
ಸಂಜೆ ವಾಣಿ ವಾರ್ತೆ
ಜಮಖಂಡಿ:ಡಿ.೧೩:ಗ್ರಾಮಗಳು ಕೆರೆ ಸಂರಕ್ಷಣೆ ನಮ್ಮೆಲ್ಲರ ಅತ್ಯವಶ್ಯ ಜವಾಬ್ದಾರಿ, ಕೆರೆ ಸಂರಕ್ಷಣೆಯಿAದ ಭೂಮಿಯ ಮೇಲಿನ ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಮನುಷ್ಯರಿಗೂ ಅನುಕೂಲಕರವಾಗಿದ್ದು, ಮುಂದಿನ ಜನಾಂಗದ ಪೀಳಿಗೆಗೆ ಅದನ್ನು ಸಂರಕ್ಷಣೆ ಮಾಡುವುದು ಮತ್ತು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ನಿರ್ದೇಶಕ ಚನ್ನಕೇಶವ ಕೆ ಅವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಜಮಖಂಡಿ ತಾಲೂಕು ವತಿಯಿಂದ ಹಾಗೂ ಶೂರ್ಪಲಿ ಗ್ರಾಮ ಪಂಚಾಯತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಇವರ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿದ ನಮ್ಮೂರು ನಮ್ಮ ಕೆರೆ ” ಕಾರ್ಯಕ್ರಮದಡಿಯಲ್ಲಿ ಕೆರೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪದ್ಮ ವಿಭೂಷಣ ಪರಮ ಪೂಜ್ಯ ಡಾ”ಡಿ ವೀರೇಂದ್ರ ಹೆಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ಕೆರೆ ಸಂರಕ್ಷಣೆಯ ಮೂಲಕ ರಾಜ್ಯದಲ್ಲಿ ಈಗಾಗಲೇ ೧೦೦೦ ಕೆರೆಗಳ ಕಾಮಗಾರಿ ಮಾಡಿ ಪುನಶೇತ್ವನ ಗೊಳಿಸಲಾಗಿದೆ . ಇದು ರಾಜ್ಯದಲ್ಲಿ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಿದ ಕಾರ್ಯಕ್ರಮವಾಗಿದೆ. ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ ನಿರಂತರ ೧೨ ವರ್ಷಗಳಲ್ಲಿ ೨೬ ಕೆರೆ ಕಾಮಗಾರಿ ಪೂರ್ಣಗೊಂಡಿರುತ್ತವೆ ಕೃಷಿ ಹಾಗೂ ಕೃಷಿಯೆತರ ಚಟುವಟಿಕೆಗಳಲ್ಲಿ ಬಹಳಷ್ಟು ಅಭಿವೃದ್ಧಿ ಮಾಡಿದ್ದರೆ ರೈತ ಬಾಂಧವರು ಗ್ರಾಮಸ್ತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ ಎಸ್ ಸಿಂಧೂರ ಮಾತನಾಡಿ ತಾಲ್ಲೂಕಿನಲ್ಲಿ ಸ್ವ ಸಹಾಯ ಸಂಘಗಳು ತಮ್ಮ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕುಗಳ ಮೂಲಕ ಪ್ರಗತಿನಿಧಿ ಪಡೆದು ಜೀವನ ಮಟ್ಟ ಸುದಾರಿಸಿಕೊಂಡಿದ್ದಾರೆ ಜೊತೆಗೆ ಯೋಜನೆ ಮೂಲಕ ಕೃಷಿ ಹಾಗೂ ಕೃಷಿಯೆತರ ಚಟುವಟಿಕೆಗಳಿಗೆ ಅನುದಾನ, ಮಾಶಾಸನ ಸೌಲಭ್ಯ, ಮಕ್ಕಳಿಗೆ ವೃತ್ತಿಪರ ಕೋರ್ಸ್ ಗಳಿಗೆ ಸುಜ್ಞಾನಿಧಿ ಕಾರ್ಯಕ್ರಮ ಹೀಗೆ ಅನೇಕ ಕಾರ್ಯಕ್ರಮ ಸೌಲಭ್ಯ ಪಡೆಯುವ ಮೂಲಕ ಮಹಿಳಾ ಶಕ್ತಿ ಮೂಲಕ ಇವತ್ತು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಶೂರ್ಪಲಿ ಸಾರ್ವಜನಿಕ ಕೆರೆ ಕಾಮಗಾರಿ ಕೆಲಸ ಪ್ರಾರಂಭ ಮಾಡಿ ಕೃಷಿ ಚಟುವಟಿಕೆಗೆ ಪ್ರಾಣಿ-ಪಕ್ಷಿ ದನ ಕರುಗಳಿಗೆ ಕುಡಿಯುವ ಯೋಜನೆ ಮಾಡಲು ಸಹಕಾರಿಯಾಗಿದ್ದಾರೆ ಎಂದರು.
ಪರಮಪೂಜ್ಯ ಡಾ” ಡಿ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆ ಯವರಿಗೆ ಗ್ರಾಮದ ಪರವಾಗಿ ಅಭಿನಂದನೆಗಳು ಸಲ್ಲಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ನಿಂಗಪ್ಪ ಜಿ ಮಾತನಾಡಿ ಯೋಜನೆಯ ಅನೇಕ ಕಾರ್ಯಕ್ರಮಗಳ ಹಾಗೂ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮ ಕುರಿತು ಪ್ರಾಸ್ತವಿಕ ಮಾತನಾಡಿದರು
ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಈಶ್ವರ್ ಕಲ್ಲೋಳಿ ಮಾತನಾಡಿ ಕೆರೆ ಕೆಲಸ ಪ್ರಾರಂಭದಿAದ ಕೆರೆ ಪೂರ್ಣಗೊಳ್ಳುವರಿಗೂ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶೇಕವ್ವ ನಾಟೆಕಾರ್,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ರಾಟೋಡ,ಠಿಞಠಿs ಅಧ್ಯಕ್ಷ ರಮೇಶ್ ಕಣಬೂರ,ಪಂಚಾಕ್ಷರಿ ಹಿರೇಮಠ,ಕೆರೆ ಸಮಿತಿ ಉಪಾಧ್ಯಕ್ಷ ಗಿರಿಮಲ್ಲಪ್ಪ ಜಮಖಂಡಿ,ಜನ ಜಾಗೃತಿ ಸದಸ್ಯ ಶ್ರೀಧರ್ ಕಣ್ಣೂರ್,ಗ್ರಾಮದ ಪ್ರಮುಖ ಕಲ್ಲಪ್ಪ ಬೋಳಲ,ರೈತರು ಗ್ರಾಮಸ್ಥರು ಸ್ವಸಹಾಯ ಸಂಘದ ಸದಸ್ಯರು ಇನ್ನಿತರರು ಇದ್ದರು.
ಕಾರ್ಯಕ್ರಮ ನಿರೂಪಣೆ ಸ್ವಾಗತ ಕೃಷಿ ಮೇಲ್ವಿಚಾರಕ ಚನ್ನಯ್ಯ ಎಸ್ ಹಿರೇಮಠ ನೆರವೇರಿಸಿದರು ಮೇಲ್ವಿಚಾರಕ ಅಶೋಕ್ ಃಒ ವಂದಿಸಿದರು
























