Home ಜಿಲ್ಲೆ ಕಲಬುರಗಿ ಕೆ.ಸಿ.ಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಕೆ.ಸಿ.ಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ,ಮೇ 10: ನಗರದ ಖಮರ್ ಉಲ್ ಇಸ್ಲಾಂ ಕಾಲೋನಿ ಕೆ.ಸಿ.ಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಕಲಬುರಗಿ ವತಿಯಿಂದ ‘ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ- ಪ್ರಜಾಪ್ರಭುತ್ವ ಉಳಿಸಿ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು.
ಪ್ರಾಂಶುಪಾಲರಾದ ಡಾ. ಶಾಂತಪ್ಪ ಸೋಮಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕೇವಲ ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಮಾತ್ರ ದೇಶ ಕಟ್ಟುವ ಮತ್ತು ಅಭಿವೃದ್ಧಿ ಮಾಡುವ ಜವಾಬ್ದಾರಿ ಇದೆ ಎಂದು ಕೆಲವರು ತಿಳಿದುಕೊಂಡಿದ್ದಾರೆ.ಇದು ತಪ್ಪು. ಶಿಕ್ಷಕರು, ಪತ್ರಕರ್ತರು, ಇಂಜಿನಿಯರ ಗಳು, ವಕೀಲರು, ವೈದ್ಯರು, ಸಾಹಿತಿಗಳು, ಪ್ರಜ್ಞಾವಂತ ನಾಗರಿಕರು, ವ್ಯಾಪಾರಿಗಳು ಉದ್ಯಮಿಗಳು, ರೈತರು, ಕಾರ್ಮಿಕರು, ಪುರುಷ- ಮಹಿಳೆಯರು, ಯುವಕರು- ವೃದ್ಧರೆನ್ನದೆ ಈ ದೇಶ ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು ನಾವೆಲ್ಲರೂ ನಮ್ಮ- ನಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕಾಗಿದೆ ಎಂದು ಬಿ.ಎಡ್, ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಬಿ.ಎಡ್, ಪ್ರಶಿಕ್ಷಣಾರ್ಥಿಗಳಾದ ಶ್ರೀಮಂತ, ರವಿಚಂದ್ರ, ಗುಂಡೂರಾಯ, ನೇಹಾ, ಸಾನಿಯಾ ಫಾತಿಮಾ,ವಿಜಯಲಕ್ಷ್ಮಿ, ವಿಷ್ಣು, ನಾಜಿಯಾ ತರನ್ನು ,ರೂಮ ಫಾತಿಮಾ, ಪ್ರೇಮಾ ಮತ್ತು ಅತಿಯಾ ನಾಜ ಅತ್ಯುತ್ತಮವಾಗಿ ವಿಚಾರ ಮಂಡಿಸಿದ್ದಕ್ಕಾಗಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕರಾದ ರಮೇಶ.ಆರ್ .ದುತ್ತರಗಿ ಪ್ರಸ್ತಾವಿಕವಾಗಿ ಮಾತನಾಡಿ,ನಂತರ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಬಿ.ಎಡ್,ಪ್ರಶಿಕ್ಷಣಾರ್ಥಿಗಳಾದ ಸಾನಿಯಾ ಫಾತಿಮಾ ಪ್ರಾರ್ಥನೆ ಗೀತೆ ಹಾಡಿದರು. ಪ್ರೇಮಾ ಸ್ವಾಗತಿಸಿದರು. ಸೈಯದ್ ಜವೇರಿಯಾ ನಿರೂಪಿಸಿದರು. ಅತಿಯಾ ನಾಜ ವಂದನಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಾದ ಅಪ್ಸಾನ ಬೇಗಮ್, ಹನುಮಂತರಾಯ ಮಣ್ಣೂರ, ಸೈಯದ್ ಹಸನ್ ಕಮರ್, ಡಾ. ಶಿವಕುಮಾರ.ಎಸ್.ಎಸ್, ವಿಜಯಕುಮಾರ್ ಕಲ್ಲೂರ, ನಾಮದೇವ ಜಾಔತೆ, ರೈಯಿಸಾ ಫಾತಿಮಾ ಸಭಾ, ವಿಜಯಲಕ್ಷ್ಮಿ ಪಾಟೀಲ, ದಯಾನಂದ ಕಾಳೆ, ಇಮ್ರಾನ್ ಅಹಮದ್, ರಿಜ್ವಾನ ಬೇಗಂ, ಮಾಳಿಂಗರಾಯ, ಪ್ರೀತಿ ಪಾಟೀಲ, ಗೌಸುದ್ದೀನ್ ಸೇರಿದಂತೆ ಹಲವರಿದ್ದರು.