ಅಫಜಲಪುರದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಅರ್ಥಪೂರ್ಣವಾಗಿ ಆಚರಣೆ

ಕರಜಗಿ:ಅ.31:ಅಫಜಲಪುರ ಪೆÇಲೀಸ್ ಠಾಣೆಯ ವತಿಯಿಂದ ಇಂದು ಬೆಳಗ್ಗೆ 6 ಗಂಟೆಗೆ ರಾಷ್ಟ್ರದ ಲೋಹಪುರುಷ ಶ್ರೀ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸವನ್ನು ಏಕತಾ ಓಟ ಎಂಬ ಅಭಿಯಾನದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಮೊದಲು ಪೆÇಲೀಸ್ ಠಾಣೆ ಆವರಣದಲ್ಲಿ ಏಕತಾ ಶಪಥ ಸ್ವೀಕರಿಸುವ ಕಾರ್ಯಕ್ರಮ ನಡೆಯಿತು. ಈ ವೇಳೆ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‍ಐ ಸೋಮಲಿಂಗ ಒಡೆಯರ್ ಹಾಗೂ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದರು.

ನಂತರ ಏಕತಾ ಓಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೆÇಲೀಸ್ ಸಿಬ್ಬಂದಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಓಟ ನಡೆಸಿ ರಾಷ್ಟ್ರದ ಏಕತೆ, ಅಖಂಡತೆ ಮತ್ತು ಸಹೋದರತ್ವದ ಸಂದೇಶವನ್ನು ಹರಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರೂ ರಾಷ್ಟ್ರದ ಐಕ್ಯತೆ, ಶಾಂತಿ ಮತ್ತು ಪ್ರಗತಿಗೆ ಬದ್ಧರಾಗಿರಲು ಪ್ರತಿಜ್ಞೆ ಬದ್ಧರಾದರು.

ಏಕತೆಯಲ್ಲಿದೆ ಶಕ್ತಿ ವಿಭಜನೆಯಲ್ಲಿದೆ ದುರ್ಬಲತೆ, ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.