ಶಾಲಾ ಮಕ್ಕಳಿಗೆ ನೋಟ್ ಬುಕ್,ಪೆನ್ ವಿತರಣೆ

ಚಿಂಚೋಳಿ :ಜ.೧೮:ಪಟ್ಟಣದ ಚಂದಾಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ದಿವಂಗತ ಜಗನ್ನಾಥ ಪಾಟೀಲ್ ಅವರ ೧೫ನೇ ವರ್ಷದ ಪುಣ್ಯತಿಥಿ ಅಂಗವಾಗಿ ಶಾಲೆಯ ಮಕ್ಕಳಿಗೆ ಕಾಪೆ ಪೆನ್ನು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಕಾಪಿ ಪೆನ್ನನ್ನು ಗ್ರೇಟ್ ೨ ತಹಶೀಲ್ದಾರ್ ವೆಂಕಟೇಶ್ ದುಗ್ಗನ್, ಅವರು ಮಕ್ಕಳಿಗೆ ವಿತರಣೆ ಮಾಡಿ ಮಾತನಾಡಿ ನಾವೆಲ್ಲರೂ ತಂದೆ ತಾಯಿಗೆ ಎದುರಾಡದೆ ನಾವೆಲ್ಲರೂ ತಂದೆ ತಾಯಿಗಳ ಮಾತುಗಳನ್ನು ಕೇಳಿ ಒಳ್ಳೆಯಿಂದ ನಾಗರಿಕರಾಗಬೇಕು ಮತ್ತು ತಂದೆ ತಾಯಿಗೆ ಸೇವೆ ಮಾಡಿದರೆ ನಮಗೆಲ್ಲ ಮುಂದೆ ಒಳ್ಳೆಯದಾಗುತ್ತದೆ ಅದರಂತೆ ಇಂದು ಸಂಜೀವ ಕುಮಾರ್ ಪಾಟೀಲ್, ಅವರು ತಂದೆಯ ಪುಣ್ಯತಿಥಿ ಅಂಗವಾಗಿ ಮಕ್ಕಳಿಗೆ ಕಾಫಿ ಪೆನ್ನು ಮಾಡುತ್ತಿದ್ದು ಉತ್ತಮ ಕೆಲಸ ಮಾಡುತ್ತಿದ್ದಾರೆ ಇಂದುನ ದಿನಗಳಲ್ಲಿ ತಮ್ಮ ಮಕ್ಕಳ ಹೆಂಡತಿಯ ಬರ್ತಡೇಗಳು ಮಾಡೋದು ಆದರೆ ಅವರ ತಂದೆ ಹೆಸರಿನಲ್ಲಿ ಈ ಕಾರ್ಯಕ್ರಮ ಮಾಡಿದ್ದು ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ

ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ, ಅವರು ಮಾತನಾಡಿ ದಿವಂಗತ ಜಗನ್ನಾಥ್ ಪಾಟೀಲ್ ಅವರು ಸುಮಾರು ೩೪ ವರ್ಷಗಳ ಹಿಂದೆ ಚಿಂಚೋಳಿ ನಗರದಲ್ಲಿ ಜ್ಯೋತಿ ಫೋಟೋ ಸ್ಟುಡಿಯೋ ಒಂದೇ ಇತ್ತು ಅಂದಿನ ಸಂದರ್ಭದಲ್ಲಿ ಜಗನ್ನಾಥ್ ಪಾಟೀಲ್ ಅವರು ಫೋಟೋಗ್ರಾಫಿಕ್ ನಲ್ಲಿ ಒಳ್ಳೆ ಸೇವೆಯನ್ನು ನೀಡಿದ್ದಾರೆ ಅದೇ ರೀತಿ ಅವರ ಮಗನಾದ ಸಂಜೀವಕುಮಾರ ಪಾಟೀಲ್ ಅವರು ಕೂಡ ಒಳ್ಳೆಯ ರೀತಿಯಿಂದ ಪತ್ರಿಕರ್ತರಾಗಿ ಮತ್ತು ಸಮಾಜ ಸೇವಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಗೋಪಾಲರಾವ್ ಕಟ್ಟಿಮನಿ, ಅವರು ಹೇಳಿದರು ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ರಮೇಶ ಪಡೆಶೆಟ್ಟಿ ಐನಾಪುರ್, ಪ್ರದೀಪ್ ದೇಶಮುಖ್, ವೀರೇಶ್ ದೇಸಾಯಿ, ಶಿವಶರಣಪ್ಪ ಡಂಗಿ, ನರಸಪ್ಪ, ಉಮೇಶ ಪೂಜಾರಿ, ಮಲ್ಲಿನಾಥ್ ಮೇಲಗಿರಿ, ಕೃಷ್ಣ ಕೊಳೂರ್, ಶಾಲೆಯ ಮುಖ್ಯ ಗುರುಗಳಾದ ಗೋಪಾಲ ಯಂಪಳ್ಳಿ, ಮತ್ತು ಅನೇಕ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು