
ಕೊಲ್ಹಾರ :ಡಿ.12: ತಾಲೂಕಿನಾದ್ಯಂತ ಡಿ.21 ರಿಂದ 24 ರವರೆಗೆ ರಾಷ್ಟ್ರೀಯ ಪಲ್ಸ್ ಪೆÇೀಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೆÇೀಲಿಯೋ ಲಸಿಕೆ ಹಾಕಿಸುವಂತೆ ತಹಸೀಲ್ದಾರ್ ಎಸ್ ಎಮ್ ಮ್ಯಾಗೇರಿ ಅಧಿಕಾರಿಗಳಿಗೆ ಹೇಳಿದರು.
ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಗುರುವಾರ ನಡೆದ ತಾಲೂಕಾ ಮಟ್ಟದ ಪಲ್ಸ್ ಪೆÇೀಲಿಯೋ ಟಾಸ್ಕ್ ಫೆÇೀರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿ.21 ರಂದು ಬೂತ್ ಮಟ್ಟದಲ್ಲಿ ಪೆÇೀಲಿಯೋ ಲಸಿಕೆ ಹಾಕುತ್ತಿದ್ದು, ನಂತರ 3 ದಿನ ಮನೆ ಮನೆಗೆ ತೆರಳಿ ಪೆÇೀಲಿಯೋ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಪೆÇೀಲಿಯೋ ಮಾರಕ ರೋಗವಾಗಿದ್ದು 5 ವರ್ಷದೊಳಗಿನ ಯಾವುದೇ ಮಗು ಎರಡು ಹನಿ ಪೆÇೀಲಿಯೋ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.
ಸಾರ್ವಜನಿಕರು ಸ್ವಯಂಪ್ರೇರಿತವಾಗಿ ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಬೇಕು. ಲಸಿಕಾ ಅಭಿಯಾನದ ಎರಡು ದಿನ ಮುನ್ನ ಎಲ್ಲ ಲಸಿಕಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮವಹಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಗ್ರಾ ಪಂ ಹಾಗೂ ತಾ ಪಂ ಅಧಿಕಾರಿಗಳಿಗೆ ತಿಳಿಸಿದರು.ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳಿಂದ ಜಾಥಾ ಹಮ್ಮಿಕೊಳ್ಳಬೇಕೆಂದರು.
ಪಟ್ಟಣ ಪಂಚಾಯತ್ ಹಾಗೂ ಕಸ ವಿಲೇವಾರಿ ವಾಹನಗಳಲ್ಲಿ ಪಲ್ಸ್ ಪೆÇೀಲಿಯೋ ಕುರಿತು ಜಿಂಗಲ್ಸ್ ಗಳನ್ನು ಹಾಕಲು ಸೋಚಿಸಿದರು. ಬಿಟ್ ಪೆÇಲೀಸರನ್ನು ಬೂತ್ ಮತ್ತು ಟ್ರಾoಜಿಟ್ ಪಾಯಿಂಟ್ ಗಳನ್ನು ಭೇಟಿ ಮಾಡಲು ಸೂಚಿಸಿದರು.
ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆಯೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು, 21ರಂದು ಅಂಗನವಾಡಿ ಯನ್ನು ಬೆಳಿಗ್ಗೆ 8-ಸಂಜೆ 5 ತನಕ ತೆರೆದಿಡುವಂತೆ ಸೂಚಿಸಿ, ಮೇಲ್ವಿಚಾರಕರು ಅಭಿಯಾನದಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಹೇಳಿದರು.
ಭಾರತವು ಪೆÇೀಲಿಯೋ ಮುಕ್ತ ದೇಶವಾಗಿದೆ ಆದ್ರೆ ಕೆಲವು ದೇಶಗಳಲ್ಲಿ ಇನ್ನು ಭೀತಿ ಉಂಟು ಮಾಡುತ್ತಿದ್ದು ನಮ್ಮ ದೇದಲ್ಲಿ ಮರು ಕಲಿಸುವ ಸಾಧ್ಯತೆ ಇದೆ. ಪೆÇೀಲಿಯೋ ವಿರುದ್ಧ ಭಾರತ ಸಾದಿಸಿರುವ ಗೆಲುವನ್ನು ಮುಂದು ವರಿಸಲು ನಮ್ಮಜೊತೆ ಕೈ ಜೋಡಿಸಿ ಎಂದರು.
ಪಲ್ಸ್ ಪೆÇೀಲಿಯೊ ಆಂದೋಲನ ಕುರಿತು ತಾಲೂಕಾ ಆರೋಗ್ಯ ಅಧಿಕಾರಿ ಡಾ ಕವಿತಾ ದೊಡಮನಿ ಮಾತನಾಡಿ, ತಾಲೂಕಿನಾದ್ಯಂತ 5 ವರ್ಷದೊಳಗಿನ ಒಟ್ಟು 11,666 ಮಕ್ಕಳು ಲಸಿಕೆ ಪಡೆಯಲಿದ್ದು, ಒಟ್ಟು 51 ಬೂತ್‍ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ 6 ಸಂಚಾರಿ ತಂಡಗಳನ್ನೂ ಕೂಡ ಸ್ಥಾಪಿಸಲಾಗಿದೆ. ಪ್ರತಿ ಬೂತ್‍ಗೆ ಇಬ್ಬರು ಸದಸ್ಯರಂತೆ ಒಟ್ಟಾರೆ 118 ಸಿಬ್ಬಂದಿಗಳು ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಇವರಿಗೆ 11 ಜನ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲಿದ್ದು, ಪ್ರತಿ ಬೂತ್ ಮಟ್ಟದ ವ್ಯಾಪ್ತಿಯ ಮನೆಗಳಿಗೆ ತೆರಳಿ ಪೆÇೀಲಿಯೋ ಹನಿ ಹಾಕಲಿದ್ದಾರೆoದು ಸೂಚಿಸಿದರು.
ಈ ವೇಳೆ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ ಮದ್ದಿನ, ವೈದ್ಯಾಧಿಕಾರಿಗಳಾದ ಡಾ. ನಂದಿನಿ. ಡಾ. ಲಕ್ಷ್ಮಿ ತೆಲ್ಲೂರ,ಡಾ. ಶಪಿ ಬಾಗವನ. ತಾಲೂಕಾ ಆರೋಗ್ಯ ನಿರೀಕ್ಷಿಣಾ ಅಧಿಕಾರಿ ರಾಜಶೇಖರ ಚಿಂಚೋಳಿ, ಪಿ ಎಸ್ ಐ ಅಶೋಕ ನಾಯಕ,ಕೃ.ಮೇ.ಯೋ ಪು.ಪು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆಯ್ ಶೀಲವಂತ, ವಿವಿಧ ಇಲಾಖೆ ಅಧಿಕಾರಿಗಳು, ಅರುಣ ಪೂಜಾರಿ, ಆರ್ ಎನ್ ಗೌಡರ, ಎಲ್ ಬಿ ಪೂಜಾರಿ, ರೀಜವಾನ್ ಖಾನ್, ಬಿ ಎಮ್ ಪಾಟೀಲ್, ಅಶ್ವಿನಿ ತುಂಬರಮಟ್ಟಿ,ಎಸ್ ವಿ ಗಿಡಜಾಡರ, ಬಾಪು ಇಳಿಗೇರ ಇತರರು ಉಪಸ್ಥಿತರಿದ್ದರು.

























