Home ಜಿಲ್ಲೆ ಕಲಬುರಗಿ ಸಿಇಸಿ ವಿರುದ್ಧ ದೇಶಾದ್ಯಂತ ಹೋರಾಟ: ಮಲ್ಲಿಕಾರ್ಜುನ ಖರ್ಗೆ

ಸಿಇಸಿ ವಿರುದ್ಧ ದೇಶಾದ್ಯಂತ ಹೋರಾಟ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ.ಅ.3: ಕೇಂದ್ರ ಸರಕಾರ 2023 ರಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡುವ ಬಿಲ್ ಅನ್ನು ತಂದಿದೆ.ಅದರಿಂದಾಗಿ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ .ಆ ಬಿಲ್ ಅನ್ನು ರದ್ದು ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2023 ರ ನಂತರ ದೇಶದಲ್ಲಿ ಎಲ್ಲೆಲ್ಲಿ ಚುನಾವಣೆ ನಡೆದಿವೆ ಅಲ್ಲಿ ಮತಗಳ್ಳತನದ ಆರೋಪ ಬಂದಿದ್ದರೆ, ಅಂತಹ ಎಲ್ಲ ಚುನಾವಣೆಗಳನ್ನು ರದ್ದುಗೊಳಿಸಿ ಮತಪತ್ರದ ಮುಖಾಂತರ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.ಎಸ್ ಐ ಆರ್ ಕುರಿತಂತೆ ಸುಪ್ರೀಂ ಕೊರ್ಟಿನಲ್ಲಿ ನಡೆದಿರುವ ವಿಚಾರಣೆಯನ್ನು ತೀವ್ರಗತಿಯಲ್ಲಿ ಮುಗಿಸುವಂತೆ ಮನವಿ ಮಾಡುತ್ತೇವೆ ಎಂದರು.
ಚುನಾವಣಾ ಅಕ್ರಮದ ವಿರುದ್ಧ ಕಾಂಗ್ರೆಸ್ ಅಷ್ಟೇ ಹೋರಾಟ ಮಾಡುತ್ತಿಲ್ಲ.ಇಂಡಿಯಾ ಬ್ಲಾಕ್ ಹೋರಾಟಕ್ಕೆ ಮುಂದಾಗಿದೆ.ದೇಶಾದ್ಯಂತ 5 ಹಂತಗಳಲ್ಲಿ ಹೋರಾಟ ಮಾಡಲಾಗುವದು .
ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಬೇಕು ಎಂಬ ಆಗ್ರಹದೊಂದಿಗೆ ದೇಶಾದ್ಯಂತ ಯುವಕರಲ್ಲಿ ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸಲಾಗುವದುಅ. 6 ರಂದು ದೆಹಲಿಯಲ್ಲಿ ಇಂಡಿಯಾ ಬ್ಲಾಕ್ ಬೃಹತ್ ಪ್ರತಿಭಟನೆ ನಡೆಸಲಿದೆ. ನಂತರ ಹಂತಹಂತವಾಗಿ ಎಲ್ಲ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಅವರು ತಿಳಿಸಿದರು.
ಕಳೆದ 11 ತಿಂಗಳಲ್ಲಿ ಮುಖ್ಯ ಚುನಾವಂಣಾ ಆಯುಕ್ತ ಜ್ಞಾನೇಶ ಕುಮಾರ ವಿರುದ್ಧ ಇನ್ನಿಬ್ಬರು ಆಯುಕ್ತರು 14 ಬಾರಿ ದೂರು ಸಲ್ಲಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲದಿರುವದು 2013 ರಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ಸಿಕ್ಕಂತ ಅಧಿಕಾರವೇ ಕಾರಣ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಡಾ. ಕಿರಣ ದೇಶಮುಖ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಚಂದು ಪಾಟೀಲ, ಶರಣಪ್ಪ ಮಟ್ಟೂರ, ರಾಜಗೋಪಾಲ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.