“ವಂದೇ ಮಾತರಂ” ಹಾಡಿನ 150 ವರ್ಷಗಳ ಸ್ಮರಣಾರ್ಥ: ಎನ್‍ಸಿಸಿ ಘಟಕದಿಂದ ರ್ಯಾಲಿ

ಬೀದರ, ನ.08: “ವಂದೇ ಮಾತರಂ” ಹಾಡಿನ 150 ವರ್ಷಗಳ ಸ್ಮರಣಾರ್ಥವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಬೀದರ್ ಟ್ರಾಫಿಕ್ ಪೆÇಲೀಸ್ ಮತ್ತು ಬ್ರಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ 3 ಕಾರ್ ಏರ್ ಎನ್‍ಸಿಸಿ ತಂಡವು ಶುಕ್ರವಾರದಂದು “ವಂದೇ ಮಾತರಂ” ರಾಷ್ಟ್ರೀಯ ಗೀತೆಯ ಬಗ್ಗೆ ಜಾಗೃತಿ ಮತ್ತು ಮಹತ್ವವನ್ನು ತರಲು ಮತ್ತು ಜನರಲ್ಲಿ ಒಗ್ಗಟ್ಟು ಮೂಡಿಸಲು ಎನ್‍ಸಿಸಿ ಘಟಕದಿಂದ ರ್ಯಾಲಿ ಆಯೋಜಿಸಲಾಗಿತ್ತು.
ಈ ರ್ಯಾಲಿಯು ನಗರದ ಅಂಬೇಡ್ಕರ್ ವೃತ್ತ, ನೌಬಾದ್ ರಸ್ತೆ ಮತ್ತು ಬ್ರಿಮ್ಸ್ ಆಸ್ಪತ್ರೆಯ ಮೂಲಕ ಸಾಗಿತು. 100 ಎನ್‍ಸಿಸಿ ಕೆಡೆಟ್‍ಗಳು ರಾಷ್ಟ್ರಗೀತೆಯ ಮಹತ್ವವನ್ನು ಪ್ರಚಾರ ಮಾಡುವ ಫಲಕಗಳೊಂದಿಗೆ ನಡೆಸಲಾಯಿತು. ನಂತರ ಬೀದರನ ಬ್ರಿಮ್ಸ್ ಆಸ್ಪತ್ರೆಯಲ್ಲಿ 100 ಎನ್‍ಸಿಸಿ ಕೆಡೆಟ್‍ಗಳಿಂದ ರಕ್ತದಾನ ಶಿಬಿರ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ 3 ಕಾರ್ ಏರ್ (ಟಿ) ಎನ್‍ಸಿಸಿಯ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ವಿಎನ್‍ಎಲ್ ರೆಡ್ಡಿ, ಜೆಡಬ್ಲ್ಯೂಒ ಪ್ರದೀಪ್ ಸಿಂಗ್ (ಅಡ್ಜುಟಂಟ್), ಪಿಐ ಸಿಬ್ಬಂದಿ ಎನ್‍ಸಿಸಿ ಘಟಕ, ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಫ್ಲೈಟ್ ಲೆಫ್ಟಿನೆಂಟ್ ಅನೂಪ್ ಕುಮಾರ್ ಎಲಿಯಾ (ಎಎನ್‍ಒ), ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಫ್ಲೈಯಿಂಗ್ ಆಫೀಸರ್ ನಾಗರಾಜ್ (ಎಎನ್‍ಒ) ಸೇರಿದಂತೆ ಇತರರು ಉಪಸ್ಥಿತರಿದ್ದರು