ನಾಡಗೀತೆ ಕೇವಲ ಗೀತೆಯಲ್ಲ ಕನ್ನಡಿಗರ ಹೃದಯ ಧ್ವನಿ: ಲಕ್ಷ್ಮೀಕಾಂತ ಪಂಚಾಳ

ಕಲಬುರ್ಗಿ, ಜ,20: ಸಾರ್ವಜನಿಕ ವೇದಿಕೆಗಳಲ್ಲಿ ನಾಡಗೀತೆ ಮೊಳಗುವಾಗ ನಮ್ಮೆಲ್ಲರ ಹೃದಯವೂ ಗೌರವದಿಂದ ನಿಂತುಹೋಗುತ್ತದೆ. ಅದು ನಮಗೆ ನಮ್ಮ ಕರ್ತವ್ಯಗಳನ್ನು ನೆನಪಿಸುತ್ತದೆ ನಾಡಿನ ಭಾಷೆ, ಸಂಸ್ಕøತಿ, ಇತಿಹಾಸ ಮತ್ತು ಮೌಲ್ಯಗಳನ್ನು ಕಾಪಾಡಬೇಕೆಂಬ ಜವಾಬ್ದಾರಿಯನ್ನು ಇಂದಿನ ಯುವಪೀಳಿಗೆಗೆ ನಾಡಗೀತೆಯ ಮಹತ್ವವನ್ನು ತಿಳಿಸುವುದು ಅತ್ಯಂತ ಅಗತ್ಯ. ಜಾಗತೀಕರಣದ ಯುಗದಲ್ಲಿ ನಾವು ವಿಶ್ವನಾಗರಿಕರಾಗುವುದರ ಜೊತೆಗೆ, ನಮ್ಮ ಬೇರುಗಳನ್ನು ಮರೆಯಬಾರದು. ನಾಡಗೀತೆ ನಮ್ಮ ಬೇರುಗಳ ಸಂಕೇತ. ಅದು ನಮಗೆ ಕನ್ನಡ ಭಾಷೆಯ ಮೇಲಿನ ಪ್ರೀತಿ, ನಾಡಿನ ಮೇಲಿನ ಗೌರವ ಮತ್ತು ಸಮಾಜದ ಮೇಲಿನ ಹೊಣೆಗಾರಿಕೆಯನ್ನು ಕಲಿಸುತ್ತದೆ, ನಾಡಗೀತೆಗೆ ನೂರರ ಸಂಭ್ರಮವನ್ನು ಆಚರಿಸುವ ಈ ಸಂದರ್ಭದಲ್ಲಿ, ನಾವು ಪ್ರತಿಜ್ಞೆ ಮಾಡಬೇಕು ಕನ್ನಡವನ್ನು ಗೌರವಿಸುವೆವು, ನಾಡಗೀತೆ ಕೇವಲ ಗೀತೆಯಲ್ಲ,ಕನ್ನಡಿಗರ ಹೃದಯ ಧ್ವನಿ ಎಂದು ಹುಲಸೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ಪಂಚಾಳ ಹೇಳಿದರು.ಕಮಲಾಪುರ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಕಮಲಾಪುರ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಹುಟ್ಟು ಹಬ್ಬದ ಪ್ರಯುಕ್ತ ನಾಡಗೀತೆಗೆ ನೂರರ ಸಂಭ್ರಮ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾಡಗೀತೆಗೆ ನೂರರ ಸಂಭ್ರಮ ಎಂದರೆ ಕೇವಲ ವರ್ಷಗಳ ಲೆಕ್ಕವಲ್ಲ. ಇದು ನೂರು ವರ್ಷಗಳ ಮೌಲ್ಯ, ನೂರು ವರ್ಷಗಳ ಸಂಸ್ಕೃತಿ, ನೂರು ವರ್ಷಗಳ ಏಕತೆಯ ಸಂಭ್ರಮ. ಈ ನೂರು ವರ್ಷಗಳಲ್ಲಿ ಕರ್ನಾಟಕ ಅನೇಕ ಬದಲಾವಣೆಗಳನ್ನು ಕಂಡಿದೆ. ಆದರೆ ಈ ಗೀತೆ ಮಾತ್ರ ತಲೆಮಾರಿನಿಂದ ತಲೆಮಾರಿಗೆ ನಮ್ಮನ್ನು ಒಂದೇ ಧ್ವಜದಡಿ, ಒಂದೇ ಭಾವನೆಯಡಿ ಕಟ್ಟಿದೆ ಎಂದರು.ಕಸಾಪ ತಾಲೂಕ ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ಮನೋಭಾವವನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು, ನಾಡಗೀತೆ ಕೇವಲ ಹಾಡಲ್ಲ ನಮ್ಮೆಲ್ಲರ ಆತ್ಮಗೀತೆಯಾಗಿದೆ, ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಹೊರಬಂದು ಕನ್ನಡ ಭಾಷೆ ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸೋಣ ಎಂದರು,ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅಧ್ಯಕ್ಷ ಜೀವನ ರೆಡ್ಡಿ ಆರ್ ಮಾತನಾಡಿ ಕಮಲಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಕನ್ನಡ ಜಾಗೃತಿ ಹಾಗೂ ಕನ್ನಡದ ಹಿರಿಮೆಯನ್ನು ಸಾರುವಲ್ಲಿ ಕಸಾಪ ಕಾಯ9 ಶ್ಲಾಘನೀಯವಾಗಿದೆ ಎಂದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ನಾಗಣ್ಣ ವಿಶ್ವಕರ್ಮ,
ಕಸಾಪ ಜಿಲ್ಲಾ ಸಹ ಕಾರ್ಯದರ್ಶಿ ರಾಜೇಂದ್ರ ಮಾಡಬೂಳ, ಮುಖ್ಯ ಗುರು ಸಂತೋಷಿ ಕುಂಬಾರ, ಶಾರದಾದೇವಿ ಪ್ರಾಥಮಿಕ ಶಾಲೆ ಮುಖ್ಯ ಗುರು ಮಲ್ಲಮ್ಮ ವಡ್ಡಣಕೇರಿ, ಯಾಸ್ಮಿನ್, ಶಿವಕುಮಾರ, ಉಮಾದೇವಿ, ಪ್ರಶಾಂತ ರೆಡ್ಡಿ, ಸತೀಶ್ ಇತರರು ಇದ್ದರು.ಮಹಿಳಾ ಪ್ರತಿನಿಧಿ ಕಸ್ತೂರಿಬಾಯಿ ರಾಜೇಶ್ವರ ಪ್ರಾಥಿ9ಸಿದರು,
ನಿಕಟ ಪೂರ್ವ ಕಸಾಪ ಅಧ್ಯಕ್ಷ ದಾಸಿಮಯ್ಯ ವಡ್ಡನಕೇರಿ ಸ್ವಾಗತಿಸಿದರು,ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ಬಿಕೆ ನಿರೂಪಿಸಿದರು,ಶಾಲೆಯ ಮುಖ್ಯ ಗುರು ಸಂತೋಷಿ ವಂದಿಸಿದರು.