ಬಾದಾಮಿ,ಸೆ.೨೬: ಶಿಕ್ಷಣ ಪಡೆಯುವಾಗ ಯುವಕರು ಆರೋಗ್ಯ ಸ್ವಚ್ಚತೆ ಪರಿಸರ ರಕ್ಷಣೆ ಸ್ವಯಂ ಉದ್ಯೋಗ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಗ್ರಾಮದ ಅಭಿವೃದ್ದಿಗೆ ಶ್ರಮಿಸಬೇಕೆಂದು ಬಾದಾಮಿ ಕೆ.ಎಂ.ಪಟ್ಟಣಶೆಟ್ಟಿ ಸ್ವತಂತ್ರ ಪದವಿ ಕಾಲೇಜಿನ ಪ್ರಾಚಾರ್ಯ ಎಂ.ವಿ.ಪತ್ತಾರ ಹೇಳಿದರು.
ಅವರು ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ಶ್ರೀ ಕೆ.ಎಂ.ಪಟ್ಟಣಶೆಟ್ಟಿ ಕಾಲೇಜಿನ ಎನ್.ಎಸ್.ಎಸ್ ವಿಶೇಷ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿ ಯುವಕರ ಪಾತ್ರ ಕುರಿತು ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದರು.
ಉಪನ್ಯಾಸಕ ಬಸವರಾಜ ಉಳಾಗಡ್ಡಿ ಮಾತನಾಡಿ ಯುವಕರು ಕಲಿತು ಸುಮ್ಮನ ಕೂರದೆ ಇಷ್ಟಪಟ್ಟ ಕೆಲಸ ಸಿಗುವರೆಗೆ ಸಿಕ್ಕ ಕೆಲಸವನ್ನು ಇಷ್ಟಪಟ್ಟು ಮಾಡಬೇಕು, ಹೆತ್ತವರ ಹೊರೆಯನ್ನು ಇಳಿಸಬೇಕು, ಗ್ರಾಮದ ವಿವಿಧ ಅಭಿವೃದ್ದಿ ಕಾರ್ಯಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಬೇಕು. ಎನ್.ಎಸ್.ಎಸ್ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ರೂಪಿಸಿ ಗ್ರಾಮೀಣ ಜನರಿಗೆ ದ್ಯೇಯ ಉದೇಶಗಳನ್ನು ತಿಳಿಸಿ, ಉಪಯುಕ್ತ ಕಾರ್ಯಗಳನ್ನು ಮಾಡಲಾಗುವುದು ಪ್ರಸಕ್ತ ವರ್ಷದ ಎನ್ ಎಸ್‌ಎಸ್ ಶಿಬಿರಕ್ಕೆ ಕುಟಕನಕೇರಿ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಎಂದು ಹೇಳಿದರು
ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಮುಖಂಡರಾದ ಬಸಲಿಂಗಪ್ಪ ಬೂದಿಹಾಳ ಮಾತನಾಡಿ ಯುವಕರು ಮೊದಲು ಶಿಕ್ಷಣವಂತರಾಗಬೇಕು ದುಶ್ಚಟಗಳನ್ನು ಕೈಬಿಡಬೇಕು, ಉದ್ಯೋಗ ಮಾಡುತ್ತ ಸಮಾಜ ಸೇವೆಯಲ್ಲಿ ತೊಡಗಿ ಗ್ರಾಮದ ಅಭಿವೃದ್ದಿಗಯಲ್ಲಿ ಕೈಜೋಡಿಸಬೇಕೆಂದರು, ಚಂದ್ರಶೇಖರ ಹುಲ್ಲನ್ನವರ, ಸನ್ಮರಿ ಮಾತನಾಡಿದರು, ಎನ್.ಎಸ್.ಎಸ್ ಯೋಜನಾಧಿಕಾರಿ ಶರಣು ಸರಗಣಾಚಾರಿ, ನಿವೃತ್ತ ಪಿಡಿಓ ವೀರುಪಾಕ್ಷಪ್ಪ ಹುಲ್ಲೂರ, ಭೀಮಪ್ಪ ಮಣಿನಾಗರ, ಸಿದ್ದಾರೂಡ ಗೌಡರ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.






















