ಆ.26 ರಂದು ರಾಷ್ಟ್ರವ್ಯಾಪ್ತಿ ವೀರಭದ್ರೇಶ್ವರ ಜಯಂತ್ಯೋತ್ಸವ

ಕಲಬುರಗಿ,ಆ.22: ಸೃóಷ್ಟಿಕರ್ತ ಸಾಕ್ಷಾತ್ ಪರಮೇಶ್ವರನ ಉಗ್ರರೂಪವೇ ಆಗಿರುವ ಬೆಂಕಿ ಪ್ರಿಯ, ಗುಗ್ಗುಳ ಪ್ರಿಯ
ವೀರಭದ್ರೇಶ್ವರ ದೇವರು ದಕ್ಷ ಬ್ರಹ್ಮನನ್ನು ಸಂಹಾರ ಮಾಡಲು ಶಿವನ ಜಡೆಯಿಂದ ಭೂಮಿಯಮೇಲೆ ಉದ್ಭವಿಸಿದ ಪವಿತ್ರ ದಿವಸವಾದ ಭಾದ್ರಪದ ಮಾಸದ ಮೊದಲ ಮಂಗಳವಾರ, ಪ್ರತಿ ವರ್ಷ ವಿಶ್ವದಾದ್ಯಂತ ವೀರಭದ್ರೇಶ್ವರ ದೇವರ ಕೋಟ್ಯಾಂತರ ಭಕ್ತರ ಮನೆ,ಮಠ ಮತ್ತು ದೇವಸ್ಧಾನಗಳಲ್ಲಿ ವೀರಭದ್ರೇಶ್ವರದೇವರ ಹಬ್ಬವನ್ನಾಗಿ ಬಹು ವಿಜ್ರಂಬಣೆಯಿಂದಆಚರಿಸೋಣ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ.ಶಿವಶರಣಪ್ಪ ಮತ್ತು ಸಿದ್ರಾಮಪ್ಪ ಆಲಗುಡಕರ್ ಜಂಟಿಯಾಗಿ ಕರೆಕೊಟ್ಟಿದಾರೆ.
ನಮ್ಮದೇಶದಾದ್ಯಂತ ವೀರಭದ್ರೇಶ್ವರದೇವರ ಲಕ್ಷಾಂತರ ದೇವಸ್ಧಾನಗಳನ್ನು ಹೊಂದಿದ್ದೇವೆ. ಹಾಗೂ ಕೋಟ್ಯಾಂತರ ಜನರು ವೀರಭದ್ರೇಶ್ವರದೇವರ ಭಕ್ತರಿದ್ದಾರೆ, ಆದರೆ ಪ್ರತಿವರ್ಷ ವೀರಭದ್ರೇಶ್ವರ ದೇವಸ್ಧಾನಗಳಲ್ಲಿ ವೀರಭದ್ರೇಶ್ವರ ದೇವರಜಾತ್ರೆಗಳನ್ನು ಮಾತ್ರ ನಾವು ಆಚರಣೆ ಮಾಡುತ್ತೇವೆ. ಆದರೆ ವಿಶ್ವದ್ಯಾದಂತ ಎಕ ಕಾಲಕ್ಕೆ ವೀರಭದ್ರೇಶ್ವರದೇವರಹಬ್ಬವನ್ನುಆಚರಿಸುತ್ತಿಲ್ಲ.ಹೀಗಾಗಿ ಭಾದ್ರಪದಮಾಸದ ಮೊದಲ ಮಂಗಳವಾರದಂದು ವೀರಭದ್ರೇಶ್ವರದೇವರು ಭೂಮಿಯ ಮೇಲೆ ಉದ್ಭವಿಸಿದ ದಿವಸವನ್ನು ವೀರಭದ್ರೇಶ್ವರದೇವರ ಹಬ್ಬವನ್ನಾಗಿ ಆಚರಿಸುವ ಮೂಲಕ ನಾವೆಲ್ಲರೂ ವೀರಭದ್ರೇಶ್ವರದೇವರ ಕೃಪೆಗೆ ಪಾತ್ರರಾಗೋಣ ಎಂದು ಅವರು ತಿಳಿಸಿದ್ದಾರೆ.