೆ ಹಾಕುತ್ತಿರುವಾಗ ಬಿದ್ದಾಪುರ ಕಾಲೋನಿ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಕುಲಂಕೂಷವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿತನು ಒಟ್ಟು ೭ ಪ್ರಕರಣಗಳಲ್ಲಿ ಮನೆ ಕಳ್ಳತನ ಮಾಡಿರುವ ಬಗ್ಗೆ ತನ್ನೊಪ್ಪಿಕೊಂಡಿದ್ದು ಆರೋಪಿತರ ವಿರುದ್ಧ ದಸ್ತಗಿರಿ ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪ ಪೋಲಿಸ್ ಆಯುಕ್ತರಾದ ಶಾಲೂ ಹಾಗೂ ಪ್ರಚೀಣ್ ಎಚ್. ನಾಯಕ್ ಅವರು ಉಪಸ್ಥಿತರಿದ್ದರು.


























