ಮಾಲೂರು,ಸೆ.೧- ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಬಂಗಾರಪೇಟೆಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಒಕ್ಕೂಟದ ಅಭಿವೃದ್ಧಿಗೆ ಕೈಗೊಳ್ಳುವ ತೀರ್ಮಾನಗಳಿಗೆ ತುರ್ತು ಸಭೆಯಲ್ಲಿ ಸಹಕಾರ ನೀಡದೆ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ ಎಂದು ಕೋಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ. ನಂಜೇಗೌಡ ತಿರುಗೇಟು ನೀಡಿದರು.
ಅವರು ಕೋಮುಲ್ ಶಿಬಿರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ೨೦೨೪-೨೫ ನೇಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆ.೨೫ರಂದು ನಡೆಸಲು ತೀರ್ಮಾನಿಸಲಾಗಿದ್ದು, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಪ್ರತಿ ವರ್ಷವೂ ಸಹಕಾರ ಸಂಸ್ಥೆಯ ಸಾಮಾನ್ಯ ಸಭೆ ನಡೆಸುವುದು ಕಡ್ಡಾಯವಾಗಿರುತ್ತದೆ. ಸಾಮಾನ್ಯ ಸಭೆಯನ್ನು ನಡೆಸಲು ಕನಿಷ್ಠ ೧೫ ದಿನಗಳ ನೋಟಿಸ್ ಅನ್ನು ನೀಡುವುದರ ಮೂಲಕ ವಾರ್ಷಿಕ ಸಾಮಾನ್ಯ ಸಭೆಯ ಕರೆಯ ಬೇಕಾಗಿರುತ್ತದೆ. ಮುಖ್ಯ ಕಾರ್ಯನಿರ್ವಾಹಕರು ಸಹಕಾರ ಸಂಘದ ಅಧ್ಯಕ್ಷರೊಡನೆ ಸಮಾಲೋಚಿಸಿ ತುರ್ತು ಸಂದರ್ಭಗಳಲ್ಲಿ ಕನಿಷ್ಠ ೩ ದಿನಗಳ ಒಳಗೆ ನೋಟಿಸ್ ನೀಡುವುದರ ಮೂಲಕ ಆಡಳಿತ ಮಂಡಳಿ ಸಭೆಯನ್ನು ಕರೆಯಬಹುದೆಂದು ಅವಕಾಶ ಇದ್ದ ಕಾರಣ ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕಾದ ವಿಷಯಗಳು ಕಾರ್ಯ ಸೂಚಿಯನ್ನು ಮಂಡಳಿ ಸಭೆ ಅನುಮೋದನೆ ಪಡೆದು ಮಂಡಿಸಬೇಕಾಗಿರುವುದರಿಂದ ಸಾಮಾನ್ಯ ಸಭೆ ನಡೆಸಲು ಸಮಯ ಅಭಾವದಿಂದ ತುರ್ತು ಎಂದು ಭಾವಿಸಿ ಆಗಸ್ಟ್ ೩೦ ರಂದು ತುರ್ತು ಮಂಡಳಿ ಸಭೆಯನ್ನು ಕರೆಯಲಾಗಿತ್ತು.
ತುರ್ತು ಆಡಳಿತ ಮಂಡಳಿ ಸಭೆಯಲ್ಲಿ ಶಾಸಕರು ಹಾಗೂ ಒಕ್ಕೂಟದ ನಿರ್ದೇಶಕರಾಗಿರುವ ಎಸ್ ಎನ್ ನಾರಾಯಣಸ್ವಾಮಿ ಅವರು ಭಾಗವಹಿಸಿ ಸಾಮಾನ್ಯ ಸಭೆಗೆ ಮಂಡಿಸಬೇಕಾದ ಕಾರ್ಯ ಸೂಚಿಯಲ್ಲಿ ಆರ್ಥಿಕ ವಿಷಯಗಳು ಇರುವುದರಿಂದ ಅನುಮೋದನೆ ನೀಡುವುದಕ್ಕೆ ನನ್ನ ಆಕ್ಷೇಪಣೆ ಇದೆ ಎಂದು ಪ್ರತಿಪಾದಿಸಿದರು.
ಇದಕ್ಕೆ ಸಭೆಯಲ್ಲಿದ್ದ ಇತರೆ ೧೬ ಮಂದಿ ನಿರ್ದೇಶಕರು ಸಾಮಾನ್ಯ ಸಭೆಗೆ ಮಂಡಿಸುವ ವಿಷಯಗಳು ಈಗಾಗಲೇ ಹಿಂದಿನ ಸಭೆಗಳಲ್ಲಿ ತೀರ್ಮಾನ ಕೈಗೊಂಡಿದ್ದು ಈ ವಿಷಯಗಳನ್ನು ಸಾಮಾನ್ಯ ಸಭೆಗೆ ಮಂಡಿಸುವ ಕಾರ್ಯ ಸೂಚಿಗೆ ಮಾತ್ರ ಅನುಮೋದನೆ ನೀಡುವ ವಿಷಯವಾಗಿದ್ದು ಇಲ್ಲಿ ಯಾವುದೇ ಆರ್ಥಿಕ ಪರಿಣಾಮಗಳನ್ನು ಒಳಗೊಂಡ ತೀರ್ಮಾನ ಕೈಗೊಳ್ಳುತ್ತಿಲ್ಲವೆಂದು ಮನವರಿಕೆ ಮಾಡಿಕೊಟ್ಟರು.
ಎಸ್ ಎನ್ ನಾರಾಯಣಸ್ವಾಮಿ ಅವರು ಒಪ್ಪದ ಕಾರಣ ಅವರ ಆಕ್ಷೇಪಣೆಯನ್ನು ನಡಾವಳಿಗಳಲ್ಲಿ ದಾಖಲಿಸಿ ೧೬ಸಂಖ್ಯೆ ನಿರ್ದೇಶಕರುಗಳ ಸಮ್ಮತಿಯ ಮೇರೆಗೆ ವಿಷಯವನ್ನು ತೀರ್ಮಾನಿಸಿ ಸೆಪ್ಟಂಬರ್ ೨೫ ರಂದು ಒಕ್ಕೂಟದ ಸಾಮಾನ್ಯ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿರುತ್ತದೆ.
ಹಾಲು ಉತ್ಪಾದಕರು ಪೂರೈಸುವ ಗುಣಮಟ್ಟದ ಹಾಲಿಗೆ ಹೆಚ್ಚಿನ ಬೆಲೆ ಲಭಿಸುವಂತೆ ಸಂಘಗಳಲ್ಲಿ ಬಿಎಂಸಿ ಅಳವಡಿಸಿ ಪ್ಯಾಟ್ ಆಧಾರಿತ ದರ ನೀಡುತ್ತಿದ್ದು ವಾರ್ಷಿಕ ಮೂರು ಬಾರಿ ಸಹಕಾರ ಸಂಘಗಳ ಸಿಬ್ಬಂದಿಗೆ ಮಿಡಿ ಕ್ಲೈಮ್ ಸೌಲಭ್ಯ ಉತ್ಪಾದಕರಿಗೆ ಕೋಮಲ್ ವಿಮೆಯೊಂದಿಗೆ ಸೋಲಾರ್ ಘಟಕದಿಂದ ಉತ್ಪಾದನೆಯಾದ ಸೌರವಿದ್ಯುತ್ನಿಂದ ಜುಲೈ ಮಾಹೆಯಲ್ಲಿ ಒಕ್ಕೂಟಕ್ಕೆ ೭೦ ಲಕ್ಷಗಳ ವಿದ್ಯುತ್ ಬಿಲ್ ಉಳಿತಾಯವಾಗಿದ್ದು, ಒಕ್ಕೂಟದಲ್ಲಿ ಎಂವಿಕೆ ಗೋಲ್ಡನ್ ಡೈರಿ ಸ್ಥಾಪನೆ ಮಾಡುತ್ತಿದ್ದರು ಸಹ ವಿನಾಕಾರಣ ಒಕ್ಕೂಟದ ವಿಚಾರಗಳನ್ನು ಪತ್ರಿಕೆಗಳ ಮುಂದೆ ಬಿಂಬಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.
ಒಕ್ಕೂಟದ ಆಡಳಿತ ಮಂಡಳಿಗೆ ನಿರ್ದೇಶಕರಾಗಿರುವ ಎಸ್ ಎನ್ ನಾರಾಯಣಸ್ವಾಮಿ ಅವರಿಗೆ ಅನುಮಾನಗಳಿದ್ದರೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಬಹುದು ತುರ್ತು ಸಭೆಯ ಕರೆಯಲು ಅವಕಾಶವಿದೆ. ಒಂದು ವರ್ಷ ಆರ್ಥಿಕ ತೀರ್ಮಾನಗಳು ಬೇರೆ ಅಭಿವೃದ್ಧಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲು ಒಪ್ಪಿಗೆ ನೀಡಿಲ್ಲ ಆರ್ಥಿಕ ತೀರ್ಮಾನಗಳು ಆಗಿಲ್ಲ ಆಡಳಿತಾಕಾರಿ ಕಾಲದಲ್ಲಿ ೬೦ ಕೋಟಿಯಷ್ಟು ಅಕ್ರಮವಾಗಿದೆ ಎಂದು ಹೇಳಿದ್ದಾರೆ ಒಕ್ಕೂಟಕ್ಕೆ ಸಮಸ್ಯೆಗೆ ಅವಶ್ಯಕತೆ ಇರುವ ತೀರ್ಮಾನಗಳು ಆಡಳಿತ ಅಕಾರಿಗಳ ಅವಯಲ್ಲಿ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ದುರುಪಯೋಗವಾಗಿಲ್ಲ ನಾವೇ ಸಭೆಯಲ್ಲಿ ಚರ್ಚಿಸಿದ ಮೇರೆಗೆ ತನಿಖೆ ನಡೆಸಲು ನಿರ್ದೇಶಕರ ಸಮಿತಿ ಮಾಡಲಾಗಿದೆ. ತಾವು ಸಹ ಸಮಿತಿಯ ಸದಸ್ಯರಾಗಿದ್ದೀರಿ ಈಗಾಗಲೇ ನೀವು ಸಭೆಗಳನ್ನು ಮಾಹಿತಿಯನ್ನು ನೀಡಿ ತನಿಖೆಗೆ ಮೊದಲು ಒಪ್ಪಿಗೆ ನೀಡುವುದು ಹೇಗೆ ಎಂದು ಹೇಳಿದ್ದೀರಿ, ಆಡಳಿತ ಮಂಡಳಿ ಅವಯ ಒಪ್ಪಿಗೆಯಲ್ಲ ಇದು ಸರ್ವ ಸದಸ್ಯರ ಸಭೆಯಲ್ಲಿ ಮಂಡನೆ ಮಾಡುವುದು ಆರ್ಥಿಕ ಅಕ್ರಮಗಳು ಆಗಿದ್ದಲ್ಲಿ ಸಹಕಾರ ನೀಡಲಾಗುವುದಿಲ್ಲ ಒಕ್ಕೂಟಕ್ಕೆ ಇತಿಹಾಸವಿದೆ ಇಂದಿನಿಂದಲೂ ಆಡಳಿತ ಮಂಡಳಿಗಳು ಪಕ್ಷಭೇದ ಮರೆತು ಕಟ್ಟಿಕೊಂಡು ಬಂದಿದ್ದಾರೆ ನಾನು ಸಹ ಅಧ್ಯಕ್ಷನಾಗಿ ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಹಲವಾರು ರೀತಿಯ ಸೌಲತ್ತುಗಳನ್ನು ಸಹ ಹಾಲು ಉತ್ಪಾದಕರಿಗೆ ಒದಗಿಸಲಾಗಿದೆ ಇದುವರೆಗೂ ಯಾವೊಬ್ಬ ನಿರ್ದೇಶಕರು ಒಕ್ಕೂಟ ಹಾಗೂ ಹಾಲು ಉತ್ಪಾದಕರ ವಿರುದ್ಧವಾಗಿ ವೈಯಕ್ತಿಕವಾಗಿ ಮಾತನಾಡಲಿಲ್ಲ ಆದರೆ ನೀವು ಒಕ್ಕೂಟದ ಹಿತ ದೃಷ್ಟಿಯಿಂದ ಬದಲಾವಣೆ ಮಾಡಿಕೊಳ್ಳದಿದ್ದರೆ ಒಕ್ಕೂಟ ಹಾಗೂ ಹಾಲು ಉತ್ಪಾದಕರ ಮೇಲೆ ಪರಿಣಾಮ ಬೀರುತ್ತದೆ.
ಸರ್ಕಾರದ ಅನುದಾನವಲ್ಲ ಹಾಲು ಉತ್ಪಾದಕರ ಹಾಲು ಸಂಗ್ರಹಿಸಿ ಮಾರಾಟ ಮಾಡಿದ ಹಣದಿಂದ ಬಂದ ಲಾಭಾಂಶದಿಂದ ಒಕ್ಕೂಟದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಅಲ್ಲದೆ ಹಾಲು ಉತ್ಪಾದಕರಿಗೆ ಲಾಭಾಂಶವನ್ನು ನೀಡಲಾಗುತ್ತಿದೆ. ಏನಾದರೂ ಒಕ್ಕೂಟದಲ್ಲಿ ಆರ್ಥಿಕ ವ್ಯವಹಾರಗಳಾಗಿದ್ದರೆ ಸರ್ವ ಸದಸ್ಯರ ಸಭೆಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಪ್ರಶ್ನಿಸುತ್ತಾರೆ ನಿರ್ದೇಶಕರಾಗಿ ಹೇಳಿಕೆಗಳು ನೀಡಿ ಒಕ್ಕೂಟದ ಗೌರವಕ್ಕೆ ದಕ್ಕೆ ತರಬಾರದು ವಿರೋಧ ಪಕ್ಷದ ನಿರ್ದೇಶಕರು ಸಹಕಾರ ನೀಡುತ್ತಿದ್ದು ನಮ್ಮ ಪಕ್ಷದವರೇ ಆದ ನೀವು ಆಪಾದನೆ ಮಾಡಿ ಅನುಮಾನ ಪಡುವುದು ಒಳ್ಳೆಯ ಬೆಳವಣಿಗೆಯಲ್ಲ, ಎಂಎಲ್‌ಸಿ ಅನಿಲ್ ಅವರು ನಿಮಗೂ ಉತ್ತಮ ಬಾಂಧವ್ಯವಿತ್ತು ಆದರೆ ಈಗ ಅನಿಲ್ ಹೇಳಿದಂತೆ ನಾನು ಕೇಳಲು ಮಗುವೇನು ಅಲ್ಲ ರಾಜಕೀಯವಾಗಿ ಕೆಳ ಹಂತದಿಂದ ಮೇಲಕ್ಕೆ ಬಂದವನಾಗಿದ್ದೇನೆ. ನೀವು ಮರೆತಿರಬಹುದು ಅವರು ಒಬ್ಬ ನಮ್ಮ ಪಕ್ಷದ ಎಂಎಲ್‌ಸಿ ಆಗಿದ್ದಾರೆ ಅವರ ವಿರುದ್ಧ ನೀವು ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದರು.
































