Home ಜಿಲ್ಲೆ ಮಹಿಳೆಗೆ ಅಸಾಧ್ಯ ಯಾವುದೂ ಇಲ್ಲ

ಮಹಿಳೆಗೆ ಅಸಾಧ್ಯ ಯಾವುದೂ ಇಲ್ಲ

ಬೀದರ್: ಮಾ.೧೨:ಮನಸ್ಸು ಮಾಡಿದರೆ ಮಹಿಳೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಸಾಹಿತಿ ಡಾ. ರೇಣುಕಾ ಎಂ. ಸ್ವಾಮಿ ಅಭಿಪ್ರಾಯಪಟ್ಟರು.
ಅಕ್ಕಮಹಾದೇವಿ ಮಹಿಳಾ ಸಂಘದ ವತಿಯಿಂದ ನಗರದ ಅಲ್ಲಮಪ್ರಭು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯ ಸಾಮಥ್ರ‍್ಯಕ್ಕೆ ಸಾಟಿ ಇಲ್ಲ. ಆಕೆ ಉತ್ತುಂಗದ ಸಾಧನೆ ಮಾಡಬಹುದು. ತನ್ನ ಮಕ್ಕಳನ್ನು ದೇಶದ ಅತ್ಯುನ್ನತ ಸ್ಥಾನಕ್ಕೂ ಏರಿಸಬಹುದು ಎಂದು ತಿಳಿಸಿದರು.
ಪ್ರೀತಿ, ವಿಶ್ವಾಸ, ತಾಳ್ಮೆ ಹಾಗೂ ಹೊಂದಾಣಿಕೆ ಸುಖಿ ಕುಟುಂಬದ ಸೂತ್ರಗಳಾಗಿವೆ ಎಂದು ಹೇಳಿದರು.
ಡಾ. ಶೈಲಜಾ ಮಾತನಾಡಿ, ಇಡೀ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವ ಮಹಿಳೆಯರು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.
ಬೀದರ್ ಅಕ್ಕ ಪಡೆಯ ಮುಖ್ಯಸ್ಥೆ ಸಂಗೀತಾ ಮಾತನಾಡಿ, ಮಹಿಳೆಯರು ಏನೇ ಸಮಸ್ಯೆಗಳಿದ್ದರೂ ಅಕ್ಕ ಪಡೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಶಿಕ್ಷಕಿ ಈಸ್ಟರಮ್ಮ ಪಾಟೀಲ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಿ, ಪ್ರೋತ್ಸಾಹಿಸಲಾಯಿತು.
ಚಂದ್ರಕಲಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಚ್.ಆರ್. ಮಲ್ಲಮ್ಮ, ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.
ಸುಧಾರಾಣಿ ಬಿರಾದಾರ ನಿರೂಪಿಸಿದರು. ವೈಷ್ಣವಿ ಬಿರಾದಾರ ಸ್ವಾಗತಿಸಿದರು. ಆರಾಧ್ಯ ಪಾಟೀಲ ವಂದಿಸಿದರು.