
ಅಥಣಿ :ಜ.೨೩: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೊಸ ಬೆಳಕು ಹೊಳೆಯುವಂತೆ, ಪಟ್ಟಣದ ವಿಜಯಪುರ ರಸ್ತೆಗೆ ಹೊಂದಿಕೊAಡಿರುವ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಎಸ್. ಎಂ. ನಾರಗೊಂಡ ಇಂಟರ್ನ್ಯಾಷನಲ್ ಸ್ಕೂಲ್‌ನ ನೂತನ ಕಟ್ಟಡದ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಚಿಗುರು ಕಾರ್ಯಕ್ರಮವು ಶನಿವಾರ ದಿನಾಂಕ : ೨೪ ರಂದು ಸಂಜೆ ೦೫.೩೦ ಗಂಟೆಗೆ ಜರುಗಲಿದೆ. ಆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಕ್ರೇಜಿಸ್ಟಾರ ವಿ. ರವಿಚಂದ್ರನ್ ಅವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು ೨೫ ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ ಎಂದು ನಾಯಕ ಚಿದಾನಂದ ಸವದಿ ತಿಳಿಸಿದರು.
ಅವರು ಎಸ್ ಎಮ್ ನಾರಗೊಂಡ ಇಂಟರ್‌ನ್ಯಾಶನಲ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು
ಶನಿವಾರ ದಿನಾಂಕ : ೨೪ ರಂದು ಸಂಜೆ ೦೫.೩೦ ಗಂಟೆಗೆ ಜರುಗುವ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶೇಗುಣಸಿ ವಿರಕ್ತಮಠ ಶ್ರೀ ಮ.ನಿ.ಪ್ರ ಡಾ. ಮಹಾಂತ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಶೈಲ ನಾರಗೊಂಡ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆಯನ್ನು ಮಾಜಿ ಉಪಮುಖ್ಯಮಂತ್ರಿ,ಅಥಣಿ ಶಾಸಕ ಲಕ್ಷ್ಮಣ ಸವದಿ ನೆರವೇರಿಸಲಿದ್ದಾರೆ. ವಾಯವ್ಯ.ಕರ್ನಾಟಕ ರಸ್ತೆ. ಸಾರಿಗೆ ನಿಗಮ ಅಧ್ಯಕ್ಷ, ಕಾಗವಾಡ ಶಾಸಕ ರಾಜು ಕಾಗೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ, ಯುವ ನಾಯಕ ಚಿದಾನಂದ ಲಕ್ಷ್ಮಣ ಸವದಿ, ಮುಖಂಡರು ಎಸ್.ಎಮ್ ನಾರಗೊಂಡ ಇಂಟರ್ ನ್ಯಾಶನಲ್ ಸ್ಕೂಲ್ ಹಾರೂಗೇರಿ/ಅಥಣಿ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಅಧ್ಯಕ್ಷ ವಿವೇಕ ನಾರಗೊಂಡ, ಡಾ. ಮಹಾಂತೇಶ ಜಾಲಗೇರಿ ಖ್ಯಾತ ವೈದ್ಯರು ಬಸವಣಬಾಗೇವಾಡಿ ಡಾ. ಅಮೀತ ಗಾಢವೆ ಖ್ಯಾತ ಮೂತ್ರಪಿಂಡ ತಜ್ಞರು, ಮಿರಜ ಶ್ರೀ ಸೀತಾರಾಮು ಆರ್ ಎಸ್ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಜಿಲ್ಲೆ ಚಿಕ್ಕೋಡಿ, ಎಮ್ ಆರ್ ಮುಂಜೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥಣಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು..
“ದಿ. ೨೫ ರಂದು ಮುದ್ದು ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು”
ಕಳೆದ ೭ ವರ್ಷಗಳಿಂದ ಹಾರೂಗೇರಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಎಂ.ನಾರಗೊAಡ ಶಿಕ್ಷಣ ಸಂಸ್ಥೆಯು ಇದೀಗ ಅಥಣಿ ಭಾಗದ ಜನರ ಬೇಡಿಕೆಯಂತೆ ಇಲ್ಲಿಯೂ ಆರಂಭಗೊAಡಿದೆ. ಹಿರಿಯರಾದ ಶ್ರೀಶೈಲ ನಾರಗೊಂಡ ಅವರ ಅಧ್ಯಕ್ಷತೆಯಲ್ಲಿ ಅಥಣಿ ಮತ್ತು ಕಾಗವಾಡ ಭಾಗದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ” ಶಿಕ್ಷಣ ಕ್ರಾಂತಿಯ ಸದುಪಯೋಗವನ್ನು ಅಥಣಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಾಲಕರು ಮತ್ತು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅಧ್ಯಕ್ಷ ವಿವೇಕ ನಾರಗೊಂಡ ಹೇಳಿದರು
ಅಧ್ಯಕ್ಷತೆ : ಡಾ. ಗಿರೀಶ ನಾರಗೊಂಡ ಚಿಕ್ಕ ಮಕ್ಕಳ ತಜ್ಞರು ಹಾರೂಗೇರಿ,ಉದ್ಘಾಟನೆ. ಚಿದಾನಂದ ಲಕ್ಷ್ಮಣ ಸವದಿ ಯುವ ಕಾಂಗ್ರೇಸ್ ಮುಖಂಡರು ಅಥಣಿ, ಉಪಸ್ಥಿತರಿರುವರು.ಡಾ. ಸಿ.ಎ ಸಂಕ್ರಟ್ಟಿ ಡಾ. ರವಿ ಪಾಂಗಿ. ಡಾ. ಜಿ.ಎಸ್. ಪಾಟೀಲ. ಡಾ. ಮಹೇಶ ಕಾಪಶಿ ಪ್ರಶಾಂತ ಎಲ್.ಎಚ್. ಪ್ರಾಚಾರ್ಯರು, ಎಸ್. ಎಮ್ ನಾರಗೊಂಡ ಇಂಟರ್ ನ್ಯಾಶನಲ್ ಸ್ಕೂಲ್ ಹಾರೂಗೇರಿ. ಇ.ಜಿ. ದಿಕ್ಷೀತ್ ಪ್ರಾಚಾರ್ಯರು, ಎಸ್. ಎಮ್ ನಾರಗೊಂಡ ಇಂಟರ್ ನ್ಯಾಶನಲ್ ಸ್ಕೂಲ್ ಅಥಣಿ, ಎಲ್ಲರೂ ಬನ್ನಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು..
ಈ ವೇಳೆ ಮುನೀರ್ ಖಾನಾಪುರ, ಐ ಜಿ ದೀಕ್ಷಿತ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು
























