ಅರ್ಥಪೂರ್ಣ ವೇಮನ ಜಯಂತಿ ಆಚರಣೆಗೆ ನಿಧಾರ

ಬೀದರ್: ಜ.೧೨:ನಗರದಲ್ಲಿ ಜ. ೧೯ ರಂದು ಮಹಾ ಯೋಗಿ ವೇಮನ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ ಹೇಳಿದರು.
ನಗರದ ಹೇಮರೆಡ್ಡಿ ಮಲ್ಲಮ್ಮ ಮಂದಿರದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಆಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂದು ಬೆಳಿಗ್ಗೆ ೧೦ಕ್ಕೆ ವೇಮನ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಲಿದೆ. ಬೆಳಿಗ್ಗೆ ೧೧ಕ್ಕೆ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಮಾಜದವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಮಾಜದ ಮುಖಂಡರಾದ ಸಂಗ್ರಾಮ ರೆಡ್ಡಿ, ಸಂಜು ರೆಡ್ಡಿ ತರ್ತರೆ, ಜಗನ್ನಾಥ ರೆಡ್ಡಿ, ವೆಂಕಟರೆಡ್ಡಿ, ಬಾಬುರೆಡ್ಡಿ ಮೈಲೂರು, ಗೋಪಾಲ್ ರೆಡ್ಡಿ, ರವಿ ರೆಡ್ಡಿ, ನರಸಿಂಹ ರೆಡ್ಡಿ, ಪೆಂಟಾರೆಡ್ಡಿ, ಬಲವಂತ ರೆಡ್ಡಿ, ಮಹಿಪಾಲ್ ರೆಡ್ಡಿ, ಶಿವಾನಂದ ರೆಡ್ಡಿ, ರಾಜ ರೆಡ್ಡಿ, ಮಲರೆಡ್ಡಿ ಗುಂಡೂರ, ವೀರೂ ರೆಡ್ಡಿ ದಿಗ್ವಾಲ್, ಅಶೋಕ ರೆಡ್ಡಿ, ದತ್ತು ರೆಡ್ಡಿ ಮತ್ತಿತರರು ಇದ್ದರು.