ಜಗದಲ್ಲಿ ಜನಿಸಿದ ಎಲ್ಲರಿಗೂ ಜಗತ್ತನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಮನಕವಾಡದ ಶ್ರೀ

ಬಸವನಬಾಗೇವಾಡಿ:ಜ.೨೩: ಜಗತ್ತನ್ನು ಗೆಲ್ಲಬೇಕೆಂದು ಜಗದಲ್ಲಿ ಅನೇಕ ಜನರು ಹುಟ್ಟಿದರು ಆದರೆ ಅವರು ಸಂಸಾರದ ವ್ಯಾಮೋಹದಲ್ಲಿ ಸಿಲುಕಿಕೊಂಡಿದ್ದಾರೆ ಅದರ ಪರಿಣಾಮವಾಗಿ ಜಗತ್ತಲ್ಲಿ ಜನಿಸಿದ ಎಲ್ಲರಿಗೂ ಜಗತ್ತನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ ಆದರೆ ಲಿಂಗೈಕ್ಯ ಪರಮಪೂಜ್ಯ ಮುರುಗೇಂದ್ರ ಮಹಾಸ್ವಾಮಿಗಳು ಈ ಜಗದೋಳ್ ಜನಿಸಿ ಜನರ ಮಧ್ಯೆ ಇದ್ದು ಜಗತ್ತನ್ನು ಗೆದ್ದವರು ಎಂದು ಮನಕವಾಡದ ದೇವರ ಗದ್ದಿಗೆ ಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ರುದ್ರಮುನಿಗಳ ಶಿವಯೋಗಿಗಳ ಸ್ಮರಣೆ ಹಾಗೂ ಪರಮಪೂಜ್ಯ ಲಿಂಗೈಕ್ಯ ಮುರಗೇಂದ್ರ ಮಹಾಸ್ವಾಮಿಗಳ ಪ್ರಥಮ ಪುಣ್ಯ ಆರಾಧನೆ ಅಂಗವಾಗಿ ಗುರುವಾರ ಏರ್ಪಡಿಸಿದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು ಭಗವಂತನು ಭಗವಂತನು ಕೊಟ್ಟ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವವಾಗಿದೆ ಆದ್ದರಿಂದ ಪುಣ್ಯದ ಕಾರ್ಯಗಳಿಗೆ ದಾನ ಧರ್ಮ ಮಾಡಬೇಕೆಂದು ಅವರು ಹೇಳಿದರು ಕಾರ್ಯಕ್ರಮದ ಸಮ್ಮುಖ ಸ್ಥಾನ ವಹಿಸಿ ಸ್ಥಳೀಯ ಹಿರೇಮಠದ ಶಿವಪ್ರಕಾಶ್ ಶಿವಾಚಾರ್ಯರ ಮಾತನಾಡಿ ಅಲ್ಲಮಪ್ರಭುಗಳ ಬೇಡ ಗಿನ ವಚನಗಳನ್ನು ಜನಸಾಮಾನ್ಯರಿಗೆ ತಿಳಿಯುವ ಹಾಗೆ ಬಿಡಿಸಿ ಹೇಳುವ ಸಾಮರ್ಥ್ಯ ಪೂಜ್ಯರಿಗೆ ಮಾತ್ರ ಸಾಧ್ಯವಿತ್ತು ಆರು ತಿಂಗಳವರೆಗೆ ಬಸವ ಪುರಾಣ ಹೇಳಿದ ಕೀರ್ತಿ ಲಿಂಗೈಕ್ಯ ಮುರಗೇಂದ್ರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ ಶ್ರೀಗಳು ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆ ಭಕ್ತರೇ ಮಠಗಳ ಆಸ್ತಿ ಲಿಂಗೈಕ್ಯ ಮುರುಗೇಂದ್ರ ಶ್ರೀಗಳು ಸದಾ ಭಕ್ತರ ಸುಖವನ್ನೇ ಬಯಸುವರು ಭಕ್ತರು ಯಾವಾಗಲೂ ಸಂತೋಷದಿAದ ಇರಬೇಕೆಂದು ಬಯಸುತ್ತಿದ್ದರು ಅವರು ಹಾಸ್ಯವಾಗಿ ಮಾತನಾಡಿ ಭಕ್ತರನ್ನು ನಗಿಸುತ್ತಿದ್ದರು ಅಂಥವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಶಕ್ತಿ ನಮ್ಮೊಂದಿಗಿದೆ ಎಂದು ಹೇಳಿದರು ಪಿಕೆಪಿಎಸ್ ಅಧ್ಯಕ್ಷರಾದ ಸಂಗನಗೌಡ ಚಿಕ್ಕೋಂಡ ಮಾತನಾಡಿ ಮನುಷ್ಯ ತಪ್ಪು ಮಾಡುವುದು ಸಹಜ ಅದನ್ನು ತಿದ್ದಿಕೊಂಡು ಹೋದರೆ ಅವನ ಜೀವನ ಸುಂದರವಾಗುತ್ತದೆ ನಮ್ಮ ತನು ಮನ ಶುದ್ಧವಿದ್ದಾಗ ಮಾತ್ರ ನಮ್ಮ ಬದುಕು ಬಂಗಾರವಾಗುತ್ತದೆ ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಮಾತನಾಡಿದ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಮನುಷ್ಯನನ್ನು ಅಜ್ಞಾನದಿಂದ ಸುಜ್ಞಾನದವರೆಗೆ ಮಠಗಳು ಕರೆದುಕೊಂಡು ಹೋಗುತ್ತವೆ ಯಾವುದೇ ಕಾರ್ಯಕ್ರಮಗಳನ್ನು ಹಚ್ಚು ಕಟ್ಟಾಗಿ ಮಾಡಬೇಕೆಂದರು ಭಕ್ತರು ಒಂದಾಗಿ ಮಠಗಳನ್ನು ಬೆಳೆಸಬೇಕು ಅಲ್ಲದೇ ಲಿಂಗೈಕ್ಯ ಮುರುಘೇಂದ್ರ ಮಹಾಸ್ವಾಮಿಗಳು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯಬೇಕೆಂದು ಹೇಳಿದರು ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಮಠದ ಸಿದ್ದಲಿಂಗ ಶ್ರೀಗಳು ಹಾಗೂ ತಾಲೂಕ ಜೆಡಿಎಸ್ ಅಧ್ಯಕ್ಷರಾದ ಜಗದೀಶ್ ಕೊಟ್ರಶೆಟ್ಟಿ ಮಾತನಾಡಿದರು ವೇದಿಕೆಯ ಮೇಲೆ ಆಸಂಗಿಯ ವೀರ ಬಸವ ದೇವರು ತಾಲೂಕ ಪಂಚಮಸಾಲಿ ಅಧ್ಯಕ್ಷರಾದ ಬಸವರಾಜು ಗೊಳಸಂಗಿ ಪುರಸಭೆಯ ಮಾಜಿ ಸದಸ್ಯರಾದ ರವಿ ಪಟ್ಟಣಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಬಸವರಾಜ ಹಾರಿವಾಳ ಟಿಎಪಿಎಂಸಿ ಯ ಅಧ್ಯಕ್ಷರಾದ ಚಂದ್ರಶೇಖರ್ ಗೌಡ ಪಾಟೀಲ ಪುರಸಭೆಯ ಮಾಜಿ ಸದಸ್ಯರಾದ ನೀಲು ನಾಯಕ ಪ್ರಗತಿಪರ ರೈತ ಸಿದ್ದನ ಕೊಲ್ಲೂರ ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಗದೇವಿ ಗುಂಡಳ್ಳಿ ಎಪಿಎಂಸಿಎ ಜಿಲ್ಲಾ ಮಾಜಿ ಅಧ್ಯಕ್ಷರಾದ ಶೇಖರ್ ಗೊಳಸಂಗಿ ಜಂಗಮ ಸಮಾಜದ ತಾಲೂಕ ಅಧ್ಯಕ್ಷರಾದ ರುದ್ರಮುನಿ ಸಾರಂಗಮಠ ಪಂಚಾಕ್ಷರಿ ಕಾಳಸ್ತೇಶ್ವರ ಮಠ ಮರಾಠ ಸಮಾಜದ ಯಮನೂರಿ ಬಿದರಕುಂದಿ ನಿವೃತ್ತಿ ಶಿಕ್ಷಕರಾದ ಶ್ರೀ ಎಸ್ ಎಸ್ ಜಳಕಿ ವೇದಿಕೆಯಲ್ಲಿದ್ದರು ಶರಣು ಬಸ್ತಾಳ ಪ್ರಾರ್ಥನಾ ಗೀತೆ ಹಾಡಿದರು ಪ್ರಾಸ್ತಾಯಕವಾಗಿ ಶ್ರೀ ಎಂ ಜಿ ಆದಿಕೊಂಡ ಮಾತನಾಡಿದರು ಸ್ವಾಗತವನ್ನು ಶ್ರೀ ವಿವೇಕಾನಂದ ಕಲ್ಯಾಣ ಶೆಟ್ಟಿ ಕಾರ್ಯಕ್ರಮ ವಂದನಾರ್ಪಣೆಯನ್ನು ಪ್ರಭಾಕರ ಕೆಡದ ಕಾರ್ಯಕ್ರಮ ನಿರೂಪಣೆಯನ್ನು ಕೊಟ್ರೇಶಿ ಹೆಗ್ಡಾಳ್ ಶಿಕ್ಷಕರು ನೆರವೇರಿಸಿದರು ಕಾರ್ಯಕ್ರಮಕ್ಕಿಂತ ಮುನ್ನ ಶ್ರೀ ಬಸವೇಶ್ವರ ಭಾವಚಿತ್ರ ಹಾಗೂ ಮುರುಗೇಂದ್ರ ಶ್ರೀಗಳ ಭಾವಚಿತ್ರದ ಮೆರವಣಿಗೆಯನ್ನು ಸಕಲ ವಾದ್ಯಗಳೊಂದಿಗೆ ಊರಿನ ಪ್ರಮುಖ ರಸ್ತೆಯ ಮೂಲಕ ಶ್ರೀ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಬಸವೇಶ್ವರ ಪುತ್ತಳಿಗೆ ಶ್ರೀಗಳಾದ ಸಿದ್ಲಿಂಗ ಮಹಾಸ್ವಾಮಿಗಳು ಮಾಲಾರ್ಪಣೆ ಮಾಡಿದರು ನಂತರ ಮೆರವಣಿಗೆಯು, ಮರಳಿ ಶ್ರೀ ಮಠಕ್ಕೆ ಸಕಲ ವಾದ್ಯಗಳೊಂದಿಗೆ ತಲುಪಿತು