ಕೆಜಿಎಫ್ ನಲ್ಲಿ ನೂತನ ಕ್ರಿಶ್ಚಿಯನ್ ಚರ್ಚ್ ಉದ್ಘಾಟನೆ

ಬೆಂಗಳೂರು, ಜೂನ್ ೩೦-ಕರ್ನಾಟಕ ರಾಜ್ಯ ಕೆಜಿಎಫ್‌ಆಲ್ಫಾ ಒಮೆಗಾ ಚರ್ಚ್‌ನ ೩೩ ನೇ ವಾರ್ಷಿಕೋತ್ಸವ ಮತ್ತು ಹೊಸ ಚರ್ಚ್‌ನ ಲೋಕಾರ್ಪಣೆ ಸಮಾರಂಭವು ಏರ್‌ಟೆಲ್ ಟವರ್ ಎದುರು, ೯ ನೇ ಕ್ರಾಸ್, ಪೈಪ್‌ಲೈನ್ ರಸ್ತೆ, ರಾಬರ್ಟ್‌ಸನ್‌ಪೇಟೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿ, ಏಷ್ಯಾ ಇಂಟರ್ನ್ಯಾಷನಲ್ ಸರ್ವೀಸಸ್ ನ ಸಂಸ್ಥಾಪಕ ಮತ್ತು ಖ್ಯಾತ ಸಮಾಜ ಸೇವಕ ರಮೇಶ್ ಕುಮಾರ್ ಸಕಾಲಿ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಹೊಸ ಚರ್ಚ್ ಅನ್ನು ಉದ್ಘಾಟಿಸಿ ಸುವಾರ್ತೆ ಸಾರಿದರು.

ಇದಕ್ಕೂ ಮೊದಲು ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಮತ್ತು ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ರೆವರೆಂಡ್ ಪಾದ್ರಿ ಎಂ ಜಾನ್ ವಿಕ್ಟರ್, ಪಾದ್ರಿ ಶೀಬಾ ಶಾಂತಿ ಜಾನ್, ರೆವರೆಂಡ್ ಪಾದ್ರಿ ಟಿ. ಸತ್ಯ, ಪಾದ್ರಿ ಕಥಿರ್ ವಿಲಿಯಮ್ಸ್, ಬಿಷಪ್ ಮನೋವಾ ನಿಕೋಲ್ಸನ್, ಬಿಷಪ್ ಬೆನ್ನಿ ಯೇಸು, ಬಿಷಪ್ ಜ್ಞಾನಕರನ್, ರೆವರೆಂಡ್ ನೋಯೆಲ್ ಬಿನ್ನಿ ಜಾನ್ ಮತ್ತು ಅನೇಕರು ಉಪಸ್ಥಿತರಿದ್ದರು.