
ಅಳಂದ.ಸೆ,19: ತಾಲೂಕಿನ ಬಟ್ಟರ್ಗಾ ಗ್ರಾಮದಲ್ಲಿ ಶ್ರಾವಣ ಮಾಸದ ಮುಕ್ತಾಯದ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ನಂದಿ ಬಸವೇಶ್ವರ ಪಲ್ಲಕ್ಕಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ನಾಳೆ ( ಸೆ. 20 ಭಾನುವಾರ) 24 ಗಂಟೆಗಳ ಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಸೆ.21 ಸೋಮವಾರ ದಂದು ಪಲ್ಲಕ್ಕಿ ಮಹೋತ್ಸವ ಜರುಗಲಿದೆ.
ವಿವಿಧ ಗ್ರಾಮಗಳ ಭಜನಾ ಮಂಡಳಿಯಿಂದ ಸಂಗೀತ ಸೇವೆಯನ್ನು ಮಾಡುತ್ತಾ, ಪುರವಂತರ ಸೇವೆಯೊಂದಿಗೆ ಗ್ರಾಮದ ವಿವಿಧ ಬೀದಿಗಳಲ್ಲಿ ಪಲ್ಲಕ್ಕಿಯ ಮೆರವಣಿಗೆ ಮಾಡಲಾಗುತ್ತದೆ. ವಿವಿಧ ಗ್ರಾಮಗಳ ಸಕಲ ಸದ್ಭಕ್ತರು ಪಲ್ಲಕ್ಕಿ ಮಹೋತ್ಸವಕ್ಕೆ ಆಗಮಿಸಿ ಪ್ರಸಾದವನ್ನು ಸೇವಿಸಿ ಪುನೀತರಾಗಬೇಕೆಂದು ನಂದಿ ಬಸವೇಶ್ವರ ಸಮಿತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.























