
ಯಾದಗಿರಿ:ಫೆ.೨೫:ಸಾರ್ವಜನಿಕ ಜೀವನದಲ್ಲಿ ಚುರುಕಿನ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ಮಹೇಶ ರೆಡ್ಡಿ ಮುದ್ನಾಳ ಅವರಿಗೆ ನಗರದಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರಿಂದ ಗೌರವ ಸನ್ಮಾನ ಸಲ್ಲಿಸಲಾಯಿತು. ಮಾಜಿ ಶಾಸಕ ವೆಂಕಟರೆಡ್ಡಿ ಅವರ ಜನಸಂಪರ್ಕ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮವು ರಾಜಕೀಯವಾಗಿ ವಿಶೇಷ ಮಹತ್ವ ಪಡೆದಿತು.
ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಮೋಹನಬಾಬು, ಮುದ್ನಾಳ್ ಮನೆತನವು ಹಲವು ದಶಕಗಳಿಂದ ಜನಸೇವೆ, ಪ್ರಾಮಾಣಿಕತೆ ಮತ್ತು ನಿಷ್ಠೆಯ ರಾಜಕೀಯಕ್ಕೆ ಹೆಸರಾಗಿದ್ದು, ಅದೇ ಪರಂಪರೆಯನ್ನು ಮಹೇಶರೆಡ್ಡಿ ಮುಂದುವರಿಸುತ್ತಿದ್ದಾರೆ ಎಂದರು. “ಕುಟುಂಬದ ಹಿರಿಯರು ಜನರ ವಿಶ್ವಾಸವನ್ನು ಗಳಿಸಿದ ರೀತಿಯೇ, ಮಹೇಶರೆಡ್ಡಿ ಕೂಡ ಯುವಶಕ್ತಿಯನ್ನು ಸಂಘಟಿಸಿ ಜನಪರ ರಾಜಕೀಯಕ್ಕೆ ಹೊಸ ದಿಕ್ಕು ನೀಡುತ್ತಿದ್ದಾರೆ. ಅವರಲ್ಲಿ ಭವಿಷ್ಯದ ಶಕ್ತಿಶಾಲಿ ನಾಯಕತ್ವದ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ,” ಎಂದು ಅಭಿಪ್ರಾಯಪಟ್ಟರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ಸ್ವೀಕರಿಸಿರುವ ಮಹೇಶರೆಡ್ಡಿ ಮುದ್ನಾಳ್, “ಪಕ್ಷ ನೀಡಿರುವ ಈ ಅವಕಾಶ ನನ್ನ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕ. ಜನರ ಆಶೀರ್ವಾದ ಮತ್ತು ಕಾರ್ಯಕರ್ತರ ಬೆಂಬಲದೊAದಿಗೆ ಇನ್ನಷ್ಟು ತೊಡಗಿಸಿಕೊಂಡು ಸೇವೆ ಸಲ್ಲಿಸುವುದು ನನ್ನ ಸಂಕಲ್ಪ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಭಾಗಗಳ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಹೇಶರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿ, ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸಿದರು. ಯುವ ನಾಯಕತ್ವಕ್ಕೆ ಬಲ ತುಂಬುವ ಈ ಸನ್ಮಾನ ಸಮಾರಂಭವು ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.
ಸೋಮನಾಥ ಜೈನ್, ಶಿವರಾಜ ಪಾಟೀಲ್ ವಾರದ, ಪರಮಾನಂದರೆಡ್ಡಿ ಕೊಲ್ಲೂರ್, ನರಸಯ್ಯ ಕಲಕುಂಡಿ, ಶರಣಭೂಪಾಲರೆಡ್ಡಿ ಗೋಸ್ವಾಮಿ, ಚನ್ನಪ್ಪ ಬೋಮರೆಡ್ಡಿ ಬಿಳ್ಹಾರ್, ವೀರಣ್ಣ ಜಾಕಾ, ಭೀಮಶೇನರಾವ ಪುರಾಣಿಕ, ರವಿಕುಮಾರ ಕಂದಕೂರ್, ಶರಣಗೌಡ ವಡಗೇರಾ, ಬಸವರಾಜ ಚಾಮಾ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



























