
ಬೀದರ್: ಮೇ.೧೬:ನಗರದ ಗುರುನಾನಕ ದೇವ ಮಜಿನಿಯರಿಂಗ್ ಕಾಲೇಜನಲ್ಲಿ ಮೇ ೧೫ ಮತ್ತು ೧೬, ೨೦೨೬ ರಂದು “ಎಮರ್ಜಿಂಗ್ ಟ್ರೆಂಡ್ಸ್ ಇನ್ ಎಂಜಿನಿಯರಿAಗ್, ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಓಅಇಖಿಇಖಿಒ-೨೦೨೬)” ರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಸಮ್ಮೇಳನವನ್ನು ಸಿವಿಲ್, ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಂಬಿಎ ಮತ್ತು ಎಂಸಿಎ ವಿಭಾಗಗಳು ಸಂಯುಕ್ತವಾಗಿ ಆಯೋಜಿಸಿದ್ದವು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರಾಧ್ಯಾಪಕರು, ಸಂಶೋಧಕರು, ಕೈಗಾರಿಕಾ ತಜ್ಞರು ಹಾಗೂ ವಿದ್ಯಾರ್ಥಿಗಳಿಂದ ೧೨೫ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿದ್ದು, ಸಮ್ಮೇಳನಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಡಾ.ಶ್ರೀನಿವಾಸ ಎಸ್ ಮೇತನ ಹಾಗೂಡಾ.ಕಡಲಿ ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ವೀಣಾ ಎಸ್ ಸೋರಗಾನ್ವಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಧನಂಜಯ ಎಂ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಈ ಸಮ್ಮೇಳನವನ್ನು ಗುರುನಾನಕ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದು, ಆಡಿ. ಃಚಿಟbiಡಿ Siಟಿgh ಅಧ್ಯಕ್ಷರು ಹಾಗೂ ಆಡಿ. ಖeshmಚಿ ಏಚಿuಡಿ ಉಪಾಧ್ಯಕ್ಷರು ಸಂಸ್ಥೆಯ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು.
ಸಮ್ಮೇಳನದ ಸಂಯೋಜಕರಾಗಿ ಡಾ.ಬಲಬೀರ ಸಿಂಗ್ ಹಾಗೂ ಡಾ.ರೇಷ್ಮಾ ಕೌರ್ ಕಾರ್ಯನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿದರು.
ಸಮ್ಮೇಳನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ, ಸುಸ್ಥಿರ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ, ಜಿಯೋಪಾಲಿಮರ್ ಕಾಂಕ್ರೀಟ್, ಕೃತಕ ಬುದ್ಧಿಮತ್ತೆ (ಂI), ಐಒಟಿ ಅನ್ವಯಗಳು, ಸ್ಮಾರ್ಟ್ ಕೃಷಿ, ಆರೋಗ್ಯ ವ್ಯವಸ್ಥೆಗಳು, ಎಡ್ಜ್ ಕಂಪ್ಯೂಟಿAಗ್, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್ ವಾಹನಗಳು, ಸೈಬರ್ ಭದ್ರತೆ, ರೋಬೋಟಿಕ್ಸ್, ಇಂಡಸ್ಟ್ರಿ ೪.೦, ಫಿನ್‌ಟೆಕ್ ಮತ್ತು ಂI ಆಧಾರಿತ ವ್ಯವಹಾರ ಪರಿವರ್ತನೆ ಸೇರಿದಂತೆ ಅನೇಕ ಸಮಕಾಲೀನ ವಿಷಯಗಳ ಕುರಿತು ತಾಂತ್ರಿಕ ಉಪನ್ಯಾಸಗಳು ಹಾಗೂ ಸಂಶೋಧನಾ ಪ್ರಬಂಧ ಮಂಡನೆಗಳು ನಡೆದವು.
ಸಮ್ಮೇಳನದ ಸಮಾರೋಪದಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಆಯ್ಕೆಯಾದ ಸಂಶೋಧಕರಿಗೆ “ಬೆಸ್ಟ್ ಪೇಪರ್ ಅವಾರ್ಡ್” ನೀಡಿ ಗೌರವಿಸಲಾಯಿತು.
ಈ ರಾಷ್ಟ್ರೀಯ ಸಮ್ಮೇಳನವು ವಿವಿಧ ಇಂಜಿನಿಯರಿAಗ್ ಮತ್ತು ಮ್ಯಾನೇಜ್‌ಮೆಂಟ್ ಕ್ಷೇತ್ರಗಳ ಸಂಶೋಧಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಜ್ಞಾನ ಹಂಚಿಕೆ, ಸಂಶೋಧನಾ ಸಹಯೋಗ ಮತ್ತು ಶೈಕ್ಷಣಿಕ ಸಂವಾದಕ್ಕೆ ಉತ್ತಮ ವೇದಿಕೆಯಾಗಿದ್ದು, ಸಂಸ್ಥೆಯ ಶೈಕ್ಷಣಿಕ ಹಾಗೂ ಸಂಶೋಧನಾ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿತು.

























