ಎಷ್ಟೇ ಎತ್ತರಕ್ಕೆ ಬೆಳೆದರೂ ಬಂದ ದಾರಿ ಮರೆಯಬೇಡಿ

ಕೋಲಾರ,ನ.೬- ವಿದ್ಯಾರ್ಥಿಗಳು ಉತ್ತಮ ಜೀವನವನ್ನು ರೂಪಿಸಿಕೊಂಡು ಉನ್ನತ ಸ್ಥಾನಗಳನ್ನು ಅಲಂಕರಿಸಿದಾಗ ಹೆಚ್ಚು ಆನಂದ ಪಡುವವರು ಶಿಕ್ಷಕರೇ ಎಂದು ಹುತ್ತೂರು ಸರ್ಕಾರಿ ಪ್ರೌಢಶಾಲೆಯ ಶಾಲೆಯ ಮುಖ್ಯ ಶಿಕ್ಷಕಿ ಜಿ.ರುಕ್ಮಿಣಿ ಅಭಿಪ್ರಾಯಪಟ್ಟರು.


ತಾಲೂಕಿನ ಹುತ್ತೂರು ಸರ್ಕಾರಿ ಪ್ರೌಢಶಾಲೆಯ ೨೦೦೮-೦೯ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಬೇತಮಂಗಲ ರಸ್ತೆಯ ಅವನಿಯಾ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮತನಾಡುತ್ತಾ, ಎಷ್ಟೇ ಎತ್ತರಕ್ಕೆ ಬೆಳೆದರೂ ಬಂದ ದಾರಿಯನ್ನು ಮರೆಯಬೇಡಿ, ಹಿರಿಯರಿಗೆ ಗೌರವ ಕೊಡುವುದನ್ನು ಮರೆಯಬೇಡಿ, ಅಹಂನ್ನು ತಲೆಗೆ ತಂದುಕೊಳ್ಳಬೇಡಿ ಎಂದು ಹಿತವಚನಗಳನ್ನು ನುಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ನಾವು ಎಷ್ಟೇ ಕಾಟ ಕೊಟ್ಟರೂ, ಶಿಕ್ಷಕರಿಂದ ಎಷ್ಟೇ ಬಯಸಿಕೊಂಡರು ಜೀವನದ ಪಾಠ ಕಲಿತು ಒಳ್ಳೆಯ ಸಮಾಜದಲ್ಲಿ ಉತ್ತಮ ಅಧಿಕಾರಿಗಳಾಗಿ ಸೇವೆ ಸಲ್ಲಿಸುವಾಗ ಆಕಸ್ಮಿಕವಾಗಿ ತನ್ನ ಬಳಿ ಪಾಠ ಕಲಿತ ವಿದ್ಯಾರ್ಥಿ ಎದುರಾಗಿ ತಾವು ನಿಮ್ಮ ವಿದ್ಯಾರ್ಥಿ ಎಂದು ಹೇಳುವ ಸಂದರ್ಭದಲ್ಲಿ ಆಗುವ ಆನಂದಕ್ಕೆ ಸಾಟಿಯೇ ಇಲ್ಲ ಎಂದು ನುಡಿದ ಅವರು ಎಲ್ಲರಿಗೂ ಶುಭ ಹಾರೈಸಿದರು.


ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಜಿ.ರುಕ್ಮಿಣಿ, ಸಹ ಶಿಕ್ಷಕರಾದ ಮಂಜುನಾಥ ಬಲಮುರಿ, ಲಕ್ಷ್ಮಣ ಬಿ.ಎನ್, ಸುಬ್ರಮಣಿಯಪ್ಪ, ಶಂಕರಪ್ಪ, ಸುಶೀಲಾಭಟ್, ಸುಧಾರಾಣಿ, ಶೈಲ ಎಸ್ ಅವರನ್ನು ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿ ಆಶೀರ್ವಾದ ಪಡೆದುಕೊಂಡರು.


ಈ ಸಂದರ್ಭದಲ್ಲಿ ೨೦೦೮-೦೯ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಾದ ರಾಜೇಶ್ ಬಿ.ಕೆ, ಶ್ರೀಕಾಂತ, ವಿನಯ್‌ಕುಮಾರ್ ಆರ್, ಪ್ರಸನ್ನ ಹೆಚ್.ಎಲ್, ಬಲರಾಮ್, ಗಿರೀಶ್, ಜನಾರ್ಧನ್, ಸಂತೋಷ್(ಗುಂಡ), ಅಂಬರೀಶ್, ತ್ರಿವೇಣಿ, ಅಶ್ರಿತಾ, ಆಶಾ, ಅರ್ಚನ, ಸೌಮ್ಯ, ಪ್ರಿಯಾಂಕ, ಶ್ವೇತ, ಸಂತೋಷ್ ಎಂ.ಎನ್, ನವೀನ್ ವೈ.ಎನ್, ಶ್ರೀನಾಥ್ ಬಿ.ಎನ್, ಗಂಗಧರ್ ಬಿ.ಎಂ, ವೆಂಕಟಾಚಲಪತಿ, ಶಂಕರ್ ಹೆಚ್.ಜಿ, ಲೋಕೇಶ್, ಪ್ರವೀಣ್ ಎಂ.ಬಿ, ಕಾರ್ತಿಕ್ ಆರ್ ಇದ್ದರು.