ರಾಷ್ಟಿçÃಯ ರೈತದಿನ ಆಚರಣೆ


ಲಕ್ಷೆ÷್ಮÃಶ್ವರ,ಡಿ.೨೪: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ದೇಶದ ಮಾಜಿ ಪ್ರಧಾನಮಂತ್ರಿ ಚೌದರಿ ಚರಣ ಸಿಂಗ್ ಅವರ ಜನ್ಮ ದಿನಾಚರಣೆ ದಿನವನ್ನು ರಾಷ್ಟಿçÃಯ ರೈತ ದಿನವನ್ನಾಗಿ ಆಚರಿಸಲಾಯಿತು.


ತಾಲೂಕ ಕೃಷಿಕ ಸಮಾಜದ ಅಧ್ಯಕ್ಷರಾದ ಮಹೇಶ್ ಹೊಗೆಸೊಪ್ಪಿನವರು ಭಾವಚಿತ್ರಕ್ಕೆ ಪೂಜ ಸಲ್ಲಿಸಿ ನಂತರ ಮಾತನಾಡಿ ದೇಶದಲ್ಲಿ ರೈತರ ಬದುಕು ಹಸನವಾಗುವ ನಿಟ್ಟಿನಲ್ಲಿ ಚೌದರಿ ಚರಣ್ ಸಿಂಗ್ ಅವರು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಇಂದು ದೇಶದಲ್ಲಿ ರೈತರ ಬದುಕು ಅತ್ಯಂತ ಸಂಕಷ್ಟದಲ್ಲಿದೆ ರೈತರು ಬೆಳೆದ ಬೆಳೆಗಳಿಗೆ ಬೀದಿಗೆ ಬಿದ್ದು ಬೆಲೆ ಕೊಡಿ ಎಂದು ಅಂಗ ಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಪ್ರತಿಯೊಂದು ಹಂಗಾಮಿನಲ್ಲೂ ಬೆಂಬಲ ಬೆಲೆ ನಿಗದಿಪಡಿಸಿ ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸಿದಾಗ ಮಾತ್ರ ರೈತರು ಆರ್ಥಿಕವಾಗಿ ಪ್ರಬಲರಾಗಲು ಸಾಧ್ಯವಾಗುತ್ತದೆ ಎಂದರು.

\
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ಗೌಡ ನರಸಮ್ಮನವರ ಅಮಿತ್ ಹಾಲೆವಾಡಿ ಮಠ ನಂದಣ್ಣನವರ ಶರ ಸೂರಿ ಸೇರಿದಂತೆ ರೈತರು ಇದ್ದರು.