Home ಜಿಲ್ಲೆ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಸಾಧನೆ ಗೈದ ವಿವಿಧ ಜಿಲ್ಲೆಯ ೯ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ...

ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಸಾಧನೆ ಗೈದ ವಿವಿಧ ಜಿಲ್ಲೆಯ ೯ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಬೀದರ್: ಚಿಟಗುಪ್ಪ ತಾಲೂಕಿನ ಬೋರಾಳ ಗ್ರಾಮದ ಎಸ್.ಆರ್. ಪದವಿ ಪೂರ್ವ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಸಾಧನೆ ಗೈದ ಕ್ರೀಡಾಪಟುಗಳಿಗೆ ಪ್ರಮಾಣಪತ್ರ ಹಾಗೂ ಮೆಡಲ್ ನೀಡಲಾಯಿತು ಎಂದು ಬೀದರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಚಂದ್ರಕಾAತ ಗಂಗಶೇಟ್ಟಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು, ಉಪನಿರ್ದೇಶಕರ ಕಚೇರಿ ಬೀದರ ಹಾಗೂ ಎಸ್.ಆರ್. ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ ೨೦೨೬-೨೭ನೇ ಸಾಲಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಎರಡು ದಿನಗಳ ರಾಜ್ಯಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಸಾಧನೆ ಗೈದ ವಿವಿಧ ಜಿಲ್ಲೆಯ ೯ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದು, ಅವರು ಮಾತನಾಡಿದರು.

೧೯ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ರಾಜ್ಯದ ೩೮ ಶೈಕ್ಷಣಿಕ ಜಿಲ್ಲೆಗಳ ಸುಮಾರು ೪೦೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ರಾಜ್ಯದಿಂದ ಬಾಲಕರ ವಿಭಾಗದಲ್ಲಿ: ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿವಕುಮಾರ್ ವಿ.ಜಿ., ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ಮೈಸೂರು ಜಿಲ್ಲೆಯ ರಜತ್ ಗಿರಿ, ಕಲಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಉತ್ಸವ್ ಎಸ್. ಮತ್ತು ಗೌತಮ್ ಜಲ್ಲೆ ಎಸ್.ಡಿ., ತಾಳಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀವತ್ಸರಾಜ್ ಮತ್ತು ಪೃಥ್ವಿಚಾರ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಬಾಲಕಿಯರ ವಿಭಾಗದಲ್ಲಿ: ಸಾಂಪ್ರದಾಯಿಕ ಯೋಗಾಸನ ವೈಯಕ್ತಿಕ ಹಾಗೂ ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗದಲ್ಲಿ ದಾವಣಗೆರೆ ಜಿಲ್ಲೆಯ ಸೃಷ್ಟಿ ಕೆ.ವೈ., ಕಲಾತ್ಮಕ ಯೋಗಾಸನ ಜೋಡಿ ಹಾಗೂ ತಾಳಾತ್ಮಕ ಯೋಗಾಸನ ಜೋಡಿ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅನನ್ಯಾ ಸುಧಾಕರ್ ಗುರು ಮತ್ತು ಪೂರ್ವಿಕಾ ಜೆ.ಎಂ. ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿದರು.

ಒಟ್ಟಿನಲ್ಲಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬಾಲಕ ಹಾಗೂ ಬಾಲಕಿಯರು ಪಾಲ್ಗೊಂಡಿದ್ದು, ಆಯ್ಕೆಗೊಂಡವರ ಅಂತಿಮ ಫಲಿತಾಂಶ ಪಟ್ಟಿ ಈಬಾಲಕರ ವಿಭಾಗದ ಫಲಿತಾಂಶ:ಸಾAಪ್ರದಾಯಿಕ ಯೋಗಾಸನ ವೈಯಕ್ತಿಕ ವಿಭಾಗ: ದಕ್ಷಿಣ ಕನ್ನಡ ಜಿಲ್ಲೆಯ ಶಿವಕುಮಾರ ವಿ.ಜಿ. (ಪ್ರಥಮ), ಮೈಸೂರು ಜಿಲ್ಲೆಯ ರಜತ್ ಗಿರಿ (ದ್ವಿತೀಯ), ಶಿವಮೊಗ್ಗ ಜಿಲ್ಲೆಯ ಉತ್ಸವ್ ಎಸ್. (ತೃತೀಯ).ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗ: ದಕ್ಷಿಣ ಕನ್ನಡ ಜಿಲ್ಲೆಯ ಶಿವಕುಮಾರ ವಿ.ಜಿ. (ಪ್ರಥಮ), ಮೈಸೂರು ಜಿಲ್ಲೆಯ ರಜತ್ ಗಿರಿ (ದ್ವಿತೀಯ), ಬಳ್ಳಾರಿ ಜಿಲ್ಲೆಯ ಗಿರಿರಾಜ (ತೃತೀಯ).ಕಲಾತ್ಮಕ ಯೋಗಾಸನ ಜೋಡಿ ವಿಭಾಗ: ಶಿವಮೊಗ್ಗ ಜಿಲ್ಲೆಯ ಉತ್ಸವ್ ಎಸ್. ಮತ್ತು ಗೌತಮ್ ಜಲ್ಲೆ (ಪ್ರಥಮ), ಬೆಂಗಳೂರು ಕೇಂದ್ರ ಜಿಲ್ಲೆಯ ಜೀವನ್ ಎ. ಮತ್ತು ಪ್ರೀತಮ್ ಶೇಖರ್ ಎಸ್. (ದ್ವಿತೀಯ), ಉತ್ತರ ಕನ್ನಡ ಜಿಲ್ಲೆಯ ಅಕ್ಷಯ ಗಣೇಶ ಭಟ್ ಮತ್ತು ಸಂಜಯ್ ಜಗದೀಶ ನಾಯಕ್ (ತೃತೀಯ).ತಾಳಾತ್ಮಕ ಯೋಗಾಸನ ಜೋಡಿ ವಿಭಾಗ, ದಕ್ಷಿಣ ಕನ್ನಡ ಜಿಲ್ಲೆಯ ಶ್ರೀವತ್ಸರಾಜ್ ಮತ್ತು ಪೃಥ್ವಿಚಾರ್ (ಪ್ರಥಮ), ಶಿವಮೊಗ್ಗ ಜಿಲ್ಲೆಯ ಉತ್ಸವ್ ಎಸ್. ಮತ್ತು ಸುದರ್ಶನ್ ಎಂ. (ದ್ವಿತೀಯ), ಧಾರವಾಡ ಜಿಲ್ಲೆಯ ಪ್ರೀತಮ್ ಜಿ. ಸುರಂಗಿ ಮತ್ತು ಉಮೇಶ್ ಎಚ್. ದೊಡಮನಿ (ತೃತೀಯ).

ಬಾಲಕಿಯರ ವಿಭಾಗದ ಫಲಿತಾಂಶ,ಸಾAಪ್ರದಾಯಿಕ ಯೋಗಾಸನ ವೈಯಕ್ತಿಕ ವಿಭಾಗ: ದಾವಣಗೆರೆ ಜಿಲ್ಲೆಯ ಸೃಷ್ಟಿ ಕೆ.ವೈ. (ಪ್ರಥಮ), ಹಾವೇರಿ ಜಿಲ್ಲೆಯ ಜಯಲಕ್ಷ್ಮಿ ಜಿ.ಕೆ. (ದ್ವಿತೀಯ), ಬೆಂಗಳೂರು ಉತ್ತರ ಜಿಲ್ಲೆಯ ಬೃಂದಾ ಎ.ಆರ್. (ತೃತೀಯ).ಕಲಾತ್ಮಕ ಯೋಗಾಸನ ವೈಯಕ್ತಿಕ ವಿಭಾಗ: ದಾವಣಗೆರೆ ಜಿಲ್ಲೆಯ ಸೃಷ್ಟಿ ಕೆ.ವೈ. (ಪ್ರಥಮ), ಉತ್ತರ ಕನ್ನಡ ಜಿಲ್ಲೆಯ ಸಂಪದಾ ಸತೀಶ್ ಹೆಗಡೆ (ದ್ವಿತೀಯ), ದಕ್ಷಿಣ ಕನ್ನಡ ಜಿಲ್ಲೆಯ ಎಚ್. ಅಭಿಜ್ಞಾ (ತೃತೀಯ). ಕಲಾತ್ಮಕ ಯೋಗಾಸನ ಜೋಡಿ ವಿಭಾಗ: ದಕ್ಷಿಣ ಕನ್ನಡ ಜಿಲ್ಲೆಯ ಪೂರ್ವಿಕಾ ಜೆ.ಎಂ. ಮತ್ತು ಅನನ್ಯ ಸುಧಾಕರ್ ಗುರುವ್ (ಪ್ರಥಮ), ಮೈಸೂರು ಜಿಲ್ಲೆಯ ಉಷಾ ಎಂ. ಮತ್ತು ದಿವ್ಯಾ ಎಂ.ಎ. (ದ್ವಿತೀಯ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಂದುಶ್ರೀ ಎಚ್. ಮತ್ತು ವರ್ಷಾ ಆರ್. (ತೃತೀಯ).ತಾಳಾತ್ಮಕ ಯೋಗಾಸನ ಜೋಡಿ ವಿಭಾಗ: ದಕ್ಷಿಣ ಕನ್ನಡ ಜಿಲ್ಲೆಯ ಪೂರ್ವಿಕಾ ಜೆ.ಎಂ. ಮತ್ತು ಅನನ್ಯ ಸುಧಾಕರ್ ಗುರುವ್ (ಪ್ರಥಮ), ಮಂಡ್ಯ ಜಿಲ್ಲೆಯ ಬಿಂದುಶ್ರೀ ಎನ್.ಸಿ. ಮತ್ತು ನೇಸರಾ ಎ.ಎಸ್. (ದ್ವಿತೀಯ), ಧಾರವಾಡ ಜಿಲ್ಲೆಯ ರತ್ನಾ ಶ್ಯಾಗೋಟಿ ಮತ್ತು ಜ್ಯೋತಿ ಇಂಗಳಗಿ (ತೃತೀಯ).ಬೀದರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾಲ್ಗೊಂಡ ಎಲ್ಲಾ ಕ್ರೀಡಾಪಟು ವಿದ್ಯಾರ್ಥಿಗಳಿಗೂ, ತಂಡದ ಪ್ರಮುಖರಿಗೂ ಹಾಗೂ ಯಶಸ್ವಿಗಾಗಿ ಸಹಕರಿಸಿದ ಇಲಾಖೆಯ ಅಧಿಕಾರಿಗಳಿಗೂ, ವೀಕ್ಷಕರು, ದೈಹಿಕ ಉಪನ್ಯಾಸಕರು, ನಿರ್ಣಾಯಕರು ಸೇರಿದಂತೆ ಪಿಯು ಕಾಲೇಜಿನ ಪ್ರಾಚಾರ್ಯರಿಗೂ ಹಾಗೂ ಸಿಬ್ಬಂದಿ ವರ್ಗಕ್ಕೆ ಅನಂತ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಕಿರಣ್ ಪಾಂಡುರAಗ, ಪ್ರಮುಖರಾದ ಓಂಪ್ರಕಾಶ ಧಡ್ಡೆ, ಲಿಂಗರಾಜ್ ಎಸ್., ಶಶಿಕುಮಾರ ಅಕ್ಕಿ, ಪ್ರೇಮಕುಮಾರ, ರಾಘವೇಂದ್ರ ಕಿರಣ, ಸಂಗನಬಸವ ಗೋರ್ಟೆ, ಶಿವಕುಮಾರ ಕೊಸಂ, ಶಿವಶರಣಪ್ಪ ನಾಟೀಕರ್, ಆನಂದ ಜಡೆಗೆ, ಶ್ರೀಮತಿಬಾಯಿ ರೆಡ್ಡಿ ಸೇರಿದಂತೆ ದೈಹಿಕ ಉಪನ್ಯಾಸಕರು, ನಿರ್ಣಾಯಕರು ಹಾಗೂ ಇತರರು ಉಪಸ್ಥಿತರಿದ್ದರು.