
ತಾಳಿಕೋಟೆ:ಜ.೩: ಈ ನಮ್ಮ ನಾಡು ಅತ್ಯಂತ ಪುಣ್ಯಭೂಮಿಯಾಗಿದೆ ಈ ಭೂಮಿಯಲ್ಲಿ ಅನೇಕ ಶರಣರು, ಸಂತರು ಜನಿಸಿ ಹೋಗಿದ್ದಾರೆ ಅದರಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರಶ್ರೀಗಳು ದೇಹದಿಂದ ಮರೆಯಾದರೂ ಅವರು ಅಜರಾಮರಾಗಿ ನಮ್ಮಲ್ಲೇರ ಜೊತೆಗೆ ಉಳಿದುಕೊಂಡಿದ್ದಾರೆAದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಶುಕ್ರವಾರರಂದು ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಹತ್ತಿರ ಆಯೋಜಿಸಲಾದ ಪರಮಪೂಜ್ಯ ಸಿದ್ದೇಶ್ವರಶ್ರೀಗಳ ೩ನೇ ವರ್ಷದ ನುಡಿ ನಮನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಿದ್ದೇಶ್ವರಶ್ರೀಗಳು ನಾಡುಕಂಡ ಶತಮಾನದ ಸಂತರಾಗಿದ್ದರು ಅವರು ನುಡಿದರೆ ಪ್ರಕೃತಿಯೇ ವಿಸ್ಮಯಗೊಳ್ಳುತ್ತಿತ್ತು ಇದು ಲಕ್ಷಾಂತರ ಭಕ್ತರಿಗೆ ಕಾಣಿಸಿದೆ ಸಿದ್ದೇಶ್ವರ ಶ್ರೀಗಳು ಪ್ರವಚನದ ಮೂಲಕ ನೀಡಿದ ಜ್ಞಾನದಸಾರ ಇಡೀ ಮನಕುಲವನ್ನೇ ಉದ್ದರಿಸುವಂತಹದ್ದಾಗಿದೆ ಅವರ ಪ್ರವಚನ ಕೇಳುವದೆಂದರೆ ಲಕ್ಷಾಂತರ ಭಕ್ತರಿದ್ದರೂ ಕೂಡಾ ಇಡೀ ಸಭಿಕವೇ ಮತ್ತು ಪ್ರಕೃತಿಯೇ ನಿಶಬ್ದವಾಗಿರುತ್ತಿತ್ತು ಅಂತಹ ಜ್ಞಾನದ ಹೊತ್ತಿಗೆ ಇಡೀ ಭಕ್ತರನ್ನು ಸನ್ಮಾರ್ಗದ ದಾರಿಯತ್ತ ಕೊಂಡೊಯುತ್ತಿದೆ ಎಂದ ಅವರು ಸಿದ್ದೇಶ್ವರಶ್ರೀಗಳು ಕೇವಲ ಮಾತನಾಡದೇ ನಡೆದು ತೋರಿಸಿದ್ದಾರೆ ಅವರ ನಡೆ ನುಡಿ ಆಚಾರ ವಿಚಾರಗಳು ಎಲ್ಲರ ಬಧುಕಿಗೆ ಸ್ಪೂರ್ತಿಯಾಗಿವೆ ಅವರ ನುಡಿ ನಮನ ಕಾರ್ಯಕ್ರಮವು ಎಲ್ಲರ ಜೀವನದಾರಿ ಸನ್ಮಾರ್ಗದಕಡೆಗೆ ಸಾಗಲಿ ಎಂದು ಆಶಿಸಿದರು.
ನಿವೃತ್ತ ಉಪನ್ಯಾಸಕ ಜಿ ಎಸ್ ಜಮ್ಮಲದಿನ್ನಿ, ರಾಘವೇಂದ್ರ ವಿಜಾಪುರ ಮಾತನಾಡಿದರು. ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ಡಾ.ವಿ.ಎಸ್.ಕಾರ್ಚಿ, ಮಾನಸಿಂಗ್ ಕೊಕಟನೂರ, ಎಚ್.ಎಸ್.ಪಾಟೀಲ(ಬಾವೂರ), ಪರಶುರಾಮ ತಂಗಡಗಿ, ಸಂಗಮೇಶ ಹಾರಿವಾಳ, ಪರಶುರಾಮ ಕಟ್ಟಿಮನಿ, ಶಿವಾಜಿ ಶೇವಳಕರ, ಕಾಶಿನಾಥ ಮುರಾಳ, ಎಂ.ಎಸ್. ಸರಶಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಸುವರ್ಣಾ ಬಿರಾದಾರ, ಮುತ್ತು ಕಶಟ್ಟಿ, ದ್ಯಾಮನಗೌಡ ಪಾಟೀಲ, ನ್ಯಾಯವಾದಿ ಎಂ.ಕೆ ಮೇತ್ರಿ, ಕಾಶಿನಾಥ ಸಜ್ಜನ, ಅಂಬಾಜಿ ಜಾಧವ, ಮಲ್ಲು ನಾಯ್ಕೋಡಿ, ಅಮಿತಸಿಂಗ್ ಮನಗೂಳಿ, ನಾಗೇಶ ಕಟ್ಟಿಮನಿ, ಮಹಬೂಬ ಕೆಂಭಾವಿ, ವೀರೇಶ ಬಾಗೇವಾಡಿ, ಬಸವರಾಜ ಮದರಕಲ್ಲ, ರಾಮನಗೌಡ ಬಾಗೇವಾಡಿ, ಎಂ.ಎಸ್.ನಾಗರಾಳ, ಈಶ್ವರ ಹೂಗಾರ, ರಾಘು ಮಾನೆ, ಶಫೀಕ ಇನಾಮದಾರ, ಗೋಪಾಲ ಕಟ್ಟಿಮನಿ, ರವಿ ಚಂದುಕರ್, ಸಂಜು ಹಜೇರಿ, ಪರಶುರಾಮ ತಂಗಡಗಿ, ರಾಜು ಸಜ್ಜನ, ಅಶೋಕ ಚಿನಗುಡಿ, ದತ್ತು ಉಬಾಳೆ, ಜಗದೀಶ ಬಿಳೆಭಾವಿ ಮೊದಲಾದವರು ಉಪಸ್ಥಿತರಿದ್ದರು. ಮಹಾಂತೇಶ ಮುರಾಳ ಕಾರ್ಯಕ್ರಮ ನಿರ್ವಹಿಸಿದರು.






















