ನೇತಾಜಿ, ಶಾಸ್ತಿç ಸರ್ಕಲ್ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ತುನ್ನೂರು

ಯಾದಗಿರಿ,ನ.೫-ನಗರದ ಅಭಿವೃದ್ಧಿ ಹಾಗೂ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕೆಲಸಗಳು ಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಗಾಂಧಿ ವೃತ್ತದಂತೆಯೇ ನೇತಾಜಿ ಮತ್ತು ಶಾಸ್ತ್ರೀ ವೃತ್ತಗಳಿಗೆ ಹೈಟೆಕ್ ಟಚ್ ನೀಡಲಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಇಲ್ಲಿನ ಹಳೆ ಬಸ್ ನಿಲ್ದಾಣ ಸಮೀಪದ ನೇತಾಜಿ ಸುಭಾಷಚಂದ್ರ ಬೋಸ್ ಹಾಗೂ ರೈಲ್ವೆ ಸ್ಟೇಷನ್ ರಸ್ತೆಯಲ್ಲಿನ ಲಾಲ ಬಹುದ್ದೂರ್ ಶಾಸ್ತ್ರಿ ಸರ್ಕಲ್ ಗಳಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸೋಮವಾರ ಕಾಮಗಾರಿ ಪರಿಶೀಲಿಸಿದರು.
ಕೆಕೆಆರ್ ಡಿಬಿ ಅನುದಾನದಡಿ ಈ ಎರಡು ಕೆಲಸಗಳಿಗೆ ಒಟ್ಟು ೧೪.೯೦ ಲಕ್ಷ ರೂ. ಬಿಡುಗಡೆಯಾಗಿದೆ. ನಿರ್ಮಿತಿ ಕೇಂದ್ರದಿAದ ಕೆಲಸ ಆರಂಭಗೊAಡಿದೆ.
೧೪ ಫಿಟ್ ಸುತ್ತುಗೊಡೆ, ಗ್ರ‍್ಯಾನೆಟ್ ಹಾಸಿಗೆ, ಎಸ್.ಎಸ್. ಸ್ಟೀಲ್ ಗ್ರೀಲ್, ಸ್ಟೇಪ್ಸ್, ಛತ್ರಿ, ದೀಪಂಕಾರ, ಕಾರಂಜಿ ಸೇರಿದಂತೆಯೇ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಈ ಎರಡು ಮಹತ್ವದ ಸರ್ಕಲ್ ಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಶಾಸಕ ಪಾಟೀಲ್ ಹೇಳಿದ್ದಾರೆ.
ನಗರಸಭೆ ಸದಸ್ಯ ಚನ್ನಕೇಶವ ಬಾಣತಿಹಾಳ, ಮಲ್ಲಿಕಾರ್ಜುನ ಈಟೆ, ನಿರ್ಮಿತಿ ಕೇಂದ್ರ ಎಇ ರವಿ ಕಂದಕೂರ ಇದ್ದರು.