Home ಜಿಲ್ಲೆ ದಿ.22 ರಂದು ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ

ದಿ.22 ರಂದು ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ

ರಬಕವಿ,ಫೆ6: ನಮ್ಮ ದೇಶದ ಪಾರಂಪರಿಕ ಕ್ರೀಡೆಗಳಲ್ಲೊಂದಾದ,ಕುಸ್ತಿಯು ಯುವಕರಲ್ಲಿ ದೈಹಿಕ ಸಾಮಥ್ರ್ಯ ಹಾಗೂ ಶಿಸ್ತಿನ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಧ್ಯಕ್ಷ ಕೀರ್ತಿ ಗಣೇಶ ಹೇಳಿದರು,

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಮಂಗಲ ಭವನದಲ್ಲಿ ಡಿ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಎನ್ ಎಸ್ ಯು ಆಯ್ ಇವರ ಸಹಯೋಗದಲ್ಲಿ ಕಾಡಪ್ಪ ಜಿಡ್ಡಿಮನಿಯವರ 75 ನೇ ಹುಟ್ಟು ಹಬ್ಬದ ಪ್ರಯುಕ್ತ ಇದೇ ದಿ,22 ರಂದು ಜರುಗುವ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ತಮ್ಮ ಜೀವನವನ್ನೆ ಕುಸ್ತಿ ಕ್ರೀಡೆಗೆ ಸಮರ್ಪಣೆ ಮಾಡಿ ಅನೇಕ ಶಿಷ್ಯರನ್ನು ರೂಪಿಸಿ ಕ್ರೀಡೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು, ಗ್ರಾಮೀಣ ಹಾಗೂ ಸಾಂಪ್ರದಾಯಿಕ ಕ್ರೀಡೆಗಳಿಗೆ ಉತ್ತೇಜನ ನೀಡುವ ಜೊತೆಗೆ ಕ್ರೀಡೆಗಳತ್ತ ಯುವ ಜನತೆ ಆಸಕ್ತಿ ಹೊಂದಿದಾಗ ಮಾತ್ರ ಇಂತಹ ಕ್ರೀಡೆಗಳು ಬೆಳಕಿಗೆ ಬರುತ್ತವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭದ್ರನವರ ಮಾತನಾಡಿ ಕುಸ್ತಿಯು ಗ್ರಾಮೀಣ ಭಾಗದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದು,ಇಂತಹ ಕ್ರೀಡೆಗಳಿಗೆ ಹಾಗೂ ಕುಸ್ತಿ ಪಟುಗಳಿಗೆ ನಾವೆಲ್ಲರೂ ಸಹಾಯ ಸಹಕಾರ ನೀಡುವ ಮೂಲಕ ಪೆÇ್ರೀತ್ಸಾಹಿಸುವ ಕಾರ್ಯ ಮಾಡೋಣವೆಂದರು,

ಇದೇ ಸಂದರ್ಭದಲ್ಲಿ ಶೇಖರ ಸಂಪಗಾವಿ,ಈರಪ್ಪ ಹಿಪ್ಪರಗಿ ಶ್ರೀನಿವಾಸ ಹಲ್ಯಾಳ,ಆನಂದ ಹಟ್ಟಿ, ಚನ್ನಪ ಹಾದಿಮನಿ, ಕಲ್ಲಪ್ಪ ಹೊರಟ್ಟಿ,ಪ್ರವೀಣ್ ಪೂಜಾರಿ,ರವಿ ಬಾಡಗಿ,ರಮೇಶ ಜಿಡ್ಡಿಮನಿ,ಕಾಡಪ್ಪ ಮಹಿಷವಾಡಗಿ,ಚೇತನ್ ಹಣಬೂರ,ಸಂಗಮೇಶ ಕೊಪ್ಪದ,ಶಂಕರ ಗೂರೂಜಿ,ವಿಜಯ ನಿಪ್ಪಾಣಿ ಮುಂತಾದವರು ಪಾಲ್ಗೊಂಡಿದ್ದರು.