
ಲಕ್ಷೆ÷್ಮÃಶ್ವರ,ಡಿ.೯: ತಾಲೂಕಿನ ಶಿಗ್ಲಿ ಗ್ರಾಮದ ಎಸ್ ಎಸ್ ಕೂಡ್ಲುಮಠ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ ಮಂಜುನಾಥ್ ಎಲ್ ಹಳೆ ರಿತ್ತಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಸರಪಳಿ ಗುಂಡು ಎಸೆತದಲ್ಲಿ ಬೆಳ್ಳಿ ಪದಕ ಪಡೆದು ದ್ವಿತೀಯ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಇದೇ ತಿಂಗಳು ಉತ್ತರ ಪ್ರದೇಶದ ಲಕ್ನೋದಲ್ಲಿ ಜರುಗಲಿರುವ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾನೆ
ವಿದ್ಯಾರ್ಥಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕ ಕೆಆರ್ ಲಮಾಣಿ ಅವರನ್ನು ಹಾಗೂ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಯನ್ನು ಸಂಸ್ಥೆಯ ಚೇರ್ಮನಾದ ಎಸ್ ಪಿ ಬಳಿ ಗಾರ ಮತ್ತು ಅಧ್ಯಕ್ಷರಾದ ಎಫ್ ಡಿ ಹುನುಗುಂದ ನಿರ್ದೇಶಕರುಗಳಾದ ಸೋಮಣ್ಣ ಡಾಣಗಲ್ಲ ವೀರಣ್ಣ ಪವಾಡದ ಚಂದ್ರಣ್ಣ ತೋಟದ ಈರಣ್ಣ ಅಕ್ಕುರ ಭರತ್ ಬಳೆಗಾರ ಮುಖ್ಯೋಪಾಧ್ಯಾಯರಾದ ಸಿಬಿ ಮೊಗ್ಲಿ ಮಾಂತೇಶ್ ಅಳ್ಳಳ್ಳಿ ಬಸವರಾಜ್ ಡಂಬ್ರಳ್ಳಿ ಬಿಬಿ ಚಿಟ್ಟಿಗೆ ಎಲ್ ಪಿ ಲಮಾಣಿ ಆರ್ ಎಂ ಎಂ ಜಂಬೇರಾಳ ವೈ ಬಿ ಬಸಾಪುರ ಬಿಎಸ್ ಹೆಬ್ಬಾಳ ಅಭಿನಂದಿಸಿದ್ದಾರೆ.























