ಸಿಯುಕೆಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ

ಕಲಬುರಗಿ,ನ.22: ಯಾಂತ್ರೀಕೃತವಾಗಿ ಉನ್ನತೀಕರಣಗೊಂಡ ಕೇಂದ್ರ ಗ್ರಂಥಾಲಯವನ್ನು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಉತ್ತಮವಾಗಿ ಬಳಸಿಕೊಳ್ಳಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ ಬಟ್ಟು ಸತ್ಯನಾರಾಯಣ ಅವರು ಕರೆ ನೀಡಿದರು.
ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಹೆಚ್ಚು ಕಾಲ ಸಮಯ ಕಳೆಯದೇ, ಪುಸ್ತಕಗಳ ಜೊತೆ ಸಮಯ ಕಳೆದರೆ ನಿಮ್ಮ ಭವಿಷ್ಯ ಉಜ್ವಲಗೊಳ್ಳುವುದು. ವಿದ್ಯಾರ್ಥಿ ಜೀವನವನ್ನು ಗ್ರಂಥಾಲಯದ ಪುಸ್ತಕಗಳೊಂದಿಗೆ ಕಳೆದರೆ ನಿಮ್ಮ ಜ್ಞಾನದ ಪರಿಧಿ ವಿಸ್ತಾರಗೊಳ್ಳುವುದು. ಇತ್ತೀಚೆಗೆ ವಾಟ್ಸಪ್, ಯೂಟ್ಯೂಬ್ ಅನ್ನೇ ಗ್ರಂಥಾಲಯದ ರೀತಿ ಎಲ್ಲರೂ ಅದರಲ್ಲೂ ವಿದ್ಯಾರ್ಥಿಗಳು ಸಹ ಎಲ್ಲಾ ಮಾಹಿತಿಗಾಗಿ ಅದನ್ನೇ ಅವಲಂಬಿಸಿರುವುದು ಆತಂಕಕಾರಿ ವಿಷಯ. ಹಲವು ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿರುತ್ತವೆ. ಅದನ್ನು ಪರಿಶೀಲನೆಗೆ ಒಳಪಡಿಸಿದೆ ಸತ್ಯ ಎಂದು ತಿಳಿದು ತಪ್ಪು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಕೇಂದ್ರೀಯ ವಿವಿ ಕುಲಸಚಿವ ಪೆÇ್ರ ಆರ್ ಆರ್ ಬಿರಾದರ ಅವರು, ಗ್ರಂಥಾಲಯದಲ್ಲಿರುವ ಪುಸ್ತಕಗಳ ಅಧ್ಯಯನ ಯಾವಾಗಲೂ ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಸಹಕಾರಿಯಾಗಿದೆ. ಕೇವಲ ಸಾಮಾಜಿಕ ಜಾಲತಾಣಗಳ ಬಳಕೆ ಒಂದು ಹಂತದವರೆಗೆ ಮಾತ್ರ ಸೀಮಿತ. ಪುಸ್ತಕಗಳು ಕೊಡುವ ನಿಖರ ಜ್ಞಾನ ಹಾಗು ಶಕ್ತಿ ಸಾಮಾಜಿಕ ಜಾಲತಾಣಗಳು ಕೊಡಲು ಸಾಧ್ಯವಿಲ್ಲ ಎಂದರು.ಭೂ ವಿಜ್ಞಾನ ನಿಕಾಯದ ಮುಖ್ಯಸ್ಥರಾದ ಪೆÇ್ರ. ಎಂ ಪ್ರಶಾಂತ ಅವರು ಮಾತನಾಡಿದರು.
ವಿವಿ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ಡಾ ಪಿ ಎಸ್ ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು. ರಾಜಕುಮಾರ ಕಲ್ಯಾಣಿ ಕಾರ್ಯಕ್ರಮ ನಿರೂಪಿಸಿದರು. ಡಾ ಸತೀಶ ತೋಟದ ವಂದನಾರ್ಪಣೆ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿವಿಯ ವಿವಿಧ ನಿಕಾಯಗಳ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಫಲಕ ನೀಡಿ ಗೌರವಿಸಲಾಯಿತು.