
ಭಾಲ್ಕಿ :ಜೂ.11: ತಾಲೂಕಿನ ಅಂಬೇಸಾಂಗವಿ ಗ್ರಾಮದ ನಿಧಿ ಸಚಿನ ತಿವಾರಿ ಇವರು ಬೆಂಗಳೂರಿನ ಮಣಿಪಾಲ ಯುನಿವರ್ಸಿಟಿ ಆಫ್ ಟೆಕ್ನಾಲಾಜಿ ಕಾಲೇಜಿನಲ್ಲಿ ಆರ್ಟಿಫಿಸಿಯಲ್ ಇಂಟಲಿಜೆನ್ಸಿ ವಿಷಯದಲ್ಲಿ ಅಂತಿಮ ವರ್ಷದ ಅಭ್ಯಥಿಯಾಗಿ ಅಭ್ಯಾಸ ಮಾಡುತ್ತಿದ್ದು, ಈ ಕಾಲೇಜಿನಿಂದ ನ್ಯುಜಿಲ್ಯಾಂಡನ ಆಕಲ್ಯಾಂಡ ವಿಶ್ವ ವಿದ್ಯಾಲಯಕ್ಕೆ ಏಕೈಕ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ.
ನಿಧಿ ತಿವಾರಿ ಇವರು ತಮ್ಮ ಕಾಲೇಜಿನಿಂದ ಕೈಗೊಳ್ಳುತ್ತಿರುವ ಪ್ರಥಿಷ್ಠಿತ ಪ್ರೊಜೆಕ್ಟ್ ಮುಖಾಂತರ ಒಂದು ಹೊಸ ಹೆಜ್ಜೆ ಗುರುತಿನೊಂದಿಗೆ ಸಂಶೋಧನೆ ಮಾಡುವ ಉದ್ದೇಶದಿಂದ ನ್ಯುಜಿಲ್ಯಾಂಡಿಗೆ ಪ್ರಯಾಣ ಬೆಳೆಸಿದ್ದಾಳೆ.
ಇವಳ ಸಾಧನೆಯನ್ನು ತಾಯಿ ಸೋನಿಯಾ ತಂದೆ ಸಚಿನ ತಿವಾರಿ ಹಾಗೂ ಅಜ್ಜ ನಿವೃತ್ತ ಶಿಕ್ಷಕರಾದ ಪ್ರಮೋದಕುಮಾರ ತಿವಾರಿ ಇವರೆಲ್ಲರಿಗೆ ತುಂಬಾ ಹರ್ಷ ತಂದು ಕೊಟ್ಟಿದ್ದಾಳೆ.