Home ಜಿಲ್ಲೆ ಕಲಬುರಗಿ ನಾರಾಯಣ ಗುರು ಮಹಾನ್ ಸಮಾಜ ಸುಧಾರಕರು: ಗುತ್ತೇದಾರ

ನಾರಾಯಣ ಗುರು ಮಹಾನ್ ಸಮಾಜ ಸುಧಾರಕರು: ಗುತ್ತೇದಾರ

ಚಿತ್ತಾಪುರ: ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಂದೇ ದೇವರು ಎಂದು ಸಾರಿದ ಬ್ರಹ್ಮಶ್ರೀ ನಾರಾಯಣ ಗುರು ಮಹಾನ್ ಸಮಾಜ ಸುಧಾರಕರು ಎಂದು ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.

ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಸಾಂಸ್ಕøತಿಕ ಘಟಕ ಹಾಗೂ Iಕಿಂಅ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುರುಗಳು ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲದಿದ್ದಾಗ, ತಾವೇ ಹೊಸದಾಗಿ ದೇವಸ್ಥಾನಗಳನ್ನು ಕಟ್ಟಿ ಎಲ್ಲರಿಗೂ ಪೂಜಾ ಹಕ್ಕನ್ನು ನೀಡಿದರು. ಕೇರಳ ರಾಜ್ಯದಲ್ಲಿ ಜಾರಿಯಲ್ಲಿದ್ದ
ಅನಿಷ್ಠ ಪದ್ಧತಿಗಳ, ಅಸ್ಪ್ರಶ್ಯತೆ, ಮೂಢನಂಬಿಕೆ, ಕಂದಾಚಾರ ಅನಾಚಾರ ವಿರುದ್ಧ ಮೌನ ಕ್ರಾಂತಿಯ ಮೂಲಕ ಹೋರಾಡಿದ ನಾರಾಯಣ ಗುರು ಸಾಮಾಜಿಕ ಪರಿವರ್ತನೆಯ ಹರಿಕಾರರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಪದ್ಮಣ್ಣ ರಾಸಣಗಿ ಮಾತನಾಡಿ,
ನಾರಾಯಣ ಗುರುಗಳು ಭಾರತದ ಶ್ರೇಷ್ಠ ಸಮಾಜ ಸುಧಾರಕರು. ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಅವರು, ಸರ್ವರಿಗೂ ಸಮಾನತೆ ಮತ್ತು ಸ್ವಾಭಿಮಾನವನ್ನು ಬೋಧಿಸಿದರು ಎಂದು ಹೇಳಿದರು.

ರೋಹಿಣಿ ಕಲ್ಮಠ, ಡಾ. ಜ್ಯೋತಿ ಕುಲಕರ್ಣಿ, ಡಾ.ವಿಲಾಸ್, ಡಾ. ನಾಗವೇಣಿ, ಭಾಗ್ಯಶ್ರೀ ಠಾಕೂರ್, ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಘಟಕದ ಸಂಚಾಲಕ
ಮಲ್ಲಪ್ಪ ಎಸ್.ತೊಟ್ನಳ್ಳಿ ಸ್ವಾಗತಿಸಿದರು, ಡಾ.ಸೂಗೂರೇಶ್ವರ ಪ್ರಾರ್ಥಿಸಿದರು, ಮರಿಯಪ್ಪ ಮೇತ್ರಿ ನಿರೂಪಿಸಿದರು, ಶರಣಪ್ಪ ದಿಗ್ಗಾಂವ ವಂದಿಸಿದರು.