
ಭಾಗ್ಯನಗರ, ಅ. ೧೩: ತಾಲ್ಲೂಕಿನ ಯಲ್ಲಂಪಳ್ಳಿ ಗ್ರಾಮದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಮೋ ಬಿ.ಎಸ್.ವೈ ಕ್ರಿಕೆಟ್ ಕಪ್-೨೦೨೬ ಅನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ವಿವಿಧ ಗ್ರಾಮಗಳಿಂದ ಬಹಳಷ್ಟು ಯುವಕರ ತಂಡಗಳು ಪಾಲ್ಗೊಂಡಿತ್ತು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು ಅವರು ಮಾತನಾಡುತ್ತಾ, ನರೇಂದ್ರ ಮೋದಿ ದೇಶದ ಸುಧೀರ್ಘ ಪ್ರಧಾನ ಮಂತ್ರಿಯಾಗಿ, ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಪಯಣ ೫೦ ವರ್ಷ ಪೂರೈಸಿದ ಪ್ರಯುಕ್ತ, ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕುಗಳ ೩೩ ಪಂಚಾಯಿತಿಗಳಲ್ಲಿ ನಮೋ ಬಿಎಸ್.ವೈ ಕ್ರಿಕೆಟ್ ಕಪ್ ಹೆಸರಿನಲ್ಲಿ ಯುವಕರಿಗೆ ಪ್ರೋತ್ಸಾಹ ವಿತರಣೆಯ ಉದ್ದೇಶದಿಂದ ಕ್ರಿಕೆಟ್ ಟೂರ್ನಿಯನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ೧೫ ಗ್ರಾಮ ಪಂಚಾಯತ್ ಮಟ್ಟದ ಟೂರ್ನಮೆಂಟ್ ಯಶಸ್ವಿಯಾಗಿ ನಡೆಸಲಾಗಿದೆ. ಅದರ ಮುಂದುವರಿದ ಭಾಗವಾಗಿ, ಇಂದಿನ ದಿನ ಯಲ್ಲಂಪಳ್ಳಿ ಗ್ರಾಮ ಪಂಚಾಯತ್ನಲ್ಲಿ ನಮೋ ಬಿ.ಎಸ್.ವೈ ಕ್ರಿಕೆಟ್ ಕಪ್-೨೦೨೬ನ್ನು ಆಯೋಜಿಸಲಾಗಿದೆ. ಇದನ್ನು ಕ್ರೀಡಾ ಆಸಕ್ತರು ಮತ್ತು ಯುವಕರು ಸದುಪಯೋಗ ಮಾಡಿಕೊಂಡುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ಮಂಡಲ ಅಧ್ಯಕ್ಷ ಆರ್. ಪ್ರತಾಪ್, ಮುಖಂಡರಾದ ಶ್ರೀನಿವಾಸ್ ಜಿನ್ನಿ, ಚಿಕ್ಕಪೂಜಪ್ಪ, ವೆಂಕಟೇಶ್, ಅಂಬರೀಶ್, ನಾಗ, ಮಂಜುನಾಥ, ಶ್ರೀನಿವಾಸ ಸೇರಿದಂತೆ ಯಲ್ಲಂಪಳ್ಳಿ ಪಂಚಾಯತ್ ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.























