ನವಲಗುಂದ,ಸೆ.೨೫: ಗಾಂಧೀಜಿಯವರ ಸರ್ವೋದಯ ತತ್ವದ ನೆಲೆಯಲ್ಲಿ ಸ್ಥಾಪನೆಯಾದ ಎನ್ ಎಸ್ ಎಸ್ ಒಂದು ದೂರದೃಷ್ಟಿ ಯೋಜನೆಯಾಗಿದ್ದು ವಿದ್ಯಾರ್ಥಿಗಳಿಗೆ ರಾಷ್ಟçಪ್ರೇಮ,ಸೇವಾ ಮನೋಭಾವನೆ ಶಿಸ್ತು, ಸಂಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತನ್ನ ಕೈಲಾದಷ್ಟು ಸಮಾಜದ ಬಡಜನರಿಗೆ, ನಿರ್ಗತಿಕರಿಗೆ ಅಸಹಾಯಕರಿಗೆ ತನ್ನ ಸೇವೆ ಲಭ್ಯವಾಗಲೆಂದು ಮಹಾತ್ಮಾ ಗಾಂಧೀಜಿಯ ಕನಸಾಗಿತ್ತು ಆ ಕನಸಿನಂತೆ ನೀವು ಎನ್ ಎಸ್ ಎಸ್ ಸೇರಿದರೆ ಅದು ನಿಮ್ಮ ಸೌಭಾಗ್ಯ ಎಂದು ಮಹಾವಿದ್ಯಾಲಯ ಪ್ರಾಚಾರ್ಯರಾದ ಪ್ರೊ. ಜೆ. ಪಿ. ಲಮಾಣಿ ಹೇಳಿದರು.
ಅವರು ಸ್ಥಳೀಯ ಶಂಕರ ಮಹಾವಿದ್ಯಾಲಯದಲ್ಲಿ “ರಾಷ್ಟಿçÃಯ ಸೇವಾ ಯೋಜನೆಯ ೫೭ ನೇ ದಿನಾಚರಣೆಯನ್ನು ಮತ್ತು ನೂತನವಾಗಿ ಎನ್ ಎಸ್ ಎಸ್ ಗೆ ಸೇರಿದ ಸ್ವಯಂ ಸೇವಕರಿಗೆ ಪುನಃಚ್ಚೇತನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಇನ್ನೊರ್ವ ಪ್ರಾಚಾರ್ಯರಾದ ಡಾ. ಎಸ್. ವಿ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ಎನ್ ಎಸ್ ಎಸ್ ಜನ್ಮ ತಾಳಿ ಸೆ ೨೪ ಕ್ಕೆ ೧೦೦ ವರ್ಷ ತುಂಬಿದ್ದು ಈ ಯೋಜನೆಯನ್ನು ಅಂದಿನ ಭಾರತದ ಶಿಕ್ಷಣ ಮಂತ್ರಿಗಳಾದ ವಿ. ಕೆ. ಆರ್. ವಿ ರಾವ್ ಅವರು ದೇಶದ ಎಲ್ಲ ರಾಜ್ಯಗಳಲ್ಲಿ ೩೭ ವಿಶ್ವವಿದ್ಯಾಲಯಗಳಲ್ಲಿ ಎನ್ ಎಸ್ ಎಸ್ ಸಂಘಟನೆಯನ್ನು ಬಿಡುಗಡೆ ಮಾಡಿದವರು ಇದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು. ಸ್ವಾವಲಂಬನೆ, ಸಮಾಜಸೇವೆ, ಮಾಡಲು ಒಂದು ವೇದಿಕೆಯಾಯಿತು ಎಂದು ತಿಳಿಸಿದರು.
ಇದಕ್ಕೂ ಮೊದಲು ಎನ್ ಎಸ್ ಎಸ್ ಧ್ವಜಾರೋಹಣ ನೆರವೇರಿಸಲಾಯಿತು. ಎನ್ ಎಸ್ ಎಸ್ ಅಧಿಕಾರಿ ಡಾ. ಎಂ ಎನ್ ಹಾರೋಗೇರಿ, ಐ ಕ್ಯೂ ಎ ಸಿ ಸಂಯೋಜಕಿ ಶೀಲಾ ತುಬುಚಿ, ಎ. ಜಿ ಜಾಕ್ಕನಗೌಡ್ರ, ಆರ್ ಪಿ ಚವ್ಹಾಣ, ಆರ್ ಎಸ್ ಹಿರೇಮಠ, ಬಿ ಕೆ ಮಹೇಶ್, ವಿಜಯಲಕ್ಷಿ÷್ಮ ಅಕ್ಕಮ್ಮ, ವಿನಾಯಕ, ಅನ್ನಪೂರ್ಣ ಸೇರಿ ಮಹಾವಿದ್ಯಾಲಯ ಸಿಬ್ಬಂದಿಗಳು ಇದ್ದರು























