ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

ಬೀದರ್ :ಜ.೨೯:ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ೩೭ ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.
ಬೀದರ್ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಎಸಿ.ಬಿ. ರೆಹಮಾನ್ ಚಾಲನೆ ನೀಡಿದರು. ಬಳಿಕ ಮಾತನಾಡಿ, ಎಲ್ಲರೂ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲನೆ ಮಾಡಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ವಾಹನವು ಜಿಲ್ಲೆಯ ತಾಲೂಕು, ಹೋಬಳಿ, ಗ್ರಾಮಗಳಿಗೆ ತೆರಳಲಿದೆ ಎಂದರು.

ಹಿರಿಯ ಸಿವಿಲ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನ ಸೇವೆಗಳ ಪ್ರಾದಿಕಾರದ ಸದ್ಯಸ ಕಾರ್ಯದರ್ಸಿಗಳಾದ ಗೌರಾÀನ್ವಿತ ಶ್ರೀ ಪ್ರಕಾಶ ಅರ್ಜುನ ಬನಸೋಡೆ ಅವರು ಮಾತನಾಡಿ. ರಸ್ತೆ ಸುರಕ್ಷತಾ ನಿಯಮಗಳಾದ ಹೆಲ್ಮೇಟ್ ಒಳಕೆ. ಸೀಟ್ ಬೆಲ್ಟ ಹಾಕುವುದು ಸೇರುದಂತೆ ಹಲವು ನಿಯಮಗಳ ಕುರಿತು ಪ್ರಚಾರ ವಾಹನ ಜನರಿಗೆ ಅರಿವು ಮೂಡಿಸಲಿದೆ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ,ಕೆ,ಬಿರಾದರ ಅವರು ಮಾತನಾಡಿ ಬೀದರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಪ್ರಚಾರ ವಾಹನವನ್ನು ತೇರಳಿ ಶಾಲಾ ಕಾಲೇಜಿನ ಮಕ್ಕಳಿಗು ಹಾಗು ಸಾರ್ವಜನಿಕರಿಗು ೩೧ ಜನವರಿ ವರೇಗು ಈ ಅಭಿಯಾನ ನಡೇಯಲಿದೆ ಸಾರ್ವಜನಿಕರು ರಸ್ತೆ ಸುರಕ್ಷತಾ ಕುರಿತು ಮಾಹಿತಿ ನಿಡಲಿದೆ ಎಂದು ಹೇಳಿದ್ದರು.

ಬೀದರ ಜಿಲ್ಲಾಡಳಿತ, ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ ಜಿಲ್ಲಾ ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಬೀದರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೀದರ ಜಿಲ್ಲಾ ವಾಹನ ತರಬೇತಿ ಶಾಲೆ ಸಂಘದ ಸಹಯೋಗದಲ್ಲಿ ಈ ವಾಹನ ಪ್ರಚಾರ ಜಿಲ್ಲೆಯಾದ್ಯಂತ ನಡೆಯಲಿದೆ.ಈ ಸಂದರ್ಭದಲ್ಲಿ. ವಕೀಲರ ಸಂಘದ ಜಿಲ್ಲಾಧ್ಯಕ್ಷ ಷಣ್ಮುಕಯ್ಯ ಸ್ವಾಮಿ, ಮೋಟಾರು ವಾಹನ ನೀರೀಕ್ಷಕರಾದ ನದಾಫ ಹುಸೇನ, ಬಸವರಾಜ ಹಾಗೂ ವಿಕಾಸ ಕಾಂಬಳೆ ಮತ್ತು ವಕೀಲರ ಸಂಘದ ಪ್ರಮುಖರು ಹಾಗು ಸಾರಿಗೆ ಇಲಾಖೆ ಅಧಿಕಾರಿಗಳು. ಇದ್ದರು.