ಕೋಲಾರ, ಜೂ ೧೩- ಸರ್ಕಾರ ನೀಡುವ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಉತ್ತಮ ಉದಾತ್ತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರೂ ವಿದ್ಯಾವಂತರಾಗಬೇಕು ಎಂದು ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ಎನ್. ಮುನಿರತ್ನಯ್ಯ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು .
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆದರ್ಶ ಪ್ರಾಯಾರಾಗುವಂತೆ ತಿಳಿಸಿದರು.
ಪಾಠದ ಜೊತೆ ಆಟ ಮತ್ತು ಇದರೊಂದಿಗೆ ಸಂಸ್ಕಾರ ಕಲಿತು ಪೋಷಕರು ಮೆಚ್ಚುವ ವಿದ್ಯಾರ್ಥಿಗಳಾಗಬೇಕು. ಪೈಪೋಟಿ ಜಗತ್ತಿನಲ್ಲಿ ಪೈಪೋಟಿ ಜಗತ್ತಿನಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಮೈಗೂಡಿಸಿಕೊಂಡು ರಾಷ್ಟ್ರೀಯ ಭ್ರಾತೃತ್ವ ಹೊಂದುವ ಅವಶ್ಯಕತೆ ಇದೆ ಎಂದರು .
ಪ್ರತಿಯೊಬ್ಬ ವಿದ್ಯಾರ್ಥಿ ವ್ಯಾಸಂಗ ಮಾಡುವಾಗ ಗುರಿಯನ್ನು ಹೊಂದಿದ್ದು ಈ ಕಡೆಗೆ ನನ್ನ ಪ್ರಯಾಣ ಆರಂಭಿಸಿದಾಗ ಗುರಿ ಮುಟ್ಟುವವರೆಗೂ ವಿದ್ಯಾಭ್ಯಾಸ, ಕಲಿಕೆ ನಿಲ್ಲಬಾರದು ಈ ಮೂಲಕ ಉನ್ನತ ಸ್ಥಾನಗಳಿಗೆ ಅಮ್ಮನ್ನು ತಾವು ಕೊಂಡೊಯ್ಯಬೇಕು ಎಂದರು .
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದು, ಅಧ್ಯಾಪಕರಾದ ಎಂ. ಆರ್ ಮೀನಾ, ಕೆ. ಮಮತಾ ಮತ್ತಿತರರು ಉಪಸ್ಥಿತರಿದ್ದರು.