ಮೂಲಸೌಕರ್ಯಗಳ ತ್ವರಿತ ದುರಸ್ತಿಗಾಗಿ ಸೂಚನೆ

ಧಾರವಾಡ, ಜೂ.15: ಹುಬ್ಬಳ್ಳಿ ಮತ್ತು ನವಲಗುಂದ ಸೇರಿದಂತೆ ತಾಲೂಕಿನ ಕರ್ಲವಾಡ, ಆರೇಕುರಟ್ಟಿ, ಯಮನೂರ ಗ್ರಾಮಗಳ ಹತ್ತಿರ ಬೆಣ್ಣಿಹಳ್ಳದ ಪ್ರವಾಹದಿಂದ ಅಪಾರ ಪ್ರಮಾಣದ ನೀರು ಬಂದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದ ಮತ್ತು ಹಾನಿಯಾದ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಹಾಗೂ ಶಾಸಕ ಎನ್. ಎಚ್. ಕೋನರಡ್ಡಿ ಅವರು ವೀಕ್ಷಣೆ ಮಾಡಿದರು.


ರಸ್ತೆ, ಬ್ರಿಜ್ ಹಾಗೂ ಇತರ ಸಾರ್ವಜನಿಕ ಮೂಲ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ತ್ವರೀತವಾಗಿ ದುರಸ್ತಿ, ಮರು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.


ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರೈತರು ಈಗಾಗಲೇ ಹೆಸರು ಬೆಳೆ ಹಾಗೂ ಇತರೆ ಮುಂಗಾರು ಬೆಳೆ ಬಿತ್ತಿದ್ದಾರೆ. ಹೆಸರು ಬೆಳೆ ಮೊಳಕೆ ಒಡೆಯುವ ಹಂತಕ್ಕೆ ಬಂದಿದ್ದು, ಧಾರಾಕಾರ ಮಳೆಯಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗಿದೆ. ರೈತರ ಜಮೀನುಗಳಲ್ಲಿನ ಬದುವುಗಳು ಕೊಚ್ಚಿ ಹೋಗಿ ಹಾನಿಯಾಗಿದೆ. ಕ್ಷೇತ್ರದಲ್ಲಿ ಬೆಳೆ ಹಾನಿ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮಾಹಿತಿ ಮತ್ತು ವರದಿ ಮೇಲೆ ಸರ್ಕಾರದ ಜೊತೆ ಚರ್ಚಿಸಿ, ಎಸ್.ಡಿ.ಆರ್.ಎಫ್ ನಿಯಮಾವಳಿಗಳನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು ಎಂದು ಸಚಿವ ಸಂತೋಷ ಲಾಡ ಅವರು ತಿಳಿಸಿದರು.


ನವಲಗುಂದ ಭಾಗದಲ್ಲಿ 7-8 ಜಾಗಗಳಲ್ಲಿ ಪ್ರವಾಹ ನೋಡಿದ್ದೇನೆ. ನಾಲಾ ಹಾಗೂ ಹಳ್ಳ ಅಗಲೀಕರಣ್ಣಕ್ಕೆ 1600 ಕೋಟಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದೆ. ಅದರಲ್ಲಿ 200ಕೋಟಿ 140 ಕಿ.ಮಿ ಹಳ್ಳ ಅಗಲೀಕರಣ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.


ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಅನೇಕ ಹಳ್ಳಿಗಳನ್ನು ಪ್ರವಾಸ ಮಾಡಿದ್ದೇವೆ. ಬಹಳ ವರ್ಷಗಳಿಂದ ನವಲಗುಂದ, ಕುಂದಗೋಳ ಭಾಗಗಳಲ್ಲಿ ಈ ರೀತಿ ಪ್ರವಾಹ ಪರಿಸ್ಥಿತಿಯಿಂದ ತೊಂದರೆ ಆಗುತ್ತಿದೆ. ಇದಕ್ಕೆ ಸಂಪೂರ್ಣ ಪರಿಹಾರ ಕಂಡು ಹಿಡಿಯಬೇಕು ಎಂದು ಮಾನ್ಯ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಇರುವಂತ ಕಾಮಗಾರಿ ಯೋಜನೆ ಬಂಡು (ಬದು) ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ 160 ಕೋಟಿಯ ಕಾಮಗಾರಿಗೆ ಡಿಪಿಆರ್ ಮಾಡಲಾಗಿದ್ದು, ಅದು ಒಂದು ಹಂತಕ್ಕೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋμï ಎಸ್. ಲಾಡ್ ಅವರು ಹೇಳಿದರು.


ಮುಂದಿನ ವರ್ಷ 2026 ರ ಜನವರಿಯಲ್ಲಿ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಎರಡು ಕಾಮಗಾರಿಗಳು ಪ್ರಾರಂಭವಾದರೆ ಬಹುತೇಕ ಮುಂದೆ ಬರುವ ಮಳೆಗಾಲದಲ್ಲಿ ನವಲಗುಂದಕ್ಕೆ ಮಳೆಯಿಂದಾಗಿ ಪ್ರವಾಹ ಬರುವ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.

ಹಳ್ಳಗಳ ಭಾಗಗಳಲ್ಲಿರುವ ಹೊಲಗಳಿಗೆ ರೈತರು ಬಿತ್ತನೆಯನ್ನು ಮಾಡಿದ್ದಾರೆ. ಕೆಲವು ಹೊಲಗಳಿಗೆ ನೀರು ನುಗ್ಗಿದೆ. ಅದರಿಂದ ರೈತರಿಗೆ ತೊಂದರೆಯಾಗಿದೆ ಅದನ್ನು ಪರಿಗಣಿಸಿ ಮುಂದೆ ಮತ್ತೆ ಬಿತ್ತನೆ ಮಾಡುವ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. ಅದರಂತೆ ಮುಂದೆ ಫಸಲು ಬರದೆ ಹೋದಲ್ಲಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಎಸ್ ಲಾಡ ಅವರು ತಿಳಿಸಿದರು.


ಶಾಸಕ ಎನ್. ಎಚ್. ಕೋನರಡ್ಡಿ ಅವರು ಮಾತನಾಡಿ, ನವಲಗುಂದ ಕ್ಷೇತ್ರದಲ್ಲಿ 3 ತಾಲೂಕಿನ ಹಳ್ಳಗಳು ಬರುತ್ತವೆ ಇμÉ್ಟೂಂದು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದ್ದು, ಬೆಣ್ಣೆ ಹಳ್ಳ, ತುಪ್ಪರಿಹಳ್ಳಕ್ಕೆ ಅನೇಕ ಬೇರೆ 56 ಹಳ್ಳಗಳ ನೀರು ಸೇರಿದೆ ಹೀಗಾಗಿ ಪ್ರವಾಹ ಸೃಷ್ಟಿಯಾಗಿದೆ ನನ್ನ ಕ್ಷೇತ್ರ ಕೆಳ ಹಂತದಲ್ಲಿದೆ ಹೀಗಾಗಿ ನೀರು ಹೊಕ್ಕು ಸಮಸ್ಯೆಯಾಗಿದೆ ಕ್ಷೇತ್ರದ ರೈತರಿಗೆ ತುಂಬಾ ಹಾನಿಯಾಗಿದೆ ಆ ಹಾನಿ ಸರಿದೂಗಿಸುವ ವಿಚಾರವಾಗಿ ಸೋಮವಾರ ದಿವಸ ಜಿಲ್ಲಾ ಸಚಿವರೊಂದಿಗೆ ಸಭೆ ಮಾಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.


ನಾವೂ ಸಹ ಬೆಳೆ ಹಾನಿ ಸಮೀಕ್ಷೆ ಮಾಡಿದ್ದೇವೆ ತಾಲೂಕಿನ ರಸ್ತೆಗಳಿಗೂ ಹಾನಿಯಾಗಿದೆ ಹಾನಿಯ ಅಂದಾಜು ಮಾಡಲು ಸೋಮವಾರ ಸಭೆ ಮಾಡುತ್ತೇವೆ ತ್ವರಿತವಾಗಿ ಸಭೆ ನಡೆಸಿ ಮರು ಬಿತ್ತನೆಗೆ ಅನುಕೂಲಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆಸಿ ಪರಿಹಾರ ನೀಡಲಾಗುವುದು. ಎರಡು ಬ್ರಿಜ್ ನಿರ್ಮಾಣಕ್ಕಾಗಿ ಪಿಡಬ್ಲುಡಿ ಸಚಿವರ ಜೊತೆಗೆ ಮಾತನಾಡಿದ್ದೇನೆ ಎಂದರು.