Home ಜಿಲ್ಲೆ ಬೀದರ್‌ನಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ: ಬೃಹತ್ ಜನಜಾಗೃತಿ ರ‍್ಯಾಲಿಗೆ ಚಾಲನೆ

ಬೀದರ್‌ನಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ: ಬೃಹತ್ ಜನಜಾಗೃತಿ ರ‍್ಯಾಲಿಗೆ ಚಾಲನೆ

ಬೀದರ, ಮೇ.೨೧: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಡೇಂಗ್ಯೂ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಅರಿವು ಮೂಡಿಸುವ ಮತ್ತು ರೋಗವಾಹಕ ಆಶ್ರಿತ ರೋಗಗಳನ್ನು ಮುಂಜಾಗ್ರತೆಯಿAದ ತಡೆಗಟ್ಟುವ ಉದ್ದೇಶದಿಂದ ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಬೃಹತ್ ಜನಜಾಗೃತಿ ರ‍್ಯಾಲಿಗೆ ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರಾಜಶೇಖರ್ ಪಾಟೀಲ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ, ಡೆಂಗ್ಯೂ ರೋಗವು ‘ಈಡಿಸ್’ ಜಾತಿಯ ಸೊಳ್ಳೆ ಕಚ್ಚುವುದರಿಂದ ಹರಡುವ ಒಂದು ವೈರಲ್ ಕಾಯಿಲೆಯಾಗಿದೆ. ಈ ಸೊಳ್ಳೆಗಳು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಇವು ಶುದ್ಧವಾದ ನಿಂತ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ಸಾರ್ವಜನಿಕರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು” ಎಂದು ಕರೆ ನೀಡಿದರು.
ನೀರು ಸಂಗ್ರಹಣಾ ತೊಟ್ಟಿಗಳು, ಡ್ರಮ್‌ಗಳು, ಸಿಮೆಂಟ್ ತೊಟ್ಟಿಗಳು ಮತ್ತು ಕೂಲರ್‌ಗಳಲ್ಲಿರುವ ನೀರನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ಖಾಲಿ ಮಾಡಿ ಒಣಗಿಸಿ ಮರುಬಳಕೆ ಮಾಡಬೇಕು. ಮನೆಯ ಸುತ್ತಮುತ್ತಲಿನ ಒಡೆದ ಸೀಸೆಗಳು, ಹಳೆಯ ಟೈರ್‌ಗಳು, ಪ್ಲಾಸ್ಟಿಕ್ ಕಪ್‌ಗಳು ಹಾಗೂ ಎಳನೀರಿನ ಗರಿಟೆಗಳಲ್ಲಿ ನೀರು ನಿಲ್ಲದಂತೆ ತಕ್ಷಣ ವಿಲೇವಾರಿ ಮಾಡಬೇಕು. ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಡೆಂಗ್ಯೂ ಮುಕ್ತ ಬೀದರ್ ಜಿಲ್ಲೆ ಮಾಡಲು ಸಾಧ್ಯ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೆಪ್ಪ ಬೊಮ್ಮ ಅವರು ಮಾತನಾಡಿ, “ಡೆಂಗ್ಯೂ ರೋಗಕ್ಕೆ ಮುಖ್ಯ ಕಾರಣವೇ ಸೊಳ್ಳೆಗಳು. ಸೊಳ್ಳೆ ಕಡಿತದಿಂದ ಮುಕ್ತಿ ಪಡೆಯಲು ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು ಹಾಗೂ ಇಡೀ ದೇಹವನ್ನು ಮುಚ್ಚುವ ಬಟ್ಟೆಗಳನ್ನು ಧರಿಸಬೇಕು. ತೀವ್ರ ಜ್ವರ, ಕಣ್ಣುಗಳ ಹಿಂಭಾಗದಲ್ಲಿ ನೋವು, ತಲೆನೋವು ಹಾಗೂ ಕೀಲು ನೋವುಗಳು ಇಂತಹ ಲಕ್ಷಣಗಳು ಕಂಡುಬAದರೆ ಸಾರ್ವಜನಿಕರು ಯಾವುದೇ ರೀತಿಯ ಸ್ವಯಂ ಮಾತ್ರೆಗಳನ್ನು ತೆಗೆದುಕೊಳ್ಳದೆ, ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ರಕ್ತ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಮೂಲಕ ಸಾಗಿದ ರ‍್ಯಾಲಿಯಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಡೆಂಗ್ಯೂ ತಡೆಗಟ್ಟುವ ಘೋಷಣಾ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಸಾವಿತ್ರಿ, ಚಂದ್ರಶೇಖರ್, ಓಂಕಾರ ಮಾಲಿಗೆ, ಯೇಸುದಾಸ್ ಘೋರೆ, ಆರೋಗ್ಯ ನಿರೀಕ್ಷಕ ಅಧಿಕಾರಿಗಳಾದ ಶರಣಪ್ಪ ಎಂ.ಡಿ, ಅನಿಲಕುಮಾರ್, ಕೃಪಾಧಾನ್, ಜೇಸುಲಾಲ ಪವಾರ್, ಕೀಟಶಾಸ್ತ್ರಜ್ಞರು ಹಾಗೂ ಕಚೇರಿ ಸಿಬ್ಬಂದಿಗಳಾದ ಕಾಶಿನಾಥ್, ಅಬ್ದುಲ್ ರಶೀದ್, ಸತೀಶ್‌ಕುಮಾರ್ ಪಾಂಡೆ, ಅಮರ್ ಗಂಟೆಗುಡಿ, ಬಸಲಿಂಗಪ್ಪ, ಶಿವಶಂಕ್ರ, ಕಾವೇರಿ, ತಸ್ಲಿಮಾ ಬೇಗಂ, ಗೋರುನಾಥ್, ರವಿಕುಮಾರ್, ಮಾಲಾಶ್ರೀ, ರವಿ ಸೇರಿದಂತೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಂಗಪ್ಪ ಕಾಂಬ್ಳೆ ಅವರು ಸ್ವಾಗತ ಕೋರಿದರು. ಹಿರಿಯ ಆರೋಗ್ಯ ನಿರೀಕ್ಷಕ ಅಧಿಕಾರಿ ಮಕ್ಸೂದ್ ಮಹಬುಬ್ ಮತ್ತು ದೇವಿದಾಸ್ ಅವರು ಕಾರ್ಯಕ್ರಮ ನಿರೂಪಿಸಿದರು. ಮತ್ತೊಬ್ಬ ಹಿರಿಯ ಆರೋಗ್ಯ ನಿರೀಕ್ಷಕ ಅಧಿಕಾರಿಯಾದ ಅಬ್ದುಲ್ ರೆಹಮಾನ್ ವಂದನಾರ್ಪಣೆ ಮಾಡಿದರು.