ಉಸ್ತಾದ ಆಸ್ಪತ್ರೆಯಲ್ಲಿ: ರಾಷ್ಟ್ರೀಯ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರ ದಿನಾಚರಣೆ

ಕಲಬುರಗಿ, ಜೂ.೧೧೫- ತುರ್ತು ಪರಿಸ್ಥಿತಿ ಸೇರಿದಂತೆ ಕೆಲ ರೋಗಬಾದೆಯಿಂದ ಮುಕ್ತರಾಗಲು ಶಸ್ತçಚಿಕಿತ್ಸೆ ಪ್ರಮುಖ ಪಾತ್ರ ವಹಿಸುತ್ತದೆ ಜೀವ ಮತ್ತು ಆರೋಗ್ಯ ರಕ್ಷಣೆಗೆ ಕೊನೆಯ ಮಾರ್ಗ ಇದಾಗಿರುತ್ತದೆ ಎಂದು ಉಸ್ತಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ತನ್ವೀರ ಹುಸೇನ ಉಸ್ತಾದ ಅವರು ಹೇಳಿದರು.
ಕೇಂದ್ರ ಬಸ್ ನಿಲ್ದಾಣ ಶಾಂತಿ ನಗರದ ಉಸ್ತಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ ಶಸ್ತ್ರಚಿಕಿತ್ಸೆ ತಜ್ಞ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಕೇಕ್ ಕತ್ತರಿಸುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಸಂಘ ಇದೇ ವರ್ಷದಿಂದ “ಪ್ರಪ್ರಥಮ ರಾಷ್ಟ್ರೀಯ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರ ದಿನಾಚರಣೆ ಆಚರಿಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಮೂಲಕ ಜನ ಸಾಮಾನ್ಯರಿಗೆ ಶಸ್ತ್ರಚಿಕಿತ್ಸೆ ವೈದ್ಯರ ಕಾರ್ಯವೈಖರಿ ಮತ್ತು ಮಹತ್ವವನ್ನು ತಿಳಿಸುವುದು ಇದರ ಉದ್ದೇಶ ಎಂದು ಅವರು ಹೇಳಿದರು.
ಡಾ.ಮೊಹ್ಮದ ಅಬ್ದುಲ ರಜಾಕ ಮಡಕಿ ಅವರು, ಮಾತನಾಡಿ, ಶಸ್ತçಚಿಕಿತ್ಸಾ ತಜ್ಞರು ತಮ್ಮ ನುರಿತ ತಂಡದೊAದಿಗೆ ರೋಗಿಗಳ ಪ್ರಾಣ ಮತ್ತು ಆರೋಗ್ಯ ರಕ್ಷಣೆಗೆ ಶಕ್ತಿಮೀರಿ ಪ್ರಯತ್ನಿಸುತ್ತಾರೆ. ರೋಗಬಾದೆಗಳಿಂದ ಅವರನ್ನು ಮುಕ್ತಗೊಳಿಸಲು ಈ ತಜ್ಞರ ಕೊಡುಗೆ ಅಪಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಅನ್ನು ಚಾವ್ಹಾಣ, ಡಾ.ಆಯಿಶಾ ಫಾತಿಮಾ, ಡಾ.ನುಜಹತ್, ಡಾ.ಮುಸಾಬ್, ಡಾ.ಶಾಕೀರ, ಸನಾ, ಫರಹೀನ, ವಿಜಯುಲಕ್ಷಿö್ಮÃ, ಹೀನಾ, ಸೇರಿದಂತೆ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.