ನಾಳೆ ಮತ್ತು ನಾಡಿದ್ದು ಅಥಣಿಯಲ್ಲಿ ನಿನಾಸಂ ನಾಟಕೋತ್ಸವ : ಗಜಾನನ ಮಂಗಸೂಳಿ

ಅಥಣಿ : ರಾಹುಬಹದ್ದೂರ ಮಂಗಸೂಳಿ ಪ್ರತಿಷ್ಠಾನ ಹಾಗೂ ರೋಟರಿ ಸಂಸ್ಥೆಯ ಇವರ ಸಹಯೋಗದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಸುಕ್ಷೇತ್ರ ಗಚ್ಚನ ಮಠದ ಸಭಾಂಗಣದಲ್ಲಿ ನಾಳೆ ಮತ್ತು ನಾಡಿದ್ದು (ಡಿಸೆಂಬರ್ ೩ ಮತ್ತು ೪ ರಂದು) ಸಾಯಂಕಾಲ ೫:೩೦ ರಿಂದ ೭:೩೦ರ ವರೆಗೆ ನಿನಾಸಂ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳ ಸಭೆಯಲ್ಲಿ ನಿನಾಸಂ ನಾಟಕೋತ್ಸವದ ಕರಪತ್ರಗಳನ್ನ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡ ನಾಡಿನ ರಂಗಭೂಮಿ ಕಲೆ, ಭಾಷೆ, ಸಾಂಸ್ಕೃತಿಕ, ಧಾರ್ಮಿಕ, ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಅಂತರಾಷ್ಟ್ರೀಯ ಭೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಕಥೆಯನ್ನು ಆಧರಿಸಿದ ” ಹೃದಯದ ತೀರ್ಪು” ನಾಟಕ ಪ್ರದರ್ಶನ ಜರುಗಲಿದೆ, ಇದು ಮುಸ್ಲಿಂ ಕುಟುಂಬದ ಅತ್ತೆ-ಸೊಸೆ ನಡುವಿನ ಸಂಬAಧ ಮತ್ತು ಭಾವನಾತ್ಮಕ ಘಟನೆಗಳನ್ನು ಕುರಿತಾಗಿದೆ. ಈ ನಾಟಕವನ್ನು ಡಾ.ಎಂ.ಗಣೇಶ್ ನಿರ್ದೇಶಿಸಿದ್ದಾರೆ ಮತ್ತು ಮಳಯಾಳಂ ಮೂಲ ಕಥೆಯ ” ಅವತರಣo ಭ್ರಾಂತಾಲಯA” ನಾಟಕವನ್ನು ಜಿ. ಶಂಕರ ಪಿಳ್ಳೆ ರಚಿಸಿದ್ದಾರೆ. ಮಾನಸಿಕ ಆಸ್ಪತ್ರೆಯ ರೋಗಿಗಳ ಹುಚ್ಚಾಟಗಳ ಸರಣಿಯನ್ನು ಆಧರಿಸಿದ ಈ ನಾಟಕ ಪ್ರೇಕ್ಷಕರ ಮನ ಗೆದ್ದಿದೆ. ಈ ನಾಟಕ ಪ್ರದರ್ಶನ ಉಚಿತವಾಗಿದ್ದು ಅಥಣಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕಲಾಭಿಮಾನಿಗಳು, ನಾಟಕ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಎರಡು ನಾಟಕಗಳನ್ನು ವೀಕ್ಷಿಸಿ ಕಲಾವಿದರನ್ನು ಮತ್ತು ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ರೋಟರಿ ಸಂಸ್ಥೆಯ ತಾಲೂಕಾ ಅಧ್ಯಕ್ಷ ಸಚಿನ ದೇಸಾಯಿ ಮಾತನಾಡಿ ಡಿಸೆಂಬರ್ ೩ ರಂದು ಸಾಯಂಕಾಲ ೫:೦೦ಗೆ ನಿನಾಸಂ ನಾಟಕೋತ್ಸವ ಉದ್ಘಾಟನಾ ಸಮಾರಂಭ ಜರುಗಲಿದ್ದು, ಗಚ್ಚಿನ ಮಠದ ಶಿವ ಬಸವ ಸ್ವಾಮೀಜಿ ಸಾನಿಧ್ಯ ವಹಿಸುವರು, ಮುಖ ಅತಿಥಿಗಳಾಗಿ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ಯುವ ಮುಖಂಡ ಶಿವು ಗುಡ್ಡಾಪುರ, ಉದ್ಯಮಿಗಳಾದ ರಾವಸಾಬ ಐಹೊಳೆ, ರವಿ ಪೂಜಾರಿ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ. ರೊಟರಿ ಸಂಸ್ಥೆಯ ಎಲ್ಲಾ ಸದಸ್ಯರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕಗಳನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಪ್ರಾಂತಪಾಲ ಮೇಘರಾಜ್ ಪರಮಾರ, ಕಾರ್ಯದರ್ಶಿ ಶೇಖರ್ ಕೋಲಾರ, ಖಜಾಂಚಿ ಸಂತೋಷ ಬೊಮ್ಮಣ್ಣವರ, ಮಂಗಸುಳಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಜಿ ಹಂಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.